Press Release : AAP Supports Gorur Villagers Protest against - TopicsExpress



          

Press Release : AAP Supports Gorur Villagers Protest against Garbage Disposal/ಮಾಗಡಿ ತಾಲೂಕಿನ ಗೊರೂರು ಗ್ರಾಮದಲ್ಲಿ ಕಸ ವಿಲೇವಾರಿ ಖಂಡಿಸಿ ಅಲ್ಲಿನ ಗ್ರಾಮಸ್ಥರ ಹೋರಾಟಕ್ಕೆ ಆಮ್ ಆದ್ಮಿ ಪಕ್ಷವು ಬೆಂಬಲಿಸುತ್ತದೆ ಕರ್ನಾಟಕ ಸರಕಾರ ಮತ್ತು ಬಿ ಬಿ ಎಂ ಪಿ ಬೆಂಗಳೂರಿನ ಕಸವನ್ನು ಬೆಂಗಳೂರಿನಲ್ಲಿಯೇ ತ್ಯಾಜ್ಯ ವಿಂಗಡಣೆ ಮತ್ತು ಸಂಸ್ಕರಣೆ ಮಾಡಬೇಕು ಎಂಬ ಹೈಕೋರ್ಟ್ ಆದೇಶವನ್ನು ಧಿಕ್ಕರಿಸಿ ರಾಮನಗರ ಜಿಲ್ಲೆಯ,ಮಾಗಡಿ ತಾಲೂಕಿನ ಗೊರೂರು ಗ್ರಾಮದಲ್ಲಿ ಕಸ ವಿಲೇವಾರಿ ಮಾಡಲು ತಯಾರಿ ನೆಡೆಸಿದ್ದು, ಅದರ ಸರ್ವೇ ಕಾರ್ಯಕಾಗಿ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದ್ದನ್ನು ಗಮನಿಸಿದ ಹಲವಾರು ಗ್ರಾಮಸ್ಥರು ರಸ್ತೆ ತಡೆ ನೆಡೆಸಿ ತಮ್ಮ ಗ್ರಾಮದಲ್ಲಿ ಯಾವುದೇ ಕಾರಣಕ್ಕೂ ಕಸ ವಿಲೇವಾರಿ ಮಾಡಬಾರದು ಎಂದು ಪ್ರತಿಭಟನೆ ನೆಡೆಸಿದರು. ಆದರೆ ಪೋಲಿಸರೊಡನೆ ಬಂದಿದ್ದ ಅಧಿಕಾರಿಗಳು ಪ್ರತಿಭಟನೆಯಲ್ಲಿ ತೊಡಗಿದ್ದ ಗ್ರಾಮಸ್ಥರ ಮೇಲೆ ಲಾಠಿ ಮಾಡುವ ಮೂಲಕ ಮತ್ತು ಹಲವರನ್ನು ಬಂಧಿಸುವ ಮೂಲಕ ಗೊರೂರು ಗ್ರಾಮಸ್ಥರ ಮೇಲೆ ದೌರ್ಜನ್ಯ ಎಸಗಿದ್ದಾರೆ, ಈ ಸಂಧರ್ಭದಲ್ಲಿ ಹತ್ತಾರು ಜನರಿಗೆ ಗಾಯಗಳಾಗಿದ್ದು ಮತ್ತು ಶ್ರೀನಿವಾಸ್ ಎಂಬ ಗ್ರಾಮಸ್ಥನ ತಲೆಗೆ ತೀವ್ರವಾದ ಪೆಟ್ಟು ಬಿದ್ದಿದ್ದು ಅವರು ನೆಲಮಂಗಲದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಈ ಸಂಪೂರ್ಣ ಘಟನೆಯನ್ನು ಮತ್ತು ಗ್ರಾಮಸ್ಥರ ಮೇಲೆ ಪೊಲೀಸರು ಮತ್ತು ಅಧಿಕಾರಿಗಳು ನೆಡೆಸಿದ ದಬ್ಬಾಳಿಕೆಯನ್ನುಆಮ್ ಆದ್ಮಿ ಪಕ್ಷವು ತೀವ್ರವಾಗಿ ಖಂಡಿಸುತ್ತದೆ. ಇಂದು ಸ್ಥಳಕ್ಕೆ ಭೇಟಿ ನೀಡಿದ್ದ ಆಮ್ ಆದ್ಮಿ ಪಕ್ಷದ ಮುಖಂಡ ಶ್ರೀ ರವಿ ಕೃಷ್ಣಾ ರೆಡ್ಡಿಯವರು ಗ್ರಾಮಸ್ಥರು ನೆಡೆಸುತ್ತಿರುವ ಶಾಂತಿಯುತ ಹಾಗೂ ಅಹಿಂಸಾತ್ಮಕ ಪ್ರತಿಭಟನೆಗೆ ತಮ್ಮ ಬೆಂಬಲ ಸೂಚಿದ್ದು ಮತ್ತು ಸರಕಾರ ಮತ್ತು ಬಿ ಬಿ ಎಂ ಪಿ ಬೆಂಗಳೂರಿನ ಕಸವನ್ನು ಬೆಂಗಳೂರಿನಲ್ಲಿಯೇ ತ್ಯಾಜ್ಯ ವಿಂಗಡಣೆ ಮತ್ತು ಸಂಸ್ಕರಣೆ ಮಾಡದೆ ಬೆಂಗಳೂರಿನ ಸುತ್ತ ಮುತ್ತಲಿನ ಗ್ರಾಮಗಳನ್ನು ಮಂಡೂರು ಗ್ರಾಮದಂತೆ ತಿಪ್ಪೆಗಳನ್ನಾಗಿ ಮಾದ ಬೇಕೆಂದು ತೀರ್ಮಾನಿಸಿದ್ದಾರೆ, ಇದರ ಹಿಂದೆ ದೊಡ್ಡ ಗಾರ್ಬೇಜ್ ಮಾಫಿಯಾ ಕೆಲಸ ಮಾಡುತ್ತಿದೆ,ಸರಕಾರಕ್ಕೆ ಬೆಂಗಳೂರಿನ ಸುತ್ತ ಮುತ್ತಲಿರುವ ಗ್ರಾಮಗಳ ಬಗ್ಗೆ ಯಾವುದೇ ಕಾಳಜಿ ಇಲ್ಲ ಎಂದು ಅವರು ಖಂಡಿಸಿದರು ಮತ್ತು ಆಮ್ ಆದ್ಮಿ ಪಕ್ಷವು ಗೊರೂರು ಗ್ರಾಮಸ್ಥರ ಈ ಹೋರಾಟಕ್ಕೆ ಜೊತೆಯಾಗಿ ನಿಲ್ಲುತ್ತದೆ ಎಂದು ತಿಳಿಸಿದರು.
Posted on: Fri, 28 Nov 2014 13:45:20 +0000

Trending Topics



Recently Viewed Topics




© 2015