ಜಗತ್ತಿನಾದ್ಯಂತ - TopicsExpress



          

ಜಗತ್ತಿನಾದ್ಯಂತ ಜನಮನ್ನಣೆಗೆ ಪಾತ್ರವಾಗಿರುವ ಮೈಸೂರು ಸಿಲ್ಕ್ ಸೀರೆ, ಇದೀಗ ಮತ್ತಷ್ಟು ಹೆಸರುವಾಸಿಯಾಗುತ್ತಿದೆ. ಮೈಸೂರು ಸಿಲ್ಕ್ ಸ್ಯಾರಿ ಇನ್ಮುಂದೆ ಗಗನದಲ್ಲೂ ಜನರ ಗಮನ ಸೆಳೆಯಲಿದೆ. ಭಾರತೀಯ ವಿಮಾನಯಾನ ಸಂಸ್ಥೆ ಮೈಸೂರು ಸಿಲ್ಕ್ ಸೀರೆಯನ್ನು ಗಗನಸಖಿಯರ ಸಮವಸ್ತ್ರಕ್ಕಾಗಿ ಆಯ್ಕೆ ಮಾಡಿದೆ. ಅದಕ್ಕಾಗಿ ಭಾರತೀಯ ವಿಮಾನಯಾನ ಸಂಸ್ಥೆಯು ಕರ್ನಾಟಕ ರೇಷ್ಮೇ ಉದ್ಯಮಗಳ ನಿಗಮದ ಜೊತೆ ಒಪ್ಪಂದ ಮಾಡಿಕೊಂಡಿದೆ. ಹೀಗಾಗಲೇ 10 ಸಾವಿರ ಸೀರೆಗಳಿಗೆ ಬೇಡಿಕೆ ಸಲ್ಲಿಸಿದೆ. ಒಟ್ಟು 6.5 ಕೋಟಿ ಮೌಲ್ಯದ ಮೈಸೂರು ಸಿಲ್ಕ್ ರೇಷ್ಮೇ ಸೀರೆಗಳನ್ನು ಸಂಸ್ಥೆ ಖರೀದಿ ಮಾಡುತ್ತಿದೆ. ಇನ್ನು ಕೆಲವು ತಿಂಗಳುಗಳಲ್ಲಿ ಈ ಬೇಡಿಕೆಯನ್ನು ಪೂರೈಸಲಿದ್ದು ಇನ್ಮುಂದೆ ಏರ್ ಇಂಡಿಯಾದ ಗಗನಸಖಿಯರನ್ನು ಮೈಸೂರು ರೇಷ್ಮೇಯಲ್ಲಿ ಮಿಂಚುವುದನ್ನು ನೋಡಬಹುದಾಗಿದೆ.
Posted on: Fri, 02 Jan 2015 07:40:35 +0000

Trending Topics



Recently Viewed Topics




© 2015