At least a Vajpayee, if not a Nehru : Transformational leaders - TopicsExpress



          

At least a Vajpayee, if not a Nehru : Transformational leaders will be judged not merely by the style of their speeches nut more by the substance of their actions - Jairam Ramesh (in his article in The Hindu, Aug 19, 2014) ಸ್ವಾಮಿ, ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲವೆಂಬಂತಾಯಿತಲ್ಲ ನಿಮ್ಮ ಪ್ರಲಾಪ. ನೆಹರೂರವರೊಂದಿಗೆ ವಾಜಪೇಯಿಯವರನ್ನು ಹೋಲಿಕೆ ಮಾಡಿ ಇನ್ನೂ ಯಾರನ್ನು ಮರುಳು ಮಾಡಲು ಹೊರಟಿದ್ದೀರಿ..?? ಎಲ್ಲಿಯ ನೆಹರು, ಎಲ್ಲಿಯ ವಾಜಪೇಯಿ. ಈ ಹೋಲಿಕೆಯನ್ನು ಕೇಳಿದರೆ ಚಿಕ್ಕಮಕ್ಕಳೂ ನಗುತ್ತಾರಷ್ಟೆ. ಇಂದು ಭ್ರಮೆಯ ಚಾದರವನ್ನು ಕೊಡವಿ ಎಲ್ಲರೂ ನಿದ್ದೆಯ ನಟನೆಯಿಂದ ಎದ್ದು ವಾಸ್ತವದ ಬೆಳಕಿನಲ್ಲಿ ಪೂರ್ತಿಯಾಗಿ ಕಣ್ಣುಬಿಟ್ಟಿದ್ದಾರೆ. ಇನ್ನು ಅರೆನಿದ್ದೆಗಣ್ಣೀನಲ್ಲಿ ಇರುವವರೆಂದರೆ ನಿಮ್ಮ ಸೆಕ್ಯುಲರ್ ಮಂದಿಗಳು ಮಾತ್ರವೇ. ಮೋದಿಯವರ ಸ್ವಾತಂತ್ರ್ಯೋತ್ಸವದ ದಿನದ ಭಾಷಣವನ್ನು ಟೀಕಿಸುವ ಭರದಲ್ಲಿ ಕಳೆದ ೧೦ ವರ್ಷಗಳಲ್ಲಿ ನಿಮ್ಮ ಯುಪಿಎ ಅದನ್ನು ಸಾಧಿಸಿದೆ, ಇದನ್ನು ಸಾಧಿಸಿದೆ ಎಂದು ಅಂಕೆ-ಸಂಖ್ಯೆ ತೋರಿಸುತ್ತಿರುವಿರಲ್ಲಾ, ಆ ಕೆಲಸವನ್ನು ಒಬ್ಬ ಸಂಖ್ಯಾಶಾಸ್ತ್ರದ ವಿದ್ಯಾರ್ಥಿ ಕೂಡ ಮಾಡಬಲ್ಲ. ಮಾಜಿ ಸಚಿವರಾದ ನೀವು ನಿಮ್ಮ ಸರ್ಕಾರದ ಯೋಜನೆಗಳ, ಸಾಧನೆಗಳ ಫಲಿತಾಂಶವೇನೆಂಬುದನ್ನು ನಿದರ್ಶನಗಳ ಮುಖಾಂತರ ತೋರಿಸಿ ನೋಡೋಣ. ಅಷ್ಟಕ್ಕೂ ಕಳೆದ ಮೇನಲ್ಲಿ ಮತದಾರ ಸುಮ್ಮನೇ ನಿಮ್ಮ ಪಕ್ಷಕ್ಕೆ ನಾಲ್ಕರ ಜೊತೆ ಮತ್ತೊಂದು ನಾಲ್ಕನ್ನು ಸೇರಿಸಿ ಮಂಗಳಾರತಿ ಮಾಡಿ ಪ್ರಸಾದದ ಗಂಟು ಕೊಡಲಿಲ್ಲ ಅಲ್ಲವೇ..?? ನಿಮ್ಮ ಸರ್ಕಾರದ ಸಾಧನೆಗಳಿಗೇ ದೊರಕಿದ್ದಲ್ಲವೇ..?? ಮೋದಿಯವರು ಭವಿಷ್ಯದ ಭಾರತದ ಕುರಿತು ಮಾತನಾಡಿದ್ದರೆ ನೀವೇಕೆ ಅದನ್ನು ಭೂತದ ಕನ್ನಡಕ ಹಾಕಿಕೊಂಡು ಅಳೆದು ತೂಗುತ್ತಿದ್ದೀರಿ..?? ಅಪ್ಪ ನೆಟ್ಟ ಆಲದ ಮರಕ್ಕೆ ನೇಣು ಹಾಕಿಕೊಳ್ಳುವ ಸಂಪ್ರದಾಯವನ್ನು ಬಿಡಲಾಗುವುದಿಲ್ಲ ಅಲ್ಲವೇ..?? ಯಾವ ಯಾವ ನಾಯಕರು ಏನೇನೆಲ್ಲಾ ಮಾತನಾಡಿದ್ದಾರೆ, ಹೇಗೆಲ್ಲಾ ನಡೆದುಕೊಂಡಿದ್ದಾರೆ ಎನ್ನುವುದೇನೂ ಗುಪ್ತರಹಸ್ಯವಲ್ಲ. ಹಾಡಿದ್ದೇ ಹಾಡು ಕಿಸಬಾಯಿ ದಾಸನೆಂಬಂತೆ ಒಬ್ಬರು ಹೇಳಿದ್ದನ್ನೇ ಇನ್ನೊಬ್ಬರು ಹೇಳುತ್ತಾ ವ್ಯರ್ಥ ಕಾಲಹರಣ ಮಾಡುತ್ತಿದ್ದೀರಿ ಅಷ್ಟೆ
Posted on: Tue, 19 Aug 2014 04:34:19 +0000

Trending Topics



Recently Viewed Topics




© 2015