ಮಾನ್ಯ. - TopicsExpress



          

ಮಾನ್ಯ. ಪ್ರಧಾನಿಯವರೇ, ನಿನ್ನೆ ಭಾರತವನ್ನು ಸ್ವಚ್ಛ ಗೊಳಿಸಿದವರಲ್ಲಿ ಎಷ್ಟು ಜನ ಇವತ್ತು ಪಾರ್ಲರ್ಗಳಲ್ಲಿ ಸೊಂಟ ಮಸಾಜಿಸಿಕೊಳ್ಳುತ್ತಿರಬಹುದು. ಹಾಗಂತ ನಿಮ್ಮ ಪ್ರಾಮಾಣಿಕತೆ, ಬಧ್ದತೆ ಉತ್ಸಾಹಗಳನ್ನು ಪ್ರಶ್ನಿಸುವಷ್ಟು ಸಿನಿಕನಲ್ಲ ನಾನು ಇವತ್ತಿನ ಭಾರತದ ಏಕೈಕ hopeful leader ನೀವು .. ಪ್ರಧಾನಿಯವರೇ, ಮಿತ್ರನೊಬ್ಬ ಮಲದ ಗುಂಡಿ ಕ್ಲೀನ್ ಮಾಡುತ್ತಿರುವ ಫೋಟೋ ಬಗ್ಗೆ ಬರಿತಾನೆ ನಾಗರಿಕ ಸಮಾಜ ನಿರುತ್ತರ ...ನೀವೆ ರೋಡಿಗಿಳಿದು ಕಸ ಗುಡಿಸಿದರೆ ನನ್ನಂತವನಿಗೆ ,ಇದೇನು ಪ್ರಚಾರ ಅನಿಸುತ್ತದೆ . ಆದರೆ ಅಂತಹದೇ ಕೆಲಸವನ್ನು ವೃತ್ತಿಯಾಗಿಸಿಕೊಂಡ ಹಿಂದುಳಿದವರಿಗೆ ಆತ್ಮಸಮ್ಮಾನ ವನ್ನು ಒದಗಿಸಿ, ,ಉತ್ತಮ ಸಂಬಳ ಇತ್ಯಾದಿಗಳನ್ನು ಒದಗಿಸುವುದು ಹೆಚ್ಚು ಅರ್ಥಪೂರ್ಣ. ಹಾಗೇ ಮುಂದೊಂದು ದಿನ ನಿಮ್ಮ ಸಂಪುಟದ ಸಚಿವರ ಫೇಸು ಕಟ್ಟುಗಳು ಮರೆಯುವ ಮುನ್ನ ..ಅವರ ಕಾರ್ಯವೈಖರಿಗಳೇನು ಸಾಧನೆಗಳೇನು ಅಂತ ಅವರದೇ ಬಾಯಿಂದ ಹೇಳಿಸಿ... ಸಾಮೂಹಿಕ ನಾಯಕತ್ವ ,ಅಧಿಕಾರ ವಿಕೇಂದ್ರೀಕರಣ ನಿಮ್ಮೂರಿನ ಗಾಂಧೀ ಕನಸಲ್ಲವೇ ... ಹಂಗೂ ಮಂತ್ರಿಗಳು ಸೋತರೆ ಹೆಂಗೂ ಹಿಡಿದೆತ್ತಲು ನೀವಿದ್ದೀರಿ ...ಇನ್ನೂ ಯಾಕೆ ತಡ ..ಎಂಪಿ ಗಳನ್ನು ಊರಿನ ಕಡೆಗೆ ಓಡಿಸಿ , ಕ್ಯಾಮರಾ ಇಲ್ಲದೆಡೆಯೂ ಗುಡಿಸಲು ಹೇಳಿ.,ಗ್ರಾಮೀಣ ಭಾರತ ನಿಮ್ಮ ಪ್ರಭಾವಳಿಯನ್ನು ಕುತೂಹಲದಿಂದ ಎದುರು ನೋಡುತ್ತಿದೆ .. ನಿಮ್ಮ ಹೆಸರೇಳಿಕೊಂಡು ಗೆದ್ದ ವೇಷ್ಟ್ ಮುಖಂಡರ ಪಾಪವೂ ನಿಮಗೇ ಸುತ್ತಿಕೊಳ್ಳುವುದಲ್ಲವೇ ... ಉತ್ತರ ಕರ್ನಾಟಕದ ಆಫ್ರಿಕಾದಂತಹಾ ಹಳ್ಳಿಗಳನ್ನು ಸುತ್ತುವ ನಾನು ದಿನಕ್ಕೊಂದು ಕರುಣಾಜನಕ ಫೂಟೋಗಳನ್ನು upload ಮಾಡಬಲ್ಲೆ ... ಅತಿಯಾದ ನಿರೀಕ್ಷೆಗಳ ಭಾರ ನೀವ್ಯಾಕ್ರೀ ಹೊರ್ತೀರ.., ಮಹಾ ನಗರಗಳಿಂದಾಚೆಗೊಂದು ಭಾರತವಿದೆ. ಅದಕ್ಕೆ ನಿಮ್ಮ. ನಿಜವಾದ ಅಗತ್ಯತೆ ಇದೆ .ಆ ಜನ ನಿಮ್ಮ ಒಂದು ಉಪಕಾರವನ್ನು ರಾತ್ರಿ ಮಲಗುವಾಗ ನೆನೆಯುವಂತಹವರು ... ನನ್ನ ತರಹ fbಯಲ್ಲಿ ಕೆತ್ತುವರಲ್ಲ ., computer ನಲ್ಲಿ ಅನ್ನ output ಆಗುವುದಿಲ್ಲ ಸ್ವಾಮಿ ...,ಮಹಾ ನಗರದಿಂದ ಮನೆಗೆ ಅಂತಹದೊಂದು ಅಭಿಯಾನ ಯಾಕಾಗಬಾರದು .. ನಾನು ಬಯಸುವುದು ಸ್ವಸ್ಥ ಭಾರತ .....
Posted on: Fri, 03 Oct 2014 04:31:40 +0000

Trending Topics



Recently Viewed Topics




© 2015