ಬಿಡಿಎ ಕಚೇರಿಯ - TopicsExpress



          

ಬಿಡಿಎ ಕಚೇರಿಯ ಸ್ಕ್ಯಾನಿಂಗ್ ರೂಂ ಗೆ ಹಾಕಲಾಗಿದ್ದ ಬೀಗವನ್ನು ಇದೀಗ ತೆಗೆಯಲಾಗಿದೆ. ಬೆಂಗಳೂರಿನ ಕುಮಾರಪಾರ್ಕ್ ನಲ್ಲಿರೋ ಬಿಡಿಎ ಕಚೇರಿಯ ಸ್ಕ್ಯಾನಿಂಗ್ ರೂಂ ಗೆ ಹೊರಗಿನಿಂದ ಬೀಗ ಹಾಕಿ ಸಿಬ್ಬಂದಿ ಒಳಗೆ ಕಡತ ವಿಲೇವಾರಿಯಲ್ಲಿ ತೊಡಗಿದ್ದ ಬಗ್ಗೆ ಟಿವಿ9 ವರದಿ ಪ್ರಸಾರ ಮಾಡಿತ್ತು. ಇತ್ತ ವರದಿ ಬಿತ್ತರವಾಗ್ತಿದ್ದ ಹಾಗೆ ಎಚ್ಚೆತ್ತ ಬಿಡಿಎ ಸಿಬ್ಬಂದಿ ಕಡೆಗೂ ಕೊಠಡಿ ಬೀಗ ತೆರೆದು ಕಾರ್ಯ ಆರಂಭಿಸಿದ್ದಾರೆ. ಇದೇ ವೇಳೆ, ಬಿಡಿಎ ಕಚೇರಿಗೆ ಜೆಡಿಎಸ್ ಕಾರ್ಪೋರೇಟರ್ ಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೆಡಿಎಸ್ ಕಾರ್ಪೊರೇಟರ್ ಗಳಾದ ಶ್ರೀನಿವಾಸ್, ಪ್ರಕಾಶ್, ಎ.ಎಂ.ಹನುಮಂತೇಗೌಡ, ಎಂ.ಬಿ.ಗೋವಿಂದೇಗೌಡ ಸೇರಿದಂತೆ ಜೆಡಿಎಸ್ ನ ಕೆಲವು ಸ್ಥಳೀಯ ನಾಯಕರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಷ್ಟೇ ಅಲ್ಲಾ ಬೀಗ ಹಾಕಿ ಕಾರ್ಯ ನಿರ್ವಹಣೆಯ ಹಿಂದಿನ ಉದ್ದೇಶವೇನು ಅನ್ನೋದನ್ನು ಇದೀಗ ನಾಯಕರು ಪ್ರಶ್ನಿಸ್ತಿದ್ದಾರೆ. ಬೆಂಗಳೂರಿನ ಕುಮಾರಪಾರ್ಕ್ ನಲ್ಲಿರೋ ಬಿಡಿಎ ಕಚೇರಿ ಸಿಬ್ಬಂದಿ ಅನುಮಾನಾಸ್ಪದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರೋದು ಬೆಳಕಿಗೆ ಬಂದಿತ್ತು. ಬಿಡಿಎ ಕಚೇರಿಯ 1 ನೇ ಮಹಡಿಯಲ್ಲಿರುವ ಸ್ಕ್ಯಾನಿಂಗ್ ರೂಂ ಗೆ ಸಿಬ್ಬಂದಿ ಬೀಗ ಹಾಕಿಕೊಂಡು ಕಡತಗಳಿಗೆ ಸೀಲ್ ಹಾಗೂ ನಂಬರ್ ಗಳನ್ನು ಹಾಕಿ ವಿಲೇವಾರಿಯಲ್ಲಿ ನಿರತವಾಗಿರೋದು ಹಲವು ಸಂಶಯಗಳನ್ನು ಹುಟ್ಟುಹಾಕಿತ್ತು. ಅಷ್ಟೇ ಅಲ್ಲಾ ಸ್ಕ್ಯಾನಿಂಗ್ ರೂಂ ಗೆ ಹೊರಗಿನಿಂದ ಬೀಗ ಹಾಕಿಕೊಂಡಿರೋ ಸಿಬ್ಬಂದಿ ಓರ್ವ ಪೊಲೀಸ್ ಪೇದೆಯನ್ನು ಭದ್ರತೆಗೆ ನಿಯೋಜಿಸಿರೋದು ಮತ್ತಷ್ಟು ಅನುಮಾನ ಹುಟ್ಟು ಹಾಕುವಂತೆ ಮಾಡಿತ್ತು ಈ ಬಗ್ಗೆ ಟಿವಿ9 ವಿಸ್ತೃತ ವರದಿಯನ್ನು ಬಿತ್ತರಿಸಿತ್ತು.
Posted on: Tue, 27 Jan 2015 16:46:59 +0000

Trending Topics



Recently Viewed Topics




© 2015