Water Boating Conducted in Mangalore, Due to Deepavali Celebration - TopicsExpress



          

Water Boating Conducted in Mangalore, Due to Deepavali Celebration - TV9 ಬೆಳಕಿನ ಹಬ್ಬ ದೀಪಾವಳಿಯನ್ನ ಕಡಲಮಕ್ಕಳು ವಿಶೇಷವಾಗಿ ಆಚರಿಸಿದ್ರು. ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಹಾರವಾಡ ಗ್ರಾಮದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಗ್ರಾಮದ ಸಾಗರದೀಪ ಯುವಕ ಸಂಘದವರು ಕಡಲಿನಲ್ಲಿ ಕ್ರೀಡೆಗಳನ್ನ ಹಮ್ಮಿಕೊಂಡಿದ್ದರು. ಮೀನುಗಾರರೇ ಇರೋ ಈ ಗ್ರಾಮದಲ್ಲಿ ಪ್ರತಿನಿತ್ಯ ಮೀನುಗಾರಿಕೆಯಲ್ಲಿ ಎಲ್ಲರೂ ನಿರತರಾಗಿರುತ್ತಾರೆ. ಆದ್ರೆ ಹಬ್ಬದ ಪ್ರಯುಕ್ತ ತಮ್ಮ ದಿನನಿತ್ಯದ ಕೆಲಸದ ಮಧ್ಯೆ ಮೀನುಗಾರರು ಸ್ವಲ್ಪವಾದರೂ ಎಂಜಾಯ್ ಮಾಡ್ಲೀ ಅಂತಾ ಕಡಲಿನಲ್ಲಿ ದೋಣಿ ಸ್ಪರ್ಧೆ ಹಾಗೂ ಈಜಿನ ಸ್ಪರ್ಧೆಯನ್ನ ಹಮ್ಮಿಕೊಳ್ಳಲಾಗಿತ್ತು. ದೋಣಿ ಸ್ಪರ್ಧೆಯಲ್ಲಿ ಭಾಗವಹಿಸಿದ ಮೀನುಗಾರರು, ತಾ ಮುಂದು ನಾ ಮುಂದು ಎನ್ನುವಂತೆ ಕಡಲಿನಲ್ಲಿ ದೋಣಿಗನ್ನ ಓಡಿಸುವ ಮೂಲಕ ಸಖತ್ ಎಂಜಾಯ್ ಮಾಡಿದ್ರು. ಇನ್ನು ಫೈಬರ್ ಹಾಗೂ ಮರದ ದೋಣಿಗಳಿಗೆ ಪ್ರತ್ಯೇಕ ಸ್ಪರ್ಧೆಯನ್ನ ಆಯೋಜಿಸಲಾಗಿತ್ತು. ..
Posted on: Thu, 23 Oct 2014 08:02:53 +0000

Trending Topics



Recently Viewed Topics




© 2015