ಎಂಎನ್‌ಆರ್‌ಇಜಿಎ ಯೋಜನೆಯ - TopicsExpress



          

ಎಂಎನ್‌ಆರ್‌ಇಜಿಎ ಯೋಜನೆಯ ಬಾಕಿ ಹಣ ಬಿಡುಗಡೆಗಾಗಿ ತಾಲೂಕಿನ ವಿವಿಧ ಸಂಘ ಸಂಸ್ಥೆಗಳು ಮತ್ತು ಕೂಲಿ ಕಾರ್ಮಿಕರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಸೆ.೨೪ ರಂದು ತುಮಕೂರಿನ ಜಿಪಂ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸತತವಾಗಿ ಬರಗಾಲಕ್ಕೀಡಾಗುತ್ತಿರುವ ಪಾವಗಡ ತಾಲೂಕಿನ ಜನತೆ ಬೆಳೆ ಇಲ್ಲದೆ ಜೀವನೋಪಾಯಕ್ಕಾಗಿ ನಗರಗಳತ್ತ ವಲಸೆ ಹೋಗುತ್ತಿದ್ದರೆ. ಕಳೆದ ೩ ವರ್ಷಗಳಿಂದ ಕೆಲಸ ನಿರ್ವಹಿಸಿರುವ ಕೂಲಿ ಕಾರ್ಮಿಕರಿಗೆ ಹಣ ಬಿಡುಗಡೆ ಮಾಡದಿರುವುದರಿಂದ ಆತ್ಮಹತ್ಯೆ ಮಾಡಿಕೊಳ್ಳುವುದೊಂದೇ ಬಾಕಿ ಎಂದು ಕಿಡಿ ಕಾರಿದ್ದಾರೆ. ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿದ ದಲಿತ ಸಂಘದ ಸಮಿತಿಯ ತಿಪ್ಪೇಸ್ವಾಮಿ, ತಾಲೂಕಿಗೆ ಸುಮಾರು ೩೨ ಕೋಟಿ ರೂ.ಗಳನ್ನು ಬಿಡುಗಡೆ ಮಾಡಬೇಕಾಗಿದೆ ಎಂದಿದ್ದಾರೆ. ಹೀಗಾಗಿ ಸೆ.೨೪ ರಂದು ಜಿಪಂ ಕಚೇರಿಗೆ ತಾಲೂಕಿನ ಹಲವಾರು ಸಂಘ ಸಂಸ್ಥೆಗಳು ಸಹಯೋಗದೊಂದಿಗೆ ಮುತ್ತಿಗೆ ಹಾಕಲಾಗುವುದೆಂದು ತಿಳಿಸಿದರು. ಮುತ್ತಿಗೆಯಲ್ಲಿ ಪಾವಗಡ ತಾಲೂಕು ಮಹಾತ್ಮಗಾಂಽಜೀ ಕೂಲಿ ಕಾರ್ಮಿಕರ ಹೋರಾಟ ವೇದಿಕೆ., ಮಹಾತ್ಮಗಾಂಽಜೀ ಸಮಾಜ ಸೇವೆ ಭ್ರಷ್ಟಾಚಾರ ನಿರ್ಮೂಲನೆ ವೇದಿಕೆ (ರಿ), ಕರ್ನಾಟಕ ದಲಿತ ಸಂಘರ್ಷ ಸಮಿತಿ ಪಾವಗಡ , ಜೀತ ವಿಮುಕ್ತಿ ಮತ್ತು ತಮಟೆ ಕಲಾವಿದರ ಒಕ್ಕೂಟ ಮತ್ತಿತರ ಸಂಘ ಸಂಸ್ಥೆಗಳು ಸೀಶಕ್ತಿ ಸಂಘಗಳು ಪಾಲ್ಗೊಳ್ಳಲಿವೆ. ತಾಲೂಕಿನ ಅಸಂಘಟಿತ ಕೂಲಿ ಕಾರ್ಮಿಕರು, ಸಾರ್ವಜನಿಕರು, ರೈತರು ಕೃಷಿ ಕಾರ್ಮಿಕರು ಪಾಲ್ಗೊಳ್ಳಬೇಕೆಂದು ತಿಳಿಸಿದ್ದಾರೆ. ********** ಈ ದಿನದ ಪ್ರಾಯೋಜಕರು: Systems Technology : ಸಿಸ್ಟಮ್ ಟೇಕ್ನಾಲಜಿ : ಮಂಡ್ಯ-ಮೈಸೂರು-ಹಾಸನ-ತುಮಕೂರು : 7259108417: Today Offer : Intel Processor2.6 Ghz, Ram 1GB, 160GB Hard Disk, DVD R/W, Mouse, TFT Monitor 15 Inch.. Offer Price : ಕೇವಲ 9999/- Only. Home Delivery (High Configuration ಕಂಪ್ಯೂಟರ್ ಗಳನ್ನು Assemble ಮಾಡಿಕೊಡಲಾಗುವುದು. ಎಲ್ಲಾ ಕಂಪ್ಯೂಟರ್ ಬಿಡಿಭಾಗಗಳ ಮೇಲೆ ಕಂಪನಿ ಆಧಾರದ ಮೇಲೆ 2 ವರ್ಷ ಅಥವಾ 3 ವರ್ಷ ಗ್ಯಾರಂಟಿ ಕೊಡಲಾಗುವುದು)
Posted on: Mon, 16 Sep 2013 11:39:15 +0000

Trending Topics



Recently Viewed Topics




© 2015