ಪುರಸಭೆ - TopicsExpress



          

ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಸೆ.೬ ರಂದು ನಡೆಯಲಿದೆ. ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಉಪಾಧ್ಯಕ್ಷ ಸ್ಥಾನ ಬಿಸಿಎಂ(ಎ) ವರ್ಗದ ಮಹಿಳೆಗೆ ಮೀಸಲಾಗಿದೆ. ಪುರಸಭೆ ೨೩ ಸದಸ್ಯರಲ್ಲಿ ಜತ್ಯತೀತ ಜನತಾದಳ ೧೨, ಕಾಂಗ್ರೆಸ್ ೯, ಪಕ್ಷೇತರ ಇಬ್ಬರು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಜೆಡಿಎಸ್ ಸರಳ ಬಹುಮತ ಪಡೆದಿದ್ದು, ಬಹುತೇಕ ಅಧಿಕಾರದ ಗದ್ದುಗೆಯನ್ನು ಹಿಡಿಯಲಿದೆ. ಈಗಾಗಲೇ ಜೆಡಿಎಸ್‌ನಿಂದ ಬಿ.ಗಿರೀಶ್, ರವಿಅಣ್ಣೇಗೌಡ, ಚನ್ನಕೇಶವ, ಟಿ.ಎ.ಶ್ರೀನಿಧಿ, ಭಾರತೀ ಅರಣ್‌ಕುಮಾರ್, ಮುದ್ದಮ್ಮ, ಅಧ್ಯಕ್ಷ ಪದವಿಯ ಆಕಾಕ್ಷಿಂಗಳಾಗಿದ್ದಾರೆ. ಸದಸ್ಯರಾದ ಬಿ.ಗಿರೀಶ್ ಮತ್ತು ರವಿಅಣ್ಣೇಗೌಡ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆಸುತ್ತಿದ್ದಾರೆ. ಸದಸ್ಯರ ಮನೆಗೆ ತೆರಳಿ ಆಯ್ಕೆಗೆ ಸಹರಿಸುವಂತೆ ಮನವಿ ಮಾಡುತ್ತಿದ್ದಾರೆ. ಪಕ್ಷೇತರ ಅಭ್ಯರ್ಥಿಯಾದ ಮಂಜುನಾಥ್, ಜೆಡಿಎಸ್‌ಗೆ ಬೆಂಬಲ ನೀಡಲಿದ್ದಾರೆ ಎಂದು ತಿಳಿದು ಬಂದಿದ್ದು, ವರಿಷ್ಠರು ಅಧಿಕಾರ ನೀಡುವ ಭರವಸೆ ನೀಡಿದ್ದಾರೆ ಎಂದು ಹೇಳಲಾಗಿದೆ. ಜೆಡಿಎಸ್‌ನಿಂದ ಆಯ್ಕೆಯಾಗಿರುವ ಶಾಂತಕುಮಾರ್ ಕಳೆದ ಅವಧಿಯಲ್ಲಿ ಅಧ್ಯಕ್ಷರಾಗಿ ಕಾರ‍್ಯ ನಿರ್ವಹಿಸಿದ್ದರು. ಅದರೆ ಪಕ್ಷದ ಯಾವುದೇ ವೇದಿಕೆಯಲ್ಲಿ ಕಾಣಿಸಿಕೊಳ್ಳದೇ ಇರುವುದು ಇವರ ನಡೆ, ಗೌಪ್ಯವಾಗಿದೆ. ಬಹುತೇಕವಾಗಿ ಶಾಂತಕುಮಾರ್ ಕಾಂಗ್ರೆಸ್‌ನತ್ತ ಒಲವು ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್ ಬೆಂಬಲದೊಂದಿಗೆ ಅಧ್ಯಕ್ಷ ಅಭ್ಯರ್ಥಿಯಾಗಲಿದ್ದಾರೆ ಎಂಬುದು ಸರ್ವಜನಿಕರಲ್ಲಿ ಚರ್ಚೆಯಾಗುತ್ತಿದೆ. ಕಳೆದ ಅವಧಿಯಲ್ಲಿ ಸದಸ್ಯ ಚನ್ನಕೇಶವ ಕಾಂಗ್ರೆಸ್‌ನಿಂದ ಆಯ್ಕೆಯಾಗಿ ಜೆಡಿಎಸ್ ಸೇರುವ ಮೂಲಕ ಅಧ್ಯಕ್ಷ ಗಾದಿಗೆ ಪೈಪೋಟಿ ನಡೆಸಿ ವಿ-ಲರಾಗಿದ್ದರು. ಚನ್ನಕೇಶವ ಅವರನ್ನು ಈ ಬಾರಿ ಪಕ್ಷದ ಮುಖಂಡರು ಅಧ್ಯಕ್ಷ ಗಾದಿ ಕರುಣಿಸುವರೇ ಎಂದು ಕಾದು ನೋಡಬೇಕಿದೆ. ಜೆಡಿಎಸ್‌ನ ೬ ಜನ ಅಭ್ಯರ್ಥಿಗಳ ಪೈಕಿ ಐವರು ಒಕ್ಕಲಿಗ ಸಮುದಾಯಕ್ಕೆ ಸೇರಿದ್ದು ಒಬ್ಬರು ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದವರಾಗಿದ್ದಾರೆ. --- ಶಿಕ್ಷಣದ ಜೊತೆಗೆ ಪ್ರತಿ ವ್ಯಕ್ತಿಯ ಪರಿಪೂರ್ಣ ಬೆಳವಣಿಗೆಗೆ ಕ್ರೀಡೆ ಅನಿವಾರ್ಯ ಎಂದು ಭಾಗ್ಯ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಕೆ.ಎಸ್.ಲಿಂಗೇಶ್ ತಿಳಿಸಿದ್ದಾರೆ. ಬೇಲೂರಿನಲ್ಲಿ ನಡೆದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಕಲ್ಪತರು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಜಯಗಳಿಸಿ ಕಾಲೇಜಿಗೆ ಕೀರ್ತಿ ತಂದ ವಿದ್ಯಾರ್ಥಿಗಳ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು. ದೇಹ ಮತ್ತು ಮನಸ್ಸು ಬೇರೆಯಲ್ಲ. ಇವೆರಡೂ ಶಿಕ್ಷಣದ ಮೂಲಕ ಏಕಕಾಲಕ್ಕೆ ಬೆಳವಣಿಗೆಯಾಗುತ್ತಾ ಹೋದರೆ ಮಕ್ಕಳ ಸರ್ವತೋಮುಖ ಅಭಿವೃದಿಟಛಿಯಾಗುತ್ತದೆ. ಕ್ರೀಡೆಯಲ್ಲಿ ಪಾಲ್ಗೊಳ್ಳುವ ಮಕ್ಕಳಲ್ಲಿ ಸೃಜನಾಶೀಲತೆ ಮತ್ತು ಇಚ್ಚಾಶಕ್ತಿ ಹೆಚ್ಚಾಗಿರುತ್ತದೆ. ಉತ್ತಮ ಕ್ರೀಡಾಪಟುಗಳ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅನನ್ಯವಾಗಿರುತ್ತದೆ. ಶಿಕ್ಷಕರು ತಮ್ಮಲ್ಲಿರುವ ಜನವನ್ನು ಮಕ್ಕಳಿಗೆ ನೀಡಿದರೆ ಉತ್ತಮ ಕ್ರೀಡಾಪಟುಗಳು ರೂಪುಗೊಳ್ಳುತ್ತಾರೆ ಎಂದು ತಿಳಿಸಿದರು. ಬಾಲಕರ ವಿಭಾಗದ ೫೦೦೦ ಮೀಟರ್ ಓಟದಲ್ಲಿ ನಂದೀಶ್ ಪ್ರಥಮ, ೩೦೦೦ ಮೀಟರ್ ಓಟದಲ್ಲಿ ದ್ವಿತೀಯ, ಬಾಲಕೀಯರ ವಿಭಾಗದ ೩೦೦೦ ಮೀಟರ್ ಓಟದಲ್ಲಿ ಸುಶ್ಮಿತಾ ಪ್ರಥಮ ೧೫೦೦ ಮೀಟರ್ ಓಟದಲ್ಲಿ ದ್ವಿತೀಯ, ೪೦೦ ಮೀಟರ್ ಓಟದಲ್ಲಿ ಪೂಜ ದ್ವಿತೀಯ, ಬಾಲಕೀಯರ ವಿಭಾಗದ ಖೋ ಖೋ ದ್ವಿತೀಯ, ಥ್ರೋಬಾಲ್ ದ್ವಿತೀಯ, ಬಾಲಕರ ವಿಭಾಗದ ಥ್ರೋಬಾಲ್ ಪ್ರಥಮ ಬಹುಮಾನಗಳಿಸಿದ್ದಾರೆ. ತಾಲೂಕು ಮಟ್ಟದ ಕ್ರೀಡಾ ಕೂಟದಲ್ಲಿ ಪ್ರಶಸ್ತಿ ಪಡೆದ ವಿಜೇಯ ವಿದ್ಯಾರ್ಥಿಗಳನ್ನು ಪ್ರಾಂಶುಪಾಲ ಎಂ.ಸಿ.ಕಮಾರ್ ಅಭಿನಂದಿಸಿ, ಮುಂದಿನ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿಯೂ ಉತ್ತಮ ಪ್ರದರ್ಶನ ನೀಡಿ ರಾಜ್ಯ ಮತ್ತು ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಉಪನ್ಯಾಸಕರಾದ ಶಿವಕುಮಾರ್, ಜೈಕುಮಾರ್, ಸುರೇಶ್, ಅವಿನಾಶ್, ವೇಣಾಕ್ಷಿ, ಪುಟ್ಟಸ್ವಾಮಿ ಮಧುಸೂದನ್ ಮುಂತಾದವರು ಹಾಜರಿದ್ದರು. ---- ಯಗಚಿ ಜಲಾಶಯಕ್ಕೆ ಬಾಗಿನ ನೀಡಲು ಆಗಮಿಸಿದ ವೇಳೆ ಅಣೆಕಟ್ಟೆಗೆ ಅಕ್ರಮ ಪ್ರವೇಶ ಮಾಡಲಾಗಿದೆ ಎಂಬ ದೂರಿನ ಮೇಲೆ ಪ್ರಗತಿಪರ ಸಂಘಟನೆ, ರೈತಸಂಘ, ದಲಿತ ಸಂಘ, ಜಯ ಕರ್ನಾಟಕ ಸಂಘಟನೆ, ಹಾಗೂ ಎಬಿವಿಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದ್ದಾರೆ. ಅ.೨೮ ರಂದು ಯಗಚಿ ಜಲಾಶಯಕ್ಕೆ ಅಕ್ರಮವಾಗಿ ಬಾಗಿನ ಅರ್ಪಿಸಲು ದಬ್ಬಾಳಿಕೆಯಿಂದ ಆಣ್ಣೆಕಟ್ಟೆಗೆ ಪ್ರವೇಶ ಮಾಡಿ ನಿರ್ಬಂಧಿತ ಪ್ರದೇಶದಲ್ಲಿ ಬಾಗಿನ ಅರ್ಪಿಸಿದ್ದಾರೆ ಎಂದು ಆರೋಪಿಸಿ ಯಗಚಿ ಜಲಾಶಯದ ಎಂಜಿನಿಯರ್ ಪುಟ್ಟೆಗೌಡ ಪೊಲೀಸರಿಗೆ ದೂರು ನೀಡಿದ್ದರು. ಬಾಗಿನ ಅರ್ಪಿಸಲು ಪ್ರಗತಿ ಪರ ಸಂಘಟನೆಯ ಅಧ್ಯಕ್ಷ ಕೆ.ಸುದರ್ಶನ್, ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಬಿ.ಎಲ್. ಲಕ್ಷ್ಮಣ್, ರೈತ ಸಂಘದ ತಾಲೂಕು ಅಧ್ಯಕ್ಷ ಪರಮೇಶ್, ಕಾರ್ಯದರ್ಶಿ ಸ್ವಾಮೀಗೌಡ, ರೈತ ಸಂಘದ ವಿರುಪಾಕ್ಷಪ್ಪ, ಜಯ ಕರ್ನಾಟಕ ಸಂಘಟನೆಯ ಯುವ ಅಧ್ಯಕ್ಷ ಶಿವರಾಜು, ಎಬಿವಿಬಿ ನೀಲಕಂಠ, ಪುರಸಭಾ ಮಾಜಿ ಸದಸ್ಯೆ ನಾಗಮ್ಮ, ಭಾಗ್ಯಮ್ಮ ನಿರ್ಬಂಧಿತ ಪ್ರದೇಶದಲ್ಲಿ ಪ್ರವೇಶಿಸಿ ಬಾಗಿನ ಅರ್ಪಿಸಿದರು. ಅವರನ್ನು ತಡೆದಾರೂ ದಬ್ಬಾಳಿಕೆಯಿಂದ ಜಲಾಶಯದ ರಿವೇಟ್ ಮೆಂಟ್ ಮುಂಭಾಗದಲ್ಲಿ ಬಾಗಿನ ಅರ್ಪಿಸಿದರು. ಇವರೆಲ್ಲರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲು ಮಾಡಿ ಐಪಿಸಿ ಕಾಲಂ ೧೪೩, ೧೪೫, ೪೪೭, ೧೪೯ ಪ್ರಕಾರ ಕೇಸು ದಾಖಲು ಮಾಡಿದ್ದರು. ಈ ಸಂಬಂಧ ೯ ಜನರನ್ನು ಪೊಲೀಸರ ಬಂಧಿಸಿದರು. ಬಳಿಕ ಜಮೀನು ಪಡೆದು ಡುಗಡೆ ಮಾಡಲಾಯಿತು. ********** ಈ ದಿನದ ಪ್ರಾಯೋಜಕರು: Systems Technology : ಸಿಸ್ಟಮ್ ಟೇಕ್ನಾಲಜಿ : ಮಂಡ್ಯ-ಮೈಸೂರು-ಹಾಸನ : 7259108417: Today Offer : Intel Processor2.6 Ghz, Ram 1GB, 160GB Hard Disk, DVD R/W, Mouse, TFT Monitor 15 Inch.. Offer Price : ಕೇವಲ 9999/- Only. Home Delivery (High Configuration ಕಂಪ್ಯೂಟರ್ ಗಳನ್ನು Assemble ಮಾಡಿಕೊಡಲಾಗುವುದು. ಎಲ್ಲಾ ಕಂಪ್ಯೂಟರ್ ಬಿಡಿಭಾಗಗಳ ಮೇಲೆ ಕಂಪನಿ ಆಧಾರದ ಮೇಲೆ 2 ವರ್ಷ ಅಥವಾ 3 ವರ್ಷ ಗ್ಯಾರಂಟಿ ಕೊಡಲಾಗುವುದು)
Posted on: Fri, 30 Aug 2013 01:42:39 +0000

Trending Topics



uốc tế) Nhận:imei
Black Friday Water Pump Kit with Housing for OMC Sterndrive

Recently Viewed Topics




© 2015