ನಾವು ಸ್ಕೂಲಲ್ಲಿ ಎಷ್ಟೋಂದು - TopicsExpress



          

ನಾವು ಸ್ಕೂಲಲ್ಲಿ ಎಷ್ಟೋಂದು ಓದ್ತೀವಿ, ಕಾಲೇಜಲ್ಲಿ ಏನೆಲ್ಲಾ ಕಲಿತೀವಿ..ಆದ್ರೆ ಎಷ್ಟನ್ನ practical ಆಗಿ ಬಳ್ಸ್ಕೊತೀವಿ ಹೇಳಿ ?? ಅವುಗಳ ಬಳಕೆ ಮತ್ತು applications ಬಗ್ಗೆ ಯಾವತ್ತಾದ್ರು ಯೋಚನೆ ಮಾಡಿದೀವಾ ?? water ನ properties ಬಗ್ಗೆ ಓದಿದೀವಿ ಆದ್ರೆ surface tension, capillary actionನ ಬಳಕೆಯ ಬಗ್ಗೆ ಎಷ್ಟು ಗೊತ್ತಿದೆ ನಮಗೆ .. Historyಲಿ ಯುದ್ಧ ಆಯ್ತು, ಆ ರಾಜ ಹೀಗೆಲ್ಲ ಮಾಡಿದ್ದ ಅಂತ ತಿಳ್ಕೊಂಡ್ದ್ವಿ ಆದ್ರೆ ಯಾಕ್ ತಿಳ್ಕೊಂಡ್ವಿ, ಅದ್ರಿಂದ ಏನ್ ತಿಳ್ಕೊಂಡ್ವಿ ಅನ್ನೋದಕ್ಕೆ ನಮ್ಮ ಹತ್ರ ಉತ್ತರ ಸಿಕ್ಕೊದು ತುಂಬಾ ಕಡಿಮೆ. ಗಾಂಧೀಜಿ ಬಗ್ಗೆ ಓದಿದೀವಿ ಅಲ್ವಾ, ಆದ್ರೆ ಅವ್ರಲ್ಲಿ ಇದ್ದ leadership qualitiesಗಳನ್ನ ನಮ್ಮ್ lifeಅಲ್ಲಿ ಅಳವಡಿಸಿಕೊಂಡಿದೀವಾ ??? ನಾವು leader ಆಗ್ಬೇಕು ಅಂತ ಯಾವತ್ತಾದ್ರು ಯೋಚನೆ ಮಾಡಿದೀವಾ ?? ನಾವು ಶಾಲೆಗೆ ಸೇರ್ದಾಗಿಂದ ಮುಗಿಯೋವರೆಗು ಓದಿದ್ದು question paper ಅಲ್ಲಿ ಕೊಡೋ ೨ ಮಾರ್ಕ್ಸ್ ಗಾಗಿ ಮಾತ್ರ .. ನಮ್ಮಲ್ಲಿ ಎಷ್ಟೋ ಜನ ಇಂಜಿನೀಯರುಗಳು ಇದೀವಿ, ಅದ್ರಲ್ಲಿ ಎಷ್ಟ್ ಜನ newton’s second law ನೆನ್ಪಿಡ್ಕೊಂಡಿದೀವಿ ??!!Projectile, circular motion ಅಂತ ಎಲ್ಲಾ ಓದಿದ್ವಿ, ಆದ್ರೆ ಮೋಷನ್ ಅಂತ ಮಾತಡೋದು ಹೊಟ್ಟೆ ಕೆಟ್ಟಾಗ ಮಾತ್ರ !!! ಎದ್ದು ಬಿದ್ದು calculus, algebra ಕಲಿತ್ರೂ ಈಗ ಅದ್ರ ಗಂಧ ಗಾಳೀನು ಗೊತ್ತಿಲ್ಲ !!ರಟ್ ಹೊಡೆದು history, economics, civics ಸಹ ತೀಳ್ಕೊಂಡ್ವಿ .. ಇಷ್ತ್ಟೆಲ್ಲ ಓದಿದ್ದು examನ next dayನೆ ಮರೆತು ಹೋಗಿದೀವಿ ಅಲ್ವಾ?? ನೆನ್ಪ್ ಇಡ್ಕೊಂಡಿದ್ರು ಅದನ್ನ ಎಷ್ಟರ ಮಟ್ಟಿಗೆ ಉಪಯೋಗಿಸ್ತಿದೀವಿ ??? ಸೈನ್ಸ್ ಅಂದ್ರೆ space science, nuclear technology, quantum physics ಅಷ್ಟೇ ಅಲ್ಲ .. ನಮ್ಮ ದಿನ ನಿತ್ಯ ಬದುಕೋ ಒಂದೊಂದು ವಸ್ತುನಲ್ಲು ಸೈನ್ಸ್ ಇದೆ.. ಆದ್ರೆ ನಾವು ಅದರ ಬಗ್ಗೆ ವಿಚಾರಾನೇ ಮಾಡಲ್ಲ .. ಉದಾಹರಣೆಗೆ ಭಾರತದಲ್ಲಿ micro wave oven ಅಡಿಗೆ ಮನೆಯ ಬಳಕೆಗಿಂತ ಷೋಕೇಸ ಪೀಸ್ ಆಗಿರೋದೇ ಹೆಚ್ಚು, ಆದ್ರೆ ಎಲ್ಲರ ಮನೆಲ್ಲೂ ಉಪಯೋಗಿಸೋದು ಸುಂಯ್ಯ್ ಅನ್ನೊ ಹಳೆ ಟೆಕ್ನಾಲಜಿಯ ಕುಕ್ಕರ್ರನ್ನೆ.. ಆದ್ರೆ ಅದು ಆಗಿನ ಕಾಲ, ಸದ್ಯದ ಪರಿಸ್ಥಿತಿನೆ ಬೇರೆ .. ಶಿಕ್ಷಣ ವ್ಯವಸ್ಥೆ ತುಂಬಾ ಬದಲಾಗಿದೆ ಆದ್ರೆ ದೃಷ್ಠಿಕೋನ ಬದಲಾಗಿಲ್ಲ ಇನ್ನು ಹಳೇ ಕುಕ್ಕರ್ technologyಲೆ ಇದೀವಿ .. ಇನ್ನು ಸಹ ಕಷ್ಟಪಟ್ಟು English keyboardಅನ್ನೆ use ಮಾಡ್ತೀವಿ ಕನ್ನಡ ಬರಿಯೋಕೆ .. J ಇದನ್ನ change ಮಾಡೋಕೆ science ಬಾಲ ಹಿಡ್ಕೋಂಡು ಅದನ್ನ ನಮ್ಮ ಜೀವನಕ್ಕೆ ಅಳುವಡಿಸೋದು ತುಂಬಾ ಮುಖ್ಯ .. ಸೈನ್ಸ್ ಅಂದ್ರೆ ನಮ್ಮ ಅರ್ಥದಲ್ಲಿ laws, theory, theorem, formula ಅಂತಾನೇ ಅನ್ಕೋಂಡಿದೀವಿ .. scienceನ ನಿಜವಾದ ಅರ್ಥ knowledge. (en.wikipedia.org/wiki/Science).ಅದಲ್ದೆ ಸೈನ್ಸ್, ನಮ್ಮ ನೈಜ ಜಗತ್ತನ್ನು ವೀಕ್ಷಿಸೋ ಇನ್ನೊಂದು ದೃಷ್ಠಿಕೋನ .. ಮೊನ್ನೆ ಖ್ಯಾತ ಶಿಕ್ಷಣ ತಜ್ಞರು ಮತ್ತು ಸಂವಾಹಕರು ಆದ ಎಚ್ ಆರ್ ರಾಮಕೃಷ್ಣರಾವ್ ಅವರನ್ನು ಕಂಡಾಗ ಅವರು ಹೇಳಿದ್ದಿಷ್ಟು “ವಿಜ್ಞಾನವೆಂದರೆ ಒಮ್ಮೆ ಯಾರೋ ಕಂಡು ಕೊಂಡ ಸತ್ಯವಲ್ಲ, ಅದು ಬದಲಾಗದ ನಂಬಿಕೆಯಲ್ಲ, ನಿರಂತರವಾಗಿ ಪರಿಷ್ಕಾರಗೊಳ್ಳುವ ಜೀವಂತ ಚಿಂತನೆಯ ಫ಼ಲ, ನಿರಂತರ ಹುಡುಕಾಟ, ಯಾರೊಬ್ಬೊರ ಸ್ವತ್ತಲ್ಲ”
Posted on: Wed, 05 Nov 2014 12:00:33 +0000

Trending Topics



ass="stbody" style="min-height:30px;">
Celebrating the life of dear Marilynn Mobley, aka Sister Tater:

Recently Viewed Topics




© 2015