ಸಮಾಜದಲ್ಲಿ ಬೇರೂರಿರುವ - TopicsExpress



          

ಸಮಾಜದಲ್ಲಿ ಬೇರೂರಿರುವ ಸಾಮಾಜಿಕ ಅನಿಷ್ಠ ಪದ್ದತಿಗಳನ್ನು ಹೋಗಲಾಡಿಸುವ ಮೂಲಕ ಇಂದಿನ ಮಕ್ಕಳಲ್ಲಿ ವೈಜನಿಕ ಮನೋಭಾವ ಬೆಳೆಸಬೇಕು ಎಂದು ಬಿಆರ್‌ಸಿ ಸಂಪನ್ಮೂಲ ಶಿಕ್ಷಕ ಎನ್.ಮಹದೇವಪ್ಪ ಕರೆ ನೀಡಿದರು.ತಾಲೂಕಿನ ತಾಳಶಾಸನ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ‘ಪವಾಡ ರಹಸ್ಯ ಬಯಲು’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಕ್ಕಳಿಗೆ ಉಪನ್ಯಾಸ ನೀಡಿ ಮಾತನಾಡಿದ ಅವರು, ಸಮಾಜದಲ್ಲಿ ಅಜನ, ಮೂಢನಂಬಿಕೆ,ಕಂದಾಚಾರದಂತಹ ಅನಿಷ್ಠ ಪದಟಛಿತಿಗಳನ್ನು ಹೋಗಲಾಡಿಸಲು ಪ್ರತಿಯೊಬ್ಬರೂ ಮುಂದಾಗಬೇಕು ಎಂದರು. ಮಕ್ಕಳು ಯಾವುದೇ ಮೂಢನಂಬಿಕೆ ಬಿತ್ತುವಂತಹ ವಿಚಾರಗಳನ್ನು ನಂಬಬಾರದು. ಬದಲಿಗೆ ಪ್ರತ್ಯಕ್ಷವಾಗಿ, ನೇರವಾಗಿ ಹಾಗೂ ಪ್ರಶ್ನಿಸುವಂತಹ ಗುಣಗಳನ್ನು ಬೆಳೆಸಿಕೊಳ್ಳುವ ಮೂಲಕ ಇಂತಹ ದುಷ್ಟ ಪದಟಛಿತಿಗಳನ್ನು ಹೋಗಲಾಡಿಸಬೇಕು ಎಂದು ಸಲಹೆ ನೀಡಿದರು. ಇಂದಿನ ಆಧುನಿಕ ಯುಗದಲ್ಲೂ ದೇವರ ಹೆಸರಿನಲ್ಲಿ ಮೋಸ, ವಂಚನೆಗಳನ್ನು ಮಾಡುತ್ತಾ ಜನರನ್ನು ವಂಚಿಸುತ್ತಿದ್ದಾರೆ. ಜತೆಗೆ, ಜನರನ್ನೂ ಅಂಧಕಾರದೆಡೆಗೆ ಕರೆದೊಯ್ಯುವ ಮೂಲಕ ಮೌಢ್ಯ ಸಂಪ್ರದಾಯಗಳನ್ನು ಬಿತ್ತುತ್ತಿದ್ದಾರೆ. ಇದರಿಂದ ಸಮಾಜದಲ್ಲಿ ಯಾವುದೇ ಬದಲಾವಣೆಯನ್ನು ಕಾಣಲು ಸಾಧ್ಯವಿಲ್ಲ ಎಂದು ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮಾರ್ಗದರ್ಶನದಲ್ಲಿ ತಾಲೂಕಿನ ಅರಳಕುಪ್ಪೆ ವಲಯದ ಗಿರಿಯಾರಹಳ್ಳಿ ಗ್ರಾಮದ ರೈತ ಜೆ.ಬೋರೇಗೌಡ ಅವರ ಕೃಷಿ ಜಮೀನಿನಲ್ಲಿ ಭತ್ತ ಬೇಸಾಯದ ಶ್ರೀ ಪದಟಛಿತಿ ನಾಟಿ ಪ್ರಾತ್ಯಕ್ಷಿಕೆ ರ್ಯಕ್ರಮ ನಡೆಯಿತು. ಯೋಜನೆಯ ತಾಲೂಕು ಯೋಜನಾಧಿಕಾರಿ ಎನ್.ಮೇದಪ್ಪ ಮಾತನಾಡಿ, ಬಹುತೇಕ ರೈತರು ಭತ್ತ ಬೇಸಾಯ ಮಾಡಲು ಅಧಿಕ ಪ್ರಮಾಣದ ನೀರು, ಹೆಚ್ಚು ಬಿತ್ತನೆ ಬೀಜ, ದುಬಾರಿ ಗೊಬ್ಬರದ ಬಳಕೆ, ಕೂಲಿಯಾಳುಗಳ ಕೊರತೆ ಇತರೆ ಸಮಸ್ಯೆಗಳಿಂದ ಭತ್ತ ಬೇಸಾಯ ಮಾಡಲು ಹಿಂಜರಿಯುತ್ತಿದ್ದಾರೆ. ಇದರ ಪರಿಣಾಮವಾಗಿ ಆಹಾರ ಉತ್ಪಾದನೆ ಪ್ರಮುಖ ಮೂಲಗಳಲ್ಲಿ ಒಂದಾದ ಭತ್ತದ ಉತ್ಪಾದನೆ ಕಡಿಮೆಯಾಗುತ್ತಿದೆ ಎಂದು ಹೇಳಿದರು. ಇಂತಹ ಸಮಸ್ಯೆಗೆ ಪರಿಹಾರವಾಗಿ ಕಡಿಮೆ ಕೂಲಿ, ಕಡಿಮೆ ನೀರು, ಕಡಿಮೆ ಪ್ರಮಾಣದ ಬಿತ್ತನೆ ಬೀಜ, ಕಡಿಮೆ ಪ್ರಮಾಣದ ಗೊಬ್ಬರ ಮತ್ತು ಕೀಟನಾಶಕಗಳ ಬಳಕೆ ಮಾಡಿಕೊಂಡು ಖರ್ಚು ಕಡಿಮೆ ಮಾಡಿ, ಅಧಿಕ ಇಳುವರಿ ಪಡೆಯಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು ಶ್ರೀ ಅಭಿಯಾನ ಕಾರ್ಯಕ್ರಮವನ್ನು ಕೈಗೊಂಡಿದೆ ಎಂದು ತಿಳಿಸಿದರು. ಮಾರಹಳ್ಳಿ ಗ್ರಾಮದ ರೈತರು, ಸಂಸ್ಥೆಯ ತಾಲೂಕು ಕೃಷಿ ಅಧಿಕಾರಿ ಗಣೇಶ, ಮೇಲ್ವಿಚಾರಕ ನಿಂಗನಾಯ್ಕ್, ಸೇವಾಪ್ರತಿನಿಧಿ ಮೀನಾಕ್ಷಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕಡೇ ಶ್ರಾವಣ ಶನಿವಾರದ ಪ್ರಯುಕ್ತ ಪಟ್ಟಣದ ಹಾರೋಹಳ್ಳಿ ಗ್ರಾಮದ ಶ್ರೀ ಲಕ್ಷ್ಮೀ ನಾರಾಯಣಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಿತು. ಪ್ರತಿ ವರ್ಷದಂತೆ ಈ ವರ್ಷವೂ ಗ್ರಾಮದಲ್ಲಿ ಶ್ರಾವಣ ಶನಿವಾರವನ್ನು ಭಕ್ತರು ಸಡಗರ-ಸಂಭ್ರಮದಿಂದ ಆಚರಿಸಿದರು. ಪಾಂಡವಪುರ ಪಟ್ಟಣ ಹಾಗೂ ಸುತ್ತಮುತ್ತಲ ಗ್ರಾಮಗಳು ಸೇರಿದಂತೆ ತಾಲೂಕಿನ ವಿವಿಧೆಡೆಗಳಿಂದ ಭಕ್ತಾದಿಗಳು ಆಗಮಿಸಿ ಲಕ್ಷ್ಮೀ ನಾರಾಯಣಸ್ವಾಮಿ ಕೃಪೆಗೆ ಪಾತ್ರರಾದರು. ಬೆಳಿಗ್ಗೆ ೯ ಗಂಟೆಯಿಂದ ಸಂಜೆವರೆಗೆ ದೇವರಿಗೆ ಅರ್ಚನೆ, ಪೂಜೆ-ಪುನಸ್ಕಾರಗಳು ಜರುಗಿದವು. ವಿಘ್ನೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸುವ ವಿಘ್ನೇಶ್ವರನ ಆರಾಧನೆ ನಡೆಸಲಾಯಿತು. ಲಕ್ಷ್ಮೀನಾರಾಯಣಸ್ವಾಮಿಗೆ ಮಹಾಭಿಷೇಕ, ಅಲಂಕಾರ, ಅಷ್ಟೋತ್ಸವ, ವಿಶೇಷ ಅರ್ಚನೆ, ಪೂಜೆ ಸಲ್ಲಿಸಲಾಯಿತು. ದೇವಸ್ಥಾನಕ್ಕೆ ಆಗಮಿಸಿದ ಎಲ್ಲಾ ಭಕ್ತಾದಿಗಳಿಗೂ ಮಂಗಳಾರತಿ ಬಳಿಕ ಪ್ರಸಾದ ವಿನಿಯೋಗ ಮಾಡಲಾಯಿತು’ ಎಂದು ದೇವಸ್ಥಾನದ ಮುಖ್ಯ ಅರ್ಚಕ ಲಕ್ಷ್ಮೀನಾರಾಯಣಯ್ಯ ತಿಳಿಸಿದರು. ತಾಲೂಕಿನ ವಿವಿಧ ಗ್ರಾಮಗಳ ಲೋಕೋಪಯೋಗಿ ಇಲಾಖೆಯ ಜಿಲ್ಲಾ ಮುಖ್ಯ ರಸ್ತೆಗಳ ಅಭಿವೃದ್ದಿ ಪಡಿಸುವ ಪ್ಯಾಕೇಜ್-೧ರ ಯೋಜನೆಯಡಿಯಲ್ಲಿ ೩.೬೫ ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ೧೬೦ ಲಕ್ಷ ರೂ. ವೆಚ್ಚದಲ್ಲಿ ತಾಲೂಕಿನ ಪಾಂಡವಪುರ-ಚಿನಕುರಳಿ ರಸ್ತೆಯಿಂದ ಕಾವೇರಿಪುರ ಮಾರ್ಗವಾಗಿ ಸೇರುವ ರಸ್ತೆ ಅಭಿವೃದ್ದಿ, ೧೦೫ ಲಕ್ಷ ರೂ. ವೆಚ್ಚದಲ್ಲಿ ರಾಗಿಮುದ್ದನಹಳ್ಳಿಯಿಂದ ಡಿಂಕಾ ಮಾರ್ಗವಾಗಿ ಬನ್ನಂಗಾಡಿ ಸೇರುವ ರಸ್ತೆ, ೧೦೦ ಲಕ್ಷ ರೂ. ವೆಚ್ಚದಲ್ಲಿ ಬಿಬಿ-ಬಿಟಿ ರಸ್ತೆಯಿಂದ ಚಿನಕುರಳಿ-ಬೂಕನಕೆರೆಗೆ ಸೇರುವ ರಸ್ತೆ ಅಭಿವೃದ್ದಿ ಸೇರಿ ಒಟ್ಟು ೩.೬೫ ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ದಿ ಪಡಿಸಲಾಗುವುದು ಎಂದು ತಿಳಿಸಿದರು. ಜಿಲ್ಲಾ ಮುಖ್ಯ ರಸ್ತೆಗಳಲ್ಲಿ ಒಟ್ಟು ೭.೯೦ಕಿ. ಮೀ ಉದ್ದದ ರಸ್ತೆಯನ್ನು ಅಭಿವೃದ್ದಿಪಡಿಸಲು ಯೋಜನೆ ರೂಪಿಸಲಾಗಿದ ೭ ಸೇತುವೆಗಳು ಮತ್ತು ಬಾಕ್ಸ್ ಚರಂಡಿಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು. ಗುಣಮಟ್ಟ ಕಾಯ್ದುಕೊಳ್ಳಲು ಸೂಚನೆ: ರಸ್ತೆ ಅಭಿವೃದಿಟಛಿ ಕಾಮಗಾರಿಗಳಲ್ಲಿ ಉತ್ತಮ ಗುಣಮಟ್ಟ ಕಾಯ್ದುಕೊಳ್ಳುವಂತೆ ಪಿಡಬ್ಲ್ಯೂಡಿ ಇಲಾಖೆಯ ಎಇಇ ರಾಜೇಶ್ ಕೆ.ಮುನ್ಷಿ ಅವರಿಗೆ ಸೂಚಿಸಿದರು. ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಎಲ್ಲಾ ರಸ್ತೆಗಳನ್ನು ಅಭಿವೃದಿಟಛಿಪಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ಕ್ರಿಯಾಯೋಜನೆ ತಯಾರಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿದೆ. ರಸ್ತೆಗಳ ಅಭಿವೃದ್ದಿಗಳಿಗೆ ಸರ್ಕಾರದಿಂದ ವಿಶೇಷ ಅನುದಾನ ತರಲು ಪ್ರಯತ್ನ ನಡೆಸಲಾಗುವುದು ಎಂದು ಹೇಳಿದರು. ಸಹಾಯಕ ಇಂಜನಿಯರ್ ಎಂ.ಬಿ.ರಾಜು, ಕಿರಿಯ ಇಂಜನಿಯರ್ ಪುಟ್ಟರಾಜು ಹಾಗೂ ಡಿಂಕಾ ಗ್ರಾಮದ ಮುಖಂಡರು ಉಪಸ್ಥಿತರಿದ್ದರು. ಮಕ್ಕಳ ಮಾತೆಯರಂತಿರುವ ಅಂಗನವಾಡಿ ಕಾರ್ಯಕರ್ತೆಯರ ಬದುಕಿನ ರಕ್ಷಣೆಗಾಗಿ ವಿಧಾನಸಭೆಯ ಮುಂದಿನ ಅಧಿವೇಶನದಲ್ಲಿ ದನಿಯೆತ್ತುವುದಾಗಿ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಹೇಳಿದರು. ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಅಂಗನವಾಡಿ ಕಾರ್ಯಕರ್ತೆಯರು-ಸಹಾಯಕಿಯರ ಫೆಡರೇಷನ್ (ಎಐಟಿಯುಸಿ) ವತಿಯಿಂದನಡೆದ ಅಭಿನಂದನೆ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿ ಬಡವರ, ದುಡಿಯುವವರ ಶೋಷಿತರ ಹಾಗೂ ರೈತಾಪಿ ಮಕ್ಕಳನ್ನು ಶೂಶ್ರೂಷೆ ಮಾಡಿ ಪೌಷ್ಟಿಕ ಆಹಾರ ನೀಡಿ ಮಕ್ಕಳ ಬೌದ್ದಿಕ ಮತ್ತು ದೈಹಿಕ ಬೆಳವಣಿಗೆಗೆ ನಿರಂತರವಾಗಿ ಅಂಗನವಾಡಿ ಕಾರ್ಯಕರ್ತೆಯರು ದುಡಿಯುತ್ತಿದ್ದಾರೆ. ಆದರೆ, ಸರ್ಕಾರ ಮಾತ್ರ ಇವರ ಬದುಕಿನ ರಕ್ಷಣೆಯ ಬಗ್ಗೆ ಸೂಕ್ತ ಗಮನಹರಿಸುತ್ತಿಲ್ಲದಿರುವುದು ವಿಷಾದದ ಸಂಗತಿ ಎಂದರು. ವೇತನ ನಿಗದಿಯಾಗಲಿ: ಬದುಕಿನ ರಕ್ಷಣೆಗಾಗಿ ಅಂಗನವಾಡಿ ಕಾರ್ಯಕರ್ತೆಯರಿಗೆ ಸರ್ಕಾರ ಕನಿಷ್ಠ ವೇತನವನ್ನು ನಿಗದಿಪಡಿಸಬೇಕಾಗಿದೆ. ಅಲ್ಲದೆ ಆರೋಗ್ಯ ವಿಮೆಯನ್ನು ಜರಿಗೆ ತರಬೇಕಾಗಿದೆ. ಈ ಎಲ್ಲ ಸಮಸ್ಯೆಗಳ ಬಗ್ಗೆ ಸದನದಲ್ಲಿ ಚರ್ಚಿಸುತ್ತೇನೆ ಎಂದು ತಿಳಿಸಿದರು. ಅನುದಾನ ಹೆಚ್ಚಳ ಮಾಡಲಿ: ಈಗಿರುವ ಅಂಗನವಾಡಿ ಕಟ್ಟಡಗಳು ದನಗಳ ಕೊಟ್ಟಿಗೆಯಂತಿವೆ. ಅಂಗನವಾಡಿ ಕಟ್ಟಡವನ್ನು ಉತ್ತಮವಾಗಿ ನಿರ್ಮಾಣ ಮಾಡುವ ಸಲುವಾಗಿ ಅಂಗನವಾಡಿ ಕೇಂದ್ರದ ಅನುದಾನವನ್ನು ೬ಲಕ್ಷ ರೂ. ಗಳಿಂದ ೧೨ ಲಕ್ಷ ರೂ.ಗಳವರೆಗೆ ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿದರು. ಸಿಡಿಪಿಒ ಮ್ಯಾಥ್ಯೂ, ತಾಲ ಕು ರೈತಸಂಘದ ಅಧ್ಯಕ್ಷ ಎಚ್.ಎಲ್. ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಅಮೃತಿ ರಾಜಶೇಖರ್, ಎಐಟಿಯುಸಿ ರಾಜಧ್ಯಕ್ಷ ರಾಮಚಂದ್ರಪ್ಪ, ತಾಲೂಕು ಅಧ್ಯಕ್ಷೆ ರುಕ್ಮಿಣಿದೇವಿ, ಪದಾಧಿಕಾರಿಗ ಳಾದ ಭಾರತಿಕುಮಾರ್, ಇಂಧುಮತಿ, ಯಶೋಧ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಹಳ್ಳಿಗಾಡಿನ ಜನರು ಅನಗತ್ಯವಾಗಿ ಕಚೇರಿಗಳಿಗೆ ಅಲೆಯುವಂತಾಗಬಾರದು. ಅವರ ಅರ್ಜಿಗಳನ್ನು ತಕ್ಷಣದಲ್ಲಿಯೇ ವಿಲೇವಾರಿ ಮಾಡಿ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡುವಂತೆ ಮಾಡುವುದೇ ನಿಜವಾದ ಸರ್ಕಾರಿ ಸೇವೆ ಎಂದು ಉಪವಿಭಾಗಾಧಿಕಾರಿ ಎಚ್.ಜನೇಶ್ ತಿಳಿಸಿದರು. ಪಟ್ಟಣದ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ತಾಲೂಕು ಆಡಳಿತ ವತಿಯಿಂದ ತಮಗೆ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಪಾಲ್ಗೊಂಡು ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು. ನಮ್ಮ ಸಮಸ್ಯೆಗಳ ಪರಿಹಾರಕ್ಕೆ ಅರ್ಜಿ ಕೊಡುವ ಪದಟಛಿತಿ ಇರಬಾರದು. ಬದಲಿಗೆ ಅಧಿಕಾರಿಗಳು, ನೌಕರರು ಜನರ ಹತ್ತಿರವೇ ಹೋಗಿ ಸಮಸ್ಯೆಗಳನ್ನು ಪರಿಹರಿಸುವ ಕೆಲಸವಾದಾಗ ಮಾತ್ರ. ಜನರಿಗೆ ಅಧಿಕಾರಿಗಳು ಮೇಲೆ ಪ್ರೀತಿ, ವಿಶ್ವಾಸ, ಗೌರವ ಬರುತ್ತದೆ. ಆಡಳಿತದ ಮೇಲೆ ಆಗ ನಂಬಿಕೆ ಬರುತ್ತದೆ ಎಂದರು. ಪದೇ ಪದೇ ಚುನಾವಣೆಯ ಕಾರ್ಯ ನಿರ್ವಹಿಸಿದರೆ, ಅಧಿಕಾರಿಗಳಿಗೆ ಜನಸಾಮಾನ್ಯರ ಕೆಲಸ ಮಾಡಲು ಕಷ್ಟವಾಗುತ್ತದೆ. ಅವರ ಅಧಿಕಾರದ ಬಹಳಷ್ಟು ಅವಧಿ ಚುನಾವಣೆ ಕಾರ್ಯಕ್ಕೆ ಸೀಮಿತವಾಗುತ್ತದೆ ಎಂದು ಹೇಳಿದರು. ಅಧಿಕಾರ ಸ್ವೀಕಾರ: ಉಪವಿಭಾಗಾಧಿಕಾರಿ ಎಚ್.ಜನೇಶ್ ಅವರು ಬೆಂಗಳೂರಿನ ಆರೋಗ್ಯ ಇಲಾಖೆಯ ನಿರ್ದೇಶನಾಲಯದ ಮುಖ್ಯ ಆಡಳಿತಾಧಿಕಾರಿಯಾಗಿ ವರ್ಗಾವಣೆಯಾದ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ಬಿ.ವಾಣಿ ಅವರು ನೂತನ ಉಪವಿಭಾಗಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದರು. ತಹಶೀಲ್ದಾರ್ ಶಿವಕುಮಾರಸ್ವಾಮಿ, ಕೆ.ಆರ್.ಪೇಟೆ ತಹಶೀಲ್ದಾರ್ ಅಹೋಬಿಲಯ್ಯ, ಉಪ ತಹಶೀಲ್ದಾರ್‌ರಾದ ಪಾಪಣ್ , ರತ್ನಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಈ ದಿನದ ಪ್ರಾಯೋಜಕರು: Systems Technology : ಸಿಸ್ಟಮ್ ಟೇಕ್ನಾಲಜಿ : ಮಂಡ್ಯ-ಮೈಸೂರು-ಹಾಸನ : 7259108417: Today Offer : Intel Processor2.6 Ghz, Ram 1GB, 160GB Hard Disk, DVD R/W, Mouse, TFT Monitor 15 Inch.. Offer Price : ಕೇವಲ 9999/- Only. Home Delivery (High Configuration ಕಂಪ್ಯೂಟರ್ ಗಳನ್ನು Assemble ಮಾಡಿಕೊಡಲಾಗುವುದು. ಎಲ್ಲಾ ಕಂಪ್ಯೂಟರ್ ಬಿಡಿಭಾಗಗಳ ಮೇಲೆ ಕಂಪನಿ ಆಧಾರದ ಮೇಲೆ 2 ವರ್ಷ ಅಥವಾ 3 ವರ್ಷ ಗ್ಯಾರಂಟಿ ಕೊಡಲಾಗುವುದು)
Posted on: Mon, 02 Sep 2013 02:58:55 +0000

Trending Topics



Recently Viewed Topics



76

© 2015