ಡಿಸೆಂಬರ್ ಮೊದಲ ಭಾನುವಾರದ - TopicsExpress



          

ಡಿಸೆಂಬರ್ ಮೊದಲ ಭಾನುವಾರದ (ಡಿಸೆಂಬರ್ 7) ರಸಪ್ರಶ್ನೆ ಸ್ಪರ್ಧೆಗೆ ಕೊಟ್ಟ 25 ಪ್ರಶ್ನೆಗಳು: 1. ಈ ಕೆಳಕಂಡವುಗಳಲ್ಲಿ ಸೇನೆಗೆ ಸಮರ್ಪಿತ ದೇಶದ ಮೊದಲ ಉಪಗ್ರಹ ಯಾವುದು? A. GSAT-1 B. GSAT-7 ● C. GSAT-8 D. GSAT-12 ◇◆◇◆◇◆◇◆◇◆◇◆ 2. ವಾಲಿಬಾಲ್, ಬ್ಯಾಸ್ಕೇಟ್ ಬಾಲ್ ಹಾಗೂ ಬೇಸ್ಬಾಲ್ ಆಟದಲ್ಲಿ ಒಂದೊಂದು ತಂಡದಲ್ಲಿ ತಲಾ ಎಷ್ಟು ಜನ ಆಟಗಾರರಿರುತ್ತಾರೆ? A. 5, 6, 9 B. 6, 9, 5 C. 6, 5, 9 ● D. 9, 5, 6 ◇◆◇◆◇◆◇◆◇◆◇◆ 3. ಈ ಕೆಳಕಂಡವರಲ್ಲಿ ಮೊಘಲ್ ಸಾಮ್ರಾಟ ಅಕ್ಬರನ ಆಸ್ಥಾನ ಕವಿ ಯಾರಾಗಿದ್ದರು? A. ಬಾಣಬಟ್ಟ B. ಅಬುಲ್ ಫಜಲ್ ● C. ಫಿರ್ದೌಸಿ D. ಕಾಲಿದಾಸ್ ◇◆◇◆◇◆◇◆◇◆◇◆ 4. ಗಡಿನಾಡ ಗಾಂಧಿ ಖಾನ್ ಅಬ್ದುಲ್ ಗಫಾರ್ ಖಾನ್ ಅವರು ಪಠಾಣರ ಒಂದು ಪಾರ್ಟಿ ಸ್ಥಾಪನೆ ಮಾಡಿದ್ದರು. ಅದರ ಹೆಸರೇನು? A. ಖುದಾಯಿ ಹಿಮ್ಮತ್ವಾಲೆ B. ಖುದಾಯಿ ಖಿದ್ಮತ್ಗಾರ್ ● C. ಜಮಾತ್-ಎ-ಖುದಾಯಿ D. ಖಿದ್ಮತ್ ಎ ಖುದಾಯಿ ◇◆◇◆◇◆◇◆◇◆◇◆ 5. ರಬ್ಬರನ್ನು ಗಡಸುಗೊಳಿಸಲು ಕೆಳಕಂಡ ಯಾವ ಪದಾರ್ಥವನ್ನು ಮಿಶ್ರಣಗೊಳಿಸಲಾಗುತ್ತದೆ ? A. ರಂಜಕ B. ಗಂಧಕ ● C. ಪಾದರಸ D. ಗ್ಲಿಸರಿನ್ ◇◆◇◆◇◆◇◆◇◆◇◆ 6. ಸದನದ ಒಟ್ಟು ಸದಸ್ಯರ ಪೈಕಿ ಶೇಕಡಾ 15ರಷ್ಟು ಮಾತ್ರ ಮಂತ್ರಿಗಳ ಸಂಖ್ಯೆ ಇರಬೇಕೆಂದು ಸಂವಿಧಾನದ ಯಾವ ತಿದ್ದುಪಡಿಯ ಮುಖಾಂತರ ಸೀಮಿತಗೊಳಿಸಲಾಯಿತು? A. 90ನೇ ತಿದ್ದುಪಡಿ B. 91ನೇ ತಿದ್ದುಪಡಿ ● C. 92ನೇ ತಿದ್ದುಪಡಿ D. 93ನೇ ತಿದ್ದುಪಡಿ ◇◆◇◆◇◆◇◆◇◆◇◆ 7. A = 1, B = 3, C = 5... ಇದೇ ಕ್ರಮವನ್ನು ಹೀಗೆಯೇ ಮುಂದುವರಿಸಿಕೊಂಡು ಹೋದಲ್ಲಿ MAIZE ಶಬ್ದವನ್ನು ಅಂಕಿಗಳಲ್ಲಿ ಹೇಗೆ ಬರೆಯಬಹುದು? A. 79 B. 86 C. 99 D. 103 ● ◇◆◇◆◇◆◇◆◇◆◇◆ 8. ಕೆಯಿಬುಲ್ ಲೆಮ್ಚಾವೊ ವಿಶ್ವದ ಏಕೈಕ ತೇಲುವ ರಾಷ್ಟ್ರೀಯ ಉದ್ಯಾನವಾಗಿದೆ. ಇದು ಯಾವ ರಾಜ್ಯದಲ್ಲಿದೆ? A. ತ್ರಿಪುರಾ B. ಮಣಿಪುರ ● C. ಸಿಕ್ಕಿಂ D. ನಾಗಾಲ್ಯಾಂಡ್ ◇◆◇◆◇◆◇◆◇◆◇◆ 9. ಮಾನವ ವಿಕಾಸ ಸೂಚ್ಯಂಕ (HDI) ಕಂಡುಕೊಳ್ಳಲು ಕೆಳಕಂಡ ಯಾವುದನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ? A. ಆದಾಯ ಮಟ್ಟ ● B. ಆರೋಗ್ಯ ● C. ಶಿಕ್ಷಣ ● D. ನಾಗರಿಕತೆ ◇◆◇◆◇◆◇◆◇◆◇◆ 10. ಭಾರತದ ಹಸಿರು ಕ್ರಾಂತಿ ಕೆಳಕಂಡ ಯಾವ ಬೆಳೆಗಳಿಗಾಗಿ ಹೆಚ್ಚು ಯಶಸ್ವಿಯಾಯಿತು? A. ಭತ್ತ ಮತ್ತು ಕಡಲೆ B. ರಾಗಿ ಮತ್ತು ಜೋಳ C. ಗೋದಿ ಮತ್ತು ಭತ್ತ ● D. ಗೋದಿ ಮತ್ತು ಎಣ್ಣೆಕಾಳುಗಳು ◇◆◇◆◇◆◇◆◇◆◇◆ 11. ಸೆಪ್ಟೆಂಬರ್ 25 ರಂದು ಜಾರಿಗೆ ಬಂದ ಮೇಕ್ ಇನ್ ಇಂಡಿಯಾದ ಚಿಹ್ನೆ ಯಾವುದು? A. ಆನೆ B. ಹುಲಿ C. ಸಿಂಹ ● D. ಚಿರತೆ ◇◆◇◆◇◆◇◆◇◆◇◆ 12. ಚಿನ್ನ ಮತ್ತು ವಜ್ರದ ಗಣಿಗಳಿಗಾಗಿ ಪ್ರಸಿದ್ಧವಾಗಿರುವ ಕಿಂಬರ್ಲಿ ಯಾವ ದೇಶದಲ್ಲಿದೆ? A. ಕೆನಡಾ B. ಆಸ್ಟ್ರೇಲಿಯಾ C. ದಕ್ಷಿಣ ಆಫ್ರಿಕಾ ● D. ಫ್ರಾನ್ಸ್ ◇◆◇◆◇◆◇◆◇◆◇◆ 13. WYSIWYG ಇದರ ವಿಸ್ತಾರಾರ್ಥ ಏನು? A. What You See Is What You Get ● B. What You Sit Is Where You Get C. What You See Is Where You Get D. What You Show Is What You Get ◇◆◇◆◇◆◇◆◇◆◇◆ 14. 1945ರಲ್ಲಿ ಆಝಾದ್ ಹಿಂದ್ ಫೌಜ್ ವಿರುದ್ಧ ಕೆಳಕಂಡ ಯಾವ ಸ್ಥಳದಲ್ಲಿ ಮೊಕದ್ದಮೆ ನಡೆಯಿತು? A. ವಿಕ್ಟೋರಿಯಾ ಹಾಲ್, ಶಿಮ್ಲಾ B. ಗೇಟ್ವೇ ಆಫ್ ಇಂಡಿಯಾ, ಮುಂಬೈ C. ವೈಸ್ರಾಯ್ ನಿವಾಸ, ಶಿಮ್ಲಾ D. ಕೆಂಪುಕೋಟೆ, ದೆಹಲಿ ● ◇◆◇◆◇◆◇◆◇◆◇◆ 15. ಅಂತರಂಗ - ಬಹಿರಂಗ ಇದು ಯಾರ ಅಂಕಣವಾಗಿತ್ತು? A. ಕೆ. ಶಾಮರಾವ್ B. ಖಾದ್ರಿ ಶಾಮಣ್ಣ C. ಸಂತೋಷಕುಮಾರ ಗುಲ್ವಾಡಿ ● D. ಟಿಯೆಸ್ಸಾರ್ ◇◆◇◆◇◆◇◆◇◆◇◆ 16. ಬ್ಲೂಟೂಥ್ ಕೆಳಕಂಡ ಯಾವ ಕಂಪನಿಯ ಆವಿಷ್ಕಾರವಾಗಿದೆ? A. ಮೈಕ್ರೊಸಾಫ್ಟ್ B. ಆಪಲ್ C. ಎರಿಕ್ಸನ್ ● D. ಎಚ್.ಪಿ. ◇◆◇◆◇◆◇◆◇◆◇◆ 17. ಕ್ರಯೋಜೆನಿಕ್ ಎಂಜಿನ್ನ್ನು ಕೆಳಕಂಡ ಯಾವುದರಲ್ಲಿ ಬಳಸಲಾಗುತ್ತದೆ? A. ರಾಕೆಟ್ ತಂತ್ರಜ್ಞಾನ ● B. ಸಬ್ಮೆರಿನ್ಸ್ C. ಸುಪರ್ ಕಂಡಕ್ಟರ್ಸ್ D. ಡೀಪ್ ಫ್ರೀಜರ್ಸ್ ◇◆◇◆◇◆◇◆◇◆◇◆ 18. ನಮ್ಮೊಳಗೊಬ್ಬ ನಾಜೂಕಯ್ಯ ಇದು ಯಾರು ಬರೆದ ನಾಟಕವಾಗಿದೆ? A. ಪರ್ವತವಾಣಿ B. ಪ್ರಸನ್ನ C. ಟಿ.ಎನ್. ಸೀತಾರಾಂ ● D. ಜಿ. ಬಿ. ಜೋಷಿ ◇◆◇◆◇◆◇◆◇◆◇◆ 19. ಸರಿಯಾದ ಕ್ರಮದಲ್ಲಿ ಬರೆಯಿರಿ. A. MB
Posted on: Sun, 07 Dec 2014 15:00:01 +0000

Recently Viewed Topics




© 2015