ತಡರಾತ್ರಿ ಕಾರ್ಯಾಚರಣೆ - TopicsExpress



          

ತಡರಾತ್ರಿ ಕಾರ್ಯಾಚರಣೆ ನಡೆಸಿದ ಬೆಂಗಳೂರು ಸಂಚಾರಿ ಪೊಲೀಸರು 2,500 ಆಟೋಗಳನ್ನ ಜಪ್ತಿ ಮಾಡಿದ್ದಾರೆ. ಅಧಿಕ ಹಣ ಕೇಳಿದ ಮತ್ತು ಪ್ರಯಾಣಿಕರ ಸೇವೆಗೆ ನಿರಾಕರಿಸಿದ ಆಟೋಗಳನ್ನ ಜಪ್ತಿ ಮಾಡ್ಲಾಗಿದೆ. ಪೂರ್ವ ವಲಯ ಡಿಸಿಪಿ ಬಾಬುರಾಜೇಂದ್ರ ಪ್ರಸಾದ್, ಪಶ್ಚಿಮ ಡಿಸಿಪಿ ಗಿರೀಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆಟೋ ಚಾಲಕರಿಗೆ ಬಿಸಿ ಮುಟ್ಟಿಸಿದ್ದಾರೆ. ತಡರಾತ್ರಿ ಮಫ್ತಿಯಲ್ಲಿ ಆಟೋ ಹತ್ತಿದ ಪೊಲೀಸರು ಅಧಿಕ ಹಣ ಕೇಳಿದ ಹಾಗೂ ಪ್ರಯಾಣಿಕರ ಸೇವೆಗೆ ನಿರಾಕರಿಸಿದ ಆಟೋಗಳನ್ನ ಪೊಲೀಸರು ಜಪ್ತಿ ಮಾಡಿದ್ದಾರೆ. ಅಲ್ಲದೆ ಆಟೋ ಪರವಾನಗಿ ರದ್ದುಗೊಳಿಸುವಂತೆ ಆರ್ ಟಿಓಗೆ ಆದೇಶ ಮಾಡಿದ್ದಾರೆ. ಟ್ವಿಟ್ಟರ್ ನಲ್ಲಿ ದೂರು ಬಂದ ಹಿನ್ನೆಲೆಯಲ್ಲಿ ಪೊಲೀಸರು ಈ ಕಾರ್ಯಾಚರಣೆ ನಡೆಸಲಾಗಿತ್ತು. ಇನ್ನು 2500 ಆಟೋಗಳ ಜಪ್ತಿ ಜೊತೆಗೆ ಸಮವಸ್ತ್ರ ಧರಿಸದ ಚಾಲಕರಿಗೆ ದಂಡ ವಿಧಿಸಿ ಎಚ್ಚರಿಕೆ ನೀಡಿದ್ದಾರೆ.
Posted on: Mon, 22 Dec 2014 08:24:19 +0000

Trending Topics



Recently Viewed Topics




© 2015