ಅಯೋಧ್ಯೆಯಲ್ಲಿ ರಾಮಮಂದಿರ - TopicsExpress



          

ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟುತ್ತೇವೆ ಅಂತಾ ಉತ್ತರ ಪ್ರದೇಶ ರಾಜ್ಯಪಾಲ ರಾಮ್ ನಾಯಕ್ ಹೇಳಿದ್ದಾರೆೆ. ಈ ಮೂಲಕ ಕೇಂದ್ರ ಸರ್ಕಾರಕ್ಕೆ ರಾಮನಾಯಕ್ ಮುಜುಗರ ತಂದಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಪೆಟ್ರೋಲಿಯಂ ಸಚಿವರಾಗಿದ್ದ ರಾಮನಾಯಕ್ ಈಗ ಉತ್ತರ ಪ್ರದೇಶ ರಾಜ್ಯಪಾಲರಾಗಿದ್ದಾರೆ .ರಾಮ್ ನಾಯಕರ ಈ ಹೇಳಿಕೆಗೆ ಉತ್ತರ ಪ್ರದೇಶದ ಆಡಳಿತಾರೂಢ ಸಮಾಜವಾದಿ ಪಕ್ಷ ಖಂಡಿಸಿದೆ. ಇನ್ನು, ಜೆಡಿಯು ನಾಯಕ ನರೇಂದ್ರ ಮೋದಿ ಬದ್ಧ ವೈರಿ ನಿತೀಶ್ ಕುಮಾರ್ ಕೂಡ ರಾಮ್ ನಾಯಕ್ ವಿರುದ್ಧ ಕಿಡಿಕಾರಿದ್ದಾರೆ. ರಾಮನಾಯಕ್ ಈಗ ಬಿಜೆಪಿಯ ಕಾರ್ಯಕರ್ತರಲ್ಲ. ಅವರು ಉತ್ತರಪ್ರದೇಶದ ರಾಜ್ಯಪಾಲರಾಗಿದ್ದು, ಅದನ್ನು ಅರಿತು ಘನತೆಯಿಂದ ವರ್ತಿಸುವುದನ್ನು ರೂಢಿಸಿಕೊಳ್ಳಬೇಕು ಅಂತಾ ಸಮಾಜವಾದಿ ಪಕ್ಷ ಆಗ್ರಹಿಸಿದೆ. ರಾಜ್ಯಪಾಲರ ಹುದ್ದೆಯಲ್ಲಿದ್ದೂ ಕ್ಷುಲ್ಲಕ ರಾಜಕೀಯದಲ್ಲಿ ಮುಳುಗಿರುವ ಯೂಪಿ ರಾಜ್ಯಪಾಲ ರಾಮ್ ನಾಯಕ್ ರನ್ನು ರಾಷ್ಟ್ರಪತಿಗಳು ವಜಾಗೊಳಿಸಬೇಕು ಅಂತಾ ಜೆಡಿಯೂ ಆಗ್ರಹಿಸಿದೆ.
Posted on: Fri, 12 Dec 2014 10:12:18 +0000

Trending Topics



Recently Viewed Topics




© 2015