ಚಾರ್ಮಾಡಿ ಘಾಟ್, - TopicsExpress



          

ಚಾರ್ಮಾಡಿ ಘಾಟ್, ಕುದುರೆಮುಖ, ಮುಳ್ಳಯನಗಿರಿ ಅಂತೆಲ್ಲ ನಾವೆಲ್ಲ FACE BOOK ಫ್ರೆಂಡ್ಸ್ ಸೇರಿಕೊಂಡು ಪ್ಲಾನ್ ಮಾಡಿದ್ದಾಯ್ತು. ಅದಕ್ಕೆ ನಮ್ಮ Santosh Kumar Mehandale (SAM) Team leader ಮಾಡಿದ್ದೂ ಆಯ್ತು... ಎಷ್ಟೋ ಸಲ ಪ್ಲಾನ್ ಏನೇನೋ ಮಾಡಿರ್ತೀವಿ. ಅದೆಲ್ಲ ಆಗುತ್ತಾ....ಇದೂ ಆಗುತ್ತೋ ಇಲ್ಲವೋ ಸ್ವಲ್ಪ doubt ಇದ್ದೇ ಇತ್ತು. ನನಗೆ ಪ್ರಕೃತಿ ಸೌಂದರ್ಯ ಸವಿಯಲು ಎಷ್ಟು ಇಷ್ಟ ಅಂತ ನಿಮಗೆಲ್ಲ ಗೊತ್ತು. ಅದೂ ಮಳೆಗಾಲದಲ್ಲಿಯೇ ಮಲೆನಾಡ ಸೌಂದರ್ಯ (ಅದೂ ಅಪ್ಪಟ ಮಲನಾಡು) ಸವಿಯೋ ಮಜಾನೇ ಬೇರೆ. ಒಳ್ಳೆ ಸಮಾನ ಮನಸ್ಕ ಸ್ನೇಹಿತರಿದ್ದರಂತೂ ಅದರ ಸೌಂದರ್ಯ ದುಪ್ಪಟ್ಟಾಗುತ್ತದೆ ಅಲ್ಲವೇ? College days ನಾ re-create ಮಾಡಿಕೊಡಬೇಕು ನನಗೆ ಅಂತ ಸ್ಯಾಮ್ ಗೆ ಹೇಳಿದ್ದೆ.. ಡನ್ ಅಂದರು.. SAM. ಪತಿಗೆ ಸುಳ್ಳು ಹೇಳಿದ್ದಾಯ್ತು. ಎಲ್ಲ ಮುಖತಹ ಪರಿಚಯ ಇದೆ ಅಂತ.. ಮೊದಮೊದಲು - ಬೇಡ.. ಯೋಚನೆ ಮಾಡು.. ನಿನ್ನ ತಲೆ ಕೆಟ್ಟಿದೆಯಾ? ಅಂತೆಲ್ಲ ಅಂದರು. Risk ತಗೊಂಡೆ ಬಿಡೋದು ಅಂತ ಯೋಚಿಸಿದೆ.. ಸ್ಯಾಮ್ ಮೂಡಿಗೆರೆ ಟ್ರಿಪ್ ಅಂತ ಗ್ರೂಪ್ ಚಾಟ್ create ಮಾಡಿಯೇ ಬಿಟ್ಟರು. ಅದರಲ್ಲಿ ನಮ್ಮ ಟ್ರಿಪ್ ಗೆ ಬರುವವರನ್ನೆಲ್ಲ ಸೇರಿಸೆ ಬಿಟ್ಟರು. ಹಾಗೆ ಶುರುವಾದ ನಮ್ಮ ಟ್ರಿಪ್ 27 ಜುಲೈ 2014 ಭಾನುವಾರ ಶುರು ವಾಗಿಯೇ ಹೋಯಿತು. ಟ್ರಿಪ್ ಗೆ ಬರುವವರೆಲ್ಲ ಹೊಸಬರು. ಸ್ಯಾಮ್ ಬಿಟ್ಟರಂತೂ ಮತ್ಯಾರೂ FB ಯಲ್ಲಿ ಕೂಡ ಪರಿಚಯವಿಲ್ಲ. ಮೊದಲು ನೋಡಿದ ಮುಖ ನಮ್ಮ ಗಿರಿಜಾ ದು.. ಆಕೆ ಅಷ್ಟೊಂದು friendly ಅಂತ ಅನ್ನಿಸ್ಲಿಲ್ಲ. ಆಮ್ಲೆ ರೂಪ ನೋಡಿದ ಮೇಲೆ ಓಕೇ ಅನ್ನಿಸ್ತು. ಹೇಗೆ ಇವರೆಲ್ಲರ ಜೊತೆ 2-3 ದಿನ ಇರೋದಪ್ಪ.. bore ಆದ್ರೆ ಹೇಗಿದ್ದ್ರೂ ನನ್ನ ಮೊಬೈಲ್ ಇದ್ದೇ ಇದೆ. songs ಕೇಳ್ಕೊಂಡು ಹೋಗಿ ಬಿಡೋದು.. company ಹೇಗಿದ್ದರೇನು.. ಪ್ರಕೃತಿಯ ಮುಂದೆ ಯಾರಿದ್ದರೇನು, ಬಿಟ್ಟರೇನು... ಅಂತೆಲ್ಲ ಯೋಚಿಸಿದೆ. ಆಮೇಲೆ ಸಿಕ್ಕೋರು ಕಮಲೇಶ್ ಗೌಡರು.. ಅವರು ಲೇಟ್ ಬಂದರೂ ಅಂತ ಏನ್ರೀ ಇಷ್ಟು ಹೊತ್ತ ಮಾಡೋದು.. ನಾವು ladies ಎಷ್ಟು ಬೇಗ ಬಂದಿದ್ದೀವಿ...ಅಂತೆಲ್ಲ ಸಣ್ಣಗೆ ದಬಾಯಿಸಿದ್ದಾಯ್ತು. ಆಮೇಲೆ ನಮ್ಮ ಸುಧೀರ್ (ನನಗೇನೋ ಒಬ್ಬ ಪುಟ್ಟ ತಮ್ಮ ಸಿಕ್ಕಿದ feel ಆಯ್ತು)..ದಾರಿಯಲ್ಲಿ ಸಿಕ್ಕೋರು ಪ್ರಾರ್ಥನಾ... ಮೊದಲು ಯಡೆಯೂರು ಹೋಗಿದ್ದಾಯ್ತು. ನನ್ನದೊಂದು ಹರಕೆ ತೀರಿದ ಖುಷಿ ನನಗೆ. ಆಮೇಲೆ ಹಾಸನ ದಾಟಿ ಸಕಲೇಶಪುರಕ್ಕೆ ಹೋಗುವ ದಾರಿಯಲ್ಲಿ ಒಂದು photo session ಮಾಡಿದ್ದಾಯ್ತು. ಆಮೇಲೆ ಮಂಜ಼ಿರಾಬಾದ್ ಫೋರ್ಟ್. ಸಣ್ಣಗೆ ಬರುತ್ತಿದ್ದ ಮಳೆ ಆದರ ಸೌಂದರ್ಯವನ್ನು ಇಮ್ಮಡಿ ಗೊಳಿಸುತ್ತು. ಎಂತ ಅದ್ಭುತ ಸೌಂದರ್ಯ. ಕೋಟೆ ಹತ್ತುವುದು ಒಂಚೂರು ಕಷ್ಟ ಅನ್ನಿಸುತ್ತೆ. ಆದರೆ ಮೇಲೆ ಹೋದ ಮೇಲೆ ಅದರ ಖುಷಿ ವರ್ಣಿಸಲು ಶಬ್ದಗಳಿಲ್ಲ. ರಾತ್ರಿ ಹಾಲ್ಟ್ ಮೂಡಿಗೆರೆ ಹೋಮ್ ಸ್ಟೇನಲ್ಲಿ. ಎಲ್ಲ ಅಚ್ಚುಕಟ್ಟಾಗಿ arrange ಮಾಡಿದೋರು ನಮ್ಮ ಕಾರ್ತಿಕ್ ಬೆಳಗೋಡು. ಅಲ್ಲಿ ಊಟ ತಿಂಡಿ ವ್ಯವಸ್ಥೆ ಇಲ್ಲದ ಕಾರಣ ಹೋಟೆಲ್ ನಲ್ಲಿ ಊಟ ಮಾಡಿದ್ದಾಯ್ತು. ಫ್ರೈಡ್ ರೈಸ್ different ಆಗಿ ರುಚಿ ಅನ್ನಿಸಿತು. ಮರುದಿನ ಬೆಳಿಗ್ಗೆಯೇ ಕುದುರೆಮುಖಕ್ಕೆ ಹೊರಟಿದ್ದಾಯ್ತು. guide ನಮ್ಮ ಕಾರ್ತಿಕ್. ದಾರಿಯುದ್ದಕ್ಕೂ ಫಾಲ್ಸ್ ಗಳು.. ಮಳೆರಾಯ ನಮಗೆ ಎಂತ ಸಾಥ್ ಕೊಟ್ಟಿದ್ದ ಅಂದರೆ... ನಮಗೆ ಒಂಚೂರು ಮಳೆ ಬಂದಿದ್ದ್ರೆ ಚನ್ನಾಗಿತ್ತು ಅನ್ನಿಸಿದ್ದಾಗ ಸಣ್ಣದಾಗಿ ಹನಿಯುತ್ತಿದ್ದ.. ಬಲ್ಲಾಳರಾಯ ಕೋಟೆಯ ಸೌಂದರ್ಯ... ಓ! ಕುದುರೆಮುಖದ ಸೌಂದರ್ಯ ಸವಿದು ಬೇಕೆಂದಲ್ಲಿ ನಿಲ್ಲಿಸಿ ಪ್ರಕೃತಿಯನ್ನು ಮನಸಾರೆ ತುಂಬಿಸಿಕೊಂಡು ಸಾಗಿದ್ದಾಯ್ತು. ಮರುದಿನ ಸುಧಾಕರ ಆಚಾರ್ಯ ಮೂಡಿಗೆರೆ ಅವರ ಮನೆಯಲ್ಲಿ ಒಂದು ಸುಂದರ ಆತಿಥ್ಯ.. ಎಲ್ಲ ಸವಿದು... ಕಾಲಭೈರವೇಶ್ವರ ಮಂದಿರಕ್ಕೆ ಹೋಗುವ ದಾರಿಯ ಸೌಂದರ್ಯವನ್ನೆಲ್ಲ ಸವಿದು.. ಮುಳ್ಳಯ್ಯನಗಿರಿ ಹೋಗುವ ಪ್ಲಾನ್ ಇತ್ತು... ಆದರೆ ಆಗುವುದಿಲ್ಲ ಅಂತ ತಿಳಿದ ಮೇಲೆ cancel ಮಾಡಿ ಬೆಂಗಳೂರಿಗೆ ವಾಪಸ್ಸಾಗಿದ್ದಾಯ್ತು. ನಮ್ಮ ಇನೋವಾ ನಡುಗಿ ಹೋಗಿತ್ತು.. ನಮ್ಮ ಗಲಾಟೆಗೆ.. ಪರಸ್ಪರ ಕಾಲೆಳುಯುವದ್ದಕ್ಕ್ಕೆ... ಹರಟೆ, ನಗು.. ಸೈಲೆಂಟ್ ಆಗಿ ಇರುತ್ತಿದ್ದ ನಮ್ಮ ಕಮಲೇಶ್ನಾ, ಅವರ driving ನಾ.. ನಕ್ಕು ನಕ್ಕು ಅವರಿಗೂ ಕೆನ್ನೆ ನೋವು ಅಂತ complaint ಮಾಡ್ತಿದ್ದರು ಅವರು.. ನನಗೂ ಭಯ... ಜಾಸ್ತಿ ನಕ್ಕರೆ ಅಳಬೇಕಾಗುತ್ತೋ ಏನೋ ಅಂತ... ಒಂದು 6 ತಿಂಗಳಿಗೆ ಆಗೋ ಅಷ್ಟು ನಕ್ಕು ನಲಿದು ಬಂದಿದ್ದಾಯ್ತು.. ಅಲ್ಲಿ ಕಳೆದದ್ದು 3 ದಿನವಾದರೂ ಅಲ್ಲಿಯ ನೆನಪು ನಾವ್ಯರಿಗೂ ಬೇಗ ಮಾಸುವುದಿಲ್ಲ ಅಂತ ನನಗೆ ಗೊತ್ತು. ಸ್ಯಾಮ್ ಗೆ special thanks. ಎಲ್ಲ ಟ್ರಿಪ್ ಫ್ರೆಂಡ್ಸ್ಗೆ ಕೂಡ ನನ್ನ thanks. ಕಳಿಸಿಕೊಟ್ಟ ನನ್ನ ಪತಿದೇವರಿಗೆ ಹೇಗೆ thanks ಹೇಳಲಿ? ಒಟ್ಟಿನಲ್ಲಿ 3 ದಿನಗಳು ಅವಿಸ್ಮರಣೀಯ.. ಯಾರು ಹೇಳಿದೋರು.. Face Book ಅಂದರೆ Fake Book ಅಂತ... ನಿಜವಾದ ಸ್ನೇಹಿತರೂ ಇರ್ತಾರೆ, ಗೊತ್ತಾ? We should be discreet. Thats all. :)
Posted on: Wed, 30 Jul 2014 11:55:36 +0000

Trending Topics



Recently Viewed Topics




© 2015