ಅವಳನ್ನು ಕೈಹಿಡಿದು ಒಳತಂದು - TopicsExpress



          

ಅವಳನ್ನು ಕೈಹಿಡಿದು ಒಳತಂದು ಟೇಬಲ್ ಮೇಲೆ ಮಲಗಿಸಿದೆ ಅವಳ ಒಂದೊಂದು ಅಂಗ ಚೆನಾಗಿದೆಯೆಂದು ಎತ್ತಿಟ್ಟು ಜೋಡಿಸಿದೆ ಅವಳ ಒಳಹೊರಗನ್ನೆಲ್ಲ ಜಾಲಾಡಿ ಹುಡುಕಿದೆ, ಅವಳ ಅಂಗಾಂಗಗಳ ಯಾವ ಮೂಲೆಯಲ್ಲೂ ಕಾಣಿಸಲಿಲ್ಲ ಪ್ರೀತಿ ನನಗೆ ಯಾರೋ ತಲೆಯ ಮೇಲೆ ಕುಟ್ಟಿ ಹೇಳಿದರು - , ಪೆದ್ದ, ಪ್ರೀತಿ ಎಂಬುದೊಂದು ಅಮೂರ್ತ ನಾಮಪದ ( Abstract Noun ) ಅದನ್ನು ಹಿಡಿಯಬೇಕೆಂದರೆ ಅವಳು ಇಡಿಯಾಗಿ ಸಿಗಬೇಕು ! ಮತ್ತೆ ಕೂತು ಅವಳನ್ನು ಜೋಡಿಸಿ ಪೂರ್ತಿ ಮಾಡಿದೆ, ಅವಳು ಎದ್ದು ಕುಳಿತು ಮುದ್ದಾಗಿ ನಕ್ಕಳು; ಅವಳ ನಗುವಿನಲ್ಲಿ ಹಿಡಿದೆ ಅವಳ ಕಣ್ಣುಗಳಲ್ಲಿ ಹಿಡಿದೆ, ಅವಳ ಉಸಿರಿನಲ್ಲಿ ಹಿಡಿದೆ ಅವಳ ಮೈತುಂಬ ಪ್ರೀತಿಯೇ ಪ್ರೀತಿ ಎಷ್ಟು ಮುಕ್ಕಿದರೂ ಖಾಲಿಯಾಗದಷ್ಟು ಪ್ರೀತಿ !!
Posted on: Mon, 15 Jul 2013 02:05:21 +0000

Trending Topics



Recently Viewed Topics




© 2015