#ಯಾಕೆ ಹೀಗೆ? ಎಷ್ಟೋ ಜನ - TopicsExpress



          

#ಯಾಕೆ ಹೀಗೆ? ಎಷ್ಟೋ ಜನ ತಾಯಂದಿರು (ಎಲ್ಲರೂ ಅಲ್ಲ) ತಮ್ಮ 4 - 5 ವರ್ಷದ ಮಗು ಸದಾ ಕೈಯಲ್ಲಿ ಮೊಬೈಲ್ ಕಣ್ರೀ. ತಕೊಂಡ್ರೆ ಹಠ ಮಾಡುತ್ತೆ. ನಮಗೇ ಗೊತ್ತಿಲ್ಲ ಅದರಲ್ಲಿ. ಎಲ್ಲಾ ಗೊತ್ತಿದೇರೀ ಟೀವೀಲಿ ಬರೋದು ಎಲ್ಲವೂ ಗೊತ್ತೂರೀ ಅಂತಲೋ ಅಥವಾ ತಮ್ಮ ಮಕ್ಕಳು ಅನ್ನ ತಿನ್ನೋದೇ ಇಲ್ಲ ಕಣ್ರೀ. ಕುರ್ಕುರೆ, lays ಇದ್ದರೆ ಸಾಕು ಅಂತಲೋ ಹೆಮ್ಮೆಯಿಂದ ಹೇಳೋದು ಕೇಳಿದೇನೆ. ಇದು ಸರಿಯಾ ಎಂದು ಕೇಳಿ ನಿನಗೇನಮ್ಮ ಗೊತ್ತು? ಹೊತ್ತಿದೀಯಾ ಹೆತ್ತಿದೀಯಾ ಎಂದೂ ಅನ್ನಿಸಿಕೊಂಡಿದೇನೆ! ಹೌದು...ನಾನು ತಾಯಿಯಲ್ಲ ನನಗೆ ಗೊತ್ತಿಲ್ಲ. ಆದರೆ ಇಲ್ಲಿ ಬಹಳ ಮಂದಿ ತಾಯ್ತಂದೆಯರಿದ್ದೀರಿ. ಇದು ಎಷ್ಟು ಸಮಂಜಸ ದಯಮಾಡಿ ತಿಳಿಸುವಿರಾ? ಮಗು ಬೆಳೆದು ದೊಡ್ಡದಾದ ಮೇಲೆ ಸಮಾಜವನ್ನು ವ್ಯವಸ್ಥೆಯನ್ನು ದೂರಿ ಏನು ಉಪಯೋಗ??
Posted on: Sun, 30 Nov 2014 05:47:56 +0000

Trending Topics




© 2015