Rock Hill auctioned as pasture land! (English translation is - TopicsExpress



          

Rock Hill auctioned as pasture land! (English translation is provided below) ಬಿ.ಜೆ.ಪಿ ಮತ್ತು ಜೆ.ಡಿ.ಎಸ್ ಪಕ್ಷಗಳ ಸಮ್ಮಿಶ್ರ ಸರ್ಕಾರ ತಮ್ಮ ಸ್ವಂತ ಲಾಭಕ್ಕೆ ಕರ್ನಾಟಕದ ಜನರನ್ನು ಹೇಗೆ ಮೂರ್ಖರನ್ನಾಗಿಸಿದೆ ಎನ್ನುವುದು ಮತ್ತೊಮ್ಮೆ ಬಯಲಾಗಿದೆ. ಈ ಎರಡು ಪಕ್ಷಗಳು ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರ ನಡೆಸುವಾಗ ಒಟ್ಟಿಗೆ ಸೇರಿ ಒಂದು ಏಕ ಶಿಲೆಯ ಬೆಟ್ಟವನ್ನು ಗೋಮಾಳದ ಭೂಮಿ ಎಂದು ನಿರ್ಧರಿಸಿ ಆ ಜಾಗವನ್ನು ಹರಾಜು ಹಾಕಿದ್ದಾರೆ. ಈಗ ಅದನ್ನು ಟಾಟಾ ಪ್ಯಾರಮೌಂಟ್ ಯೊಜನೆಗ ಬಳಸಲಾಗುತ್ತಿದೆ. ಕಾನೂನಿನ ಪ್ರಕಾರ ಇಂತಹ ಏಕ ಶಿಲೆಯಿಂದ ಕೂಡಿದ ಜಾಗ ತನ್ನ ನೈಸರ್ಗಿಕ ಸ್ವರೂಪದಲ್ಲೇ ಉಳಿಯಬೇಕಾಗಿತ್ತು ಮತ್ತು ಅದನ್ನು ಸರ್ಕಾರ ಹರಾಜು ಹಾಕುವಂತಿರಲಿಲ್ಲ. ರೆವೆನ್ಯೂ ದಾಖಲೆಗಳನ್ನು ತಮಗೆ ಬೇಕಾದಂತೆ ತಿದ್ದಿ, ಸರ್ಕಾರವು, ಈ 23 ಎಕರೆ ಮತ್ತು ಹತ್ತು ಗುಂಟದ ವಿಸ್ತಾರವಿರುವ ಕಲ್ಲಿನ (ಗ್ರಾನೈಟ್) ಬೆಟ್ಟವನ್ನು ನವೆಂಬರ್ 17 , 2006 ರಂದು ಸಿ. ರಾಮಯ್ಯ ರೆಡ್ಡಿ ಎನ್ನುವವರಿಗೆ 18 ಕೋಟಿ ರೂಗಳಿಗೆ ಹರಾಜಿನ ಮೂಲಕ ಮಾರಾಟ ಮಾಡಿದೆ. ಕರ್ನಾಟಕದಲ್ಲಿ ಹೀಗೆ ನಿರ್ಭಯವಾಗಿ, ನಿಸ್ಸಂಕೋಚವಾಗಿ ನಮ್ಮ ಸಂಪನ್ಮೂಲಗಳನ್ನು ಲೂಟಿ ಮಾಡಿರುವ, ಅದೇ ಸದಸ್ಯರಿಗೆ ಮತ್ತೆ ಮಣೆ ಹಾಕಿರುವ ಬಿ.ಜೆ.ಪಿ ಪಕ್ಷ, ದೇಶದಲ್ಲಿ ಭ್ರಷ್ಟಾಚಾರ ಮುಕ್ತ ಸರ್ಕಾರ ನಡೆಸುತ್ತೇವೆ ಎಂದು ಹೇಳಿಕೊಳ್ಳುವ ಧೈರ್ಯ ತೋರಿಸುತ್ತಿದೆ. ಇಷ್ಟೆಲ್ಲ ಆದಮೇಲೆ ಇವರು ನಂಬಿಕೆಗೆ ಅರ್ಹರು ಎಂದು ಯಾರು ಹೇಳಬಹುದು? ಇದೇ ಕೊನೆ. ಈ ಸುಳ್ಳು ವಾಗ್ದಾನಗಳನ್ನು ನಂಬಿ, ಲೂಟಿಗೊಳ್ಳುವುದನ್ನು ಸಾಕು ಮಾಡೋಣ goo.gl/h82KHZ BJP-JD(S) coalition has fooled the people of Karnataka for personal gain, yet again! They claimed a single hard granite rock to be pasture lands and have auctioned this land and now it is being used for the TATA Paramont project. As per law, this land was to be retained as it is in its natural state and should never be auctioned. 23 acres and 10 guntas of the rock hill was auctioned by the government on November 17, 2006 to C Ramaiah Reddy for Rs 18 crore using tampered revenue records. The authenticity of BJPs national claim that they will ensure a corruption free governance can be clearly seen in their audacity to present these very same BJP candidates in Karnataka who looted this land and its people off its resources and trust. Let this be the last time we allow them to. goo.gl/h82KHZ
Posted on: Tue, 08 Apr 2014 12:30:00 +0000

Trending Topics



Recently Viewed Topics




© 2015