ಬೆಂಗಳೂರು: ಜಾಗಿಂಗ್ - TopicsExpress



          

ಬೆಂಗಳೂರು: ಜಾಗಿಂಗ್ ಮಾಡಿಕೊಂಡು ಹೋಗುತ್ತಿದ್ದ ಯುವತಿಯನ್ನು ಚುಡಾಸಿದ ರೋಡ್ ರೋಮಿಯೋಗೆ ಯುವತಿಯೇ ತಳಿಸಿರುವ ಘಟನೆ ಭಾನುವಾರ ಬೆಳಿಗ್ಗೆ ನಡೆದಿದೆ. ನಗರದ ಜಯನಗರದಲ್ಲಿ ಈ ಘಟನೆ ಸಂಭವಿಸಿದೆ. ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಕೆಲಸಮಾಡುತ್ತಿರುವ ಯುವತಿ ಮತ್ತು ತನ್ನ ಗೆಳೆಯ ಇಂದು ಬೆಳಿಗ್ಗೆ ಜಾಗಿಂಗ್ ಮಾಡಿಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ, ಬೈಕ್‌ನಲ್ಲಿ ಬಂದ ಯುವಕನೊಬ್ಬ ಯುವತಿಗೆ ಅಶ್ಲೀಲ ಪದಗಳಿಂದ ಚುಡಾಯಿಸಿದ್ದಾನೆ. ಇದರಿಂದ ಕುಪಿತಗೊಂಡ ಯುವತಿ ಯುವಕನನ್ನು ಬೆನ್ನಟ್ಟಿ, ನಡು ರೋಡಿನಲ್ಲಿ ತಳಿಸಿದ್ದು, ಪೊಲೀಸರಿಗೆ ಒಪ್ಪಿಸಿದ್ದಾಳೆ. ಯುವತಿಯ ಗೆಳೆಯ ದೃಶ್ಯವನ್ನು ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದು, ಪೊಲೀಸರಿಗೆ ನೀಡಲಾಗಿದೆ. ಯುವಕನ ವಿರುದ್ಧ ಪ್ರಕರಣ ದಾಖಲಾಗಿದ್ದು, ಬನಶಂಕರಿ 3ನೇ ಹಂತದ ನಿವಾಸಿ ಎಂದು ತಿಳಿದು ಬಂದಿದೆ. Shivaraj Akki
Posted on: Mon, 11 Aug 2014 06:53:33 +0000

Trending Topics



Recently Viewed Topics




© 2015