ಸಿಟಿ ಬ್ಯಾಂಕ್ ನವರಿಗೆ - TopicsExpress



          

ಸಿಟಿ ಬ್ಯಾಂಕ್ ನವರಿಗೆ ಕನ್ನಡದಲ್ಲಿ ಮಾಹಿತಿ ಕೊಡಬೇಕು ಎಂದು ಆಗ್ರಹಿಸಿ ಬಾಬು ಅಜಯ್ ರವರು ಹಲವಾರು ಪತ್ರಗಳನ್ನು ಬರೆದಿದ್ದರು. ಇದಕ್ಕೆ ಸ್ಪಂದಿಸಿ ಸಿಟಿ ಬ್ಯಾಂಕ್ ನವರು ಕಳುಹಿಸಿದ ಪಾಸ್ ಬುಕ್ (ಖಾತೆಯ transaction details) ನಲ್ಲಿ ಕನ್ನಡವೂ ಕೊಡಲಾಗುತ್ತಿದೆ. ಇದು ಗ್ರಾಹಕರಿಗೆ ಸಿಕ್ಕ ಮೊದಲ ಜಯ. ಕನ್ನಡದಲ್ಲಿ ಸೇವೆ ಕೊಡಲೇಬೇಕು ಎಂದು ಪಟ್ಟು ಹಿಡಿದರೆ ಅದು ಸಿಕ್ಕೇ ಸಿಗುತ್ತದೆ ಅನ್ನುವುದಕ್ಕೆ ಇದೊಂದು ಒಳ್ಳೆಯ ಉದಾಹರಣೆ . ಈ ಬದಲಾವಣೆಗೆ ಕಾರಣರಾದ ಬಾಬು ಅಜಯ್ ಹಾಗೂ ಪತ್ರ ಬರೆದ ಎಲ್ಲಾ ಗೆಳೆಯರಿಗೂ ಅಭಿನಂದನೆಗಳು. ಇನ್ನೂ ಹಲವಾರು ವಿಷಯಗಳನ್ನು ಪಾಸ್ ಬುಕ್ ನಲ್ಲಿ ಕೊಡಲಾಗುತ್ತಿಲ್ಲ. ಎಲ್ಲಾ ಮಾಹಿತಿಯನ್ನು ಆದಷ್ಟು ಬೇಗ ಕನ್ನಡದಲ್ಲಿ ಸಿಗುವಂತೆ ಸಿಟಿ ಬ್ಯಾಂಕ್ ನವರಿಗೆ ಒತ್ತಾಯ ಮಾಡೋಣ. #Citibank #KannadaConsumers #Kannada
Posted on: Wed, 13 Nov 2013 06:18:38 +0000

Trending Topics



Recently Viewed Topics




© 2015