ಟಿಕೆಟ್ ಖರೀದಿಸಲು ಬಂದ - TopicsExpress



          

ಟಿಕೆಟ್ ಖರೀದಿಸಲು ಬಂದ ಮಹಿಳೆಯೊಬ್ಬರೊಂದಿಗೆ ಕೌಂಟರ್ ಅಧಿಕಾರಿ ಅಸಭ್ಯವಾಗಿ ವರ್ತಿಸಿರುವ ಘಟನೆ ಮಂಡ್ಯದ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ. ರಾಜೇಶ್ ಎಂಬ ಅಧಿಕಾರಿ ಪ್ಯಾಂಟ್ ಬಿಚ್ಚುವ ಮೂಲಕ ಅನುಚಿತವಾಗಿ ನಡೆದುಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ. ಮಂಡ್ಯ ರೈಲ್ವೆ ನಿಲ್ದಾಣದ ಟಿಕೆಟ್ ಕೌಂಟರ್ಗೆ ಆಗಮಿಸಿದ್ದ ಮಹಿಳೆಯರು, ಬೆಂಗಳೂರಿಗೆ 2 ಟಿಕೆಟ್ ಹಾಗೂ ಶಿವಮೊಗ್ಗಕ್ಕೆ 1 ಟಿಕೆಟ್ ಕೇಳಿದ್ದಾರೆ. ಆದ್ರೆ, ಕೌಂಟರ್ನಲ್ಲಿದ್ದ ರಾಜೇಶ್, ಶಿವಮೊಗ್ಗದ 3 ಟಿಕೆಟ್ ನೀಡಿದ್ದಾನೆ. ಇದನ್ನ ಪ್ರಶ್ನಿಸಿದ ಮಹಿಳೆಯರಿಗೆ, ಉಡಾಫೆ ಉತ್ತರ ನೀಡಿದ್ದಾನೆ. ಬೆಂಗಳೂರಿಗೆ ಹೋಗಿ, ಅಲ್ಲಿ ಶಿವಮೊಗ್ಗಕ್ಕೆ ಹೋಗುವವರಿಗೆ ಟಿಕೆಟ್ ಮಾರಾಟ ಮಾಡಿ ಅಂತ ಹೇಳಿದ್ದಾನೆ ಅಂತ ಮಹಿಳೆ ಆರೋಪಿಸಿದ್ದಾರೆ. ಇನ್ನು, ಅಷ್ಟರೊಳಗೆ ರೈಲು ಬಂದಿದ್ದು, ಓರ್ವ ಮಹಿಳೆ ರೈಲು ಹತ್ತಿಕೊಂಡು ಹೋಗಿದ್ದಾರೆ. ಮತ್ತೊಬ್ಬ ಮಹಿಳೆ, ಟಿಕೆಟ್ ನೀಡಿದ್ದ ರಾಜೇಶ್ನನ್ನ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಕೋಪಗೊಂಡ ರಾಜೇಶ್, ಮಹಿಳೆಯನ್ನ ಅವಾಚ್ಯ ಶಬ್ಧಗಳಿಂದ ನಿಂದಿಸಿ, ತನ್ನ ಪ್ಯಾಂಟ್ನ ಜಿಪ್ ಬಿಚ್ಚಿ ಅಶ್ಲೀಲವಾಗಿ ನಿಂದಿಸಿದ್ದಾನೆ ಅಂತ ಮಹಿಳೆ ಆರೋಪಿಸಿದ್ದಾರೆ. ಇದನ್ನ ಕಂಡ ಸಾರ್ವಜನಿಕರು, ಆತನ ಕೌಂಟರ್ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಸಾರ್ವಜನಿಕರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ. ನಂತ್ರ, ರೈಲ್ವೆ ಅಧಿಕಾರಿಗಳು, ರಾಜೇಶ್ನನ್ನ ಕೌಂಟರ್ನಿಂದ ಹೊರಕ್ಕೆ ಬಂದು ಕ್ಷಮೆ ಯಾಚಿಸುವಂತೆ ತಾಕೀತು ಮಾಡಿದ್ದಾರೆ. ಆದ್ರೆ ರಾಜೇಶ್ ಮಾತ್ರ, ಕೌಂಟರ್ನೊಳಗಿನಿಂದಲೇ ಕ್ಷಮೆ ಕೇಳಿದ್ದಾನೆ.
Posted on: Fri, 28 Nov 2014 06:47:12 +0000

Trending Topics



Recently Viewed Topics




© 2015