•••••ನಿಮಗೆ ನೀವೇ ಸರಿಯಾದ - TopicsExpress



          

•••••ನಿಮಗೆ ನೀವೇ ಸರಿಯಾದ ಗುರು••••• ಗುರು ಪದದ ಅರ್ಥ.......!!!! ಗು := ಅಂಧಕಾರ ರು:= ಹೋಗಲಾಡಿಸುವವನು ವಿದ್ಯೆ.,ಬದುಕಿನ ಪಾಠ ಹೇಳಿಕೊಡುವ ಗುರುಹಿರಿಯರು ಅನೇಕರಾದರೆ.., ತನ್ನೊಳಗಿನ ಅಂಧಕಾರವನ್ನು [[ ಸರಿ ತಪ್ಪುಗಳು.,ಮದ ಮಾತ್ಸರ್ಯಗಳು,,ಮೇಲು ಕೀಳು ಭಾವನೆ.,ಇತ್ಯಾದಿ]] ತೊಲಗಿಸುವಲ್ಲಿ ••ನಮಗೆ ನಾವೇ•• ಸರಿಯಾದ ಗುರುವಾಗಬಲ್ಲೆವು.. ಪ್ರತಿಯೊಬ್ಬನೂ ತನ್ನ ಸಾವಿನ ನಂತರವೂ ಜೊತೆಗೇ ಕರೆದು ಕೊಂಡುಹೋಗುವ ಸಾವಿರ ಸಾವಿರ ತಪ್ಪುಗಳನ್ನು ಒಮ್ಮೆಯಾದರೂ ಒಂದು ಹಾಳೆಯಲ್ಲಿ ಬರೆದು ., ಎಲ್ಲವನ್ನೂ ಓದಿಕೊಂಡುಬಿಟ್ಟರೇ ಸಾಕು••••!!!! ಖಂಡಿತವಾಗಲೂ 60 ಶೆಕಡಾ ತಿದ್ದಿಕೊಂಡುಬಿಡುತ್ತೇವೆ.....!!! [[ಖಂಡಿತವಾಗಲೂ ಇದನ್ನು ಓದಿ ಸುಮ್ಮನಾಗದೇ ಯಾರಾದರೂ ಪ್ರಯತ್ನಿಸಿ ನೋಡಿ.,ಮೊದಲಿಗೆ pen.,ಹಾಳೆ ಹಿಡಿದು ಕೂರಲೂ ಅಗದು.,ಕೂತರೂ ನಮ್ಮ ಬಹಳಷ್ಟು ತಪ್ಪುಗಳನ್ನೂ ಬರೆಯಲೂ ಮನಸ್ಸು ಬರುವುದಿಲ್ಲಾ(ಇಷ್ಟಾದರೇ ನಿಮ್ಮ ತಪ್ಪಿನ ಅರಿವಾಗಿದೆ ಎಂದರ್ಥ...,)ಬರೆದರೂ ಕೆಲವನ್ನು ಓದಲೂ ಅಸಯ್ಯವಾಗುತ್ತವೆ]] [[ತಪ್ಪು ಮಾಡದ ಜೀವಿಯಿಲ್ಲ.,ಎಂಥದ್ದೇ ಘೋರಾತಿಘೋರ ತಪ್ಪಾದರೂ ಅಂಥದ್ದನ್ನು ನಮ್ಮಂತ ಕೋಟಿ ಮಂದಿ ಮಾಡಿರುತ್ತಾರೆ...]] ಸಾಧ್ಯವಾದಷ್ಟು ನಮ್ಮನ್ನು ನಾವು ತಿದ್ದಿಕೊಂಡರೇ., ಅದೇ ನಿಜವಾದ ART OF LIVING... ಪ್ರತಿಯೊಬ್ಬನಲ್ಲೂ ಅವನನ್ನು ತಿದ್ದಿ ತೀಡಬಲ್ಲ ಗುರುವಿದ್ದಾನೆ... ಇಂದಿನ ಗುರುವಂದನೆ ಅವನಿಗೂ ಸಲ್ಲಲೇಬೇಕು....!!!! ಕೊನೆಯದಾಗಿ., •••••ಕಲ್ಲಾಗಬೇಡಿ...,ಶಿಲ್ಪಿಗಾಗಿ ಕಾಯಬೇಕಾಗುತ್ತದೆ••••• [ individual opinions differ. We here are not using any words intentionally and to hurt anyones emotions.] ((ಚಿಕ್ಕ ವಯಸ್ಸಿನಿಂದಲೂ ಇದೇ ಸಾಯಿಯ ಗುಡಿಗೆ ಗುರು ಪೂರ್ಣಿಮೆಯಂದು ನನ್ನ ಸ್ನೇಹಿತರು ಬಲವಂತವಾಗಿ ಕರೆತರುತ್ತಿದ್ದರು. ಇಂದಿಗೂ ಅದೇ ವಾಡಿಕೆ..))
Posted on: Sat, 12 Jul 2014 17:16:48 +0000

Trending Topics



Recently Viewed Topics




© 2015