ನನಗೆ ಗುರುವಾದ ಒಬ್ಬಳು - TopicsExpress



          

ನನಗೆ ಗುರುವಾದ ಒಬ್ಬಳು ಅಪರಿಚಿತಳ ಬಗ್ಗೆ ಹೇಳಬೇಕು ಅನ್ನಿಸಿತು: ಸುಮಾರು 5-6 ವರ್ಷಗಳ ಹಿಂದೆ ಆಫೀಸಿಗೆ ಹೊರಟು ಬಸ್ಸಿಗೆ ಕಾಯುತ್ತಾ city bus stop ನಲ್ಲಿ ಕುಳಿತಿದ್ದೆ. ನನ್ನ ಪಕ್ಕದಲ್ಲಿ ಒಬ್ಬಳು ಕಾಲೇಜ್ ಹುಡುಗಿ ಕುಳಿತಿದ್ದಳು. ಕಾಲಾಡಿಸುತ್ತಾ ಕುಳಿತಿದ್ದ ಅವಳ ಕಾಲು ಅಲ್ಲಿ ಬಂದ ಒಂದು ನಾಯಿಮರಿಗೆ ತಗುಲಿತು. ಕೂಡಲೇ ಆ ನಾಯಿಯನ್ನು ಮುಟ್ಟಿ ಕಣ್ಣಿಗೊತ್ತಿಕೊಂಡಳು. ಅಲ್ಲಿಯೇ ಇದ್ದ ವೃದ್ಧರೊಬ್ಬರು ಅದಕ್ಯಾಕಮ್ಮಾ ನಮಸ್ಕರಿಸಿದೆ ಎಂದು ಕೇಳಿದರು. ಕೂಡಲೇ ಅವಳು ತಾತ..ನಮ್ಮ ಸಂಸ್ಕೃತಿಯಲ್ಲಿ ಪ್ರತಿಯೊಂದರಲ್ಲೂ ದೇವರಿದ್ದಾನೆ ಅಂತ ತಾನೇ ನೀವು ಹೇಳುವುದು. ಅದು ನಾಯಿಯಾದರೆ ಏನಂತೆ? ದೇವರು ಇರುವುದೇ ಆದರೆ ಅದರಲ್ಲೂ ಇದ್ದಾನಲ್ಲವಾ? ಅಂದಳು. ಎರಡು ವಿಷಯ ಅವಳಿಂದ ಕಲಿತೆ - ಉಪದೇಶ ಕೊಡುವುದಲ್ಲ ಆಚರಿಸುವುದು. ಇನ್ನೊಂದು, ಅಪ್ಪಿ ತಪ್ಪಿ ಕಾಲು ತಾಗಿದರೆ ಮನುಷ್ಯರಿಗೆ ಮಾತ್ರ ನಮಸ್ಕರಿಸುತ್ತಿದ್ದವಳು ಅವಳಂತೆಯೇ ಮಾಡುವುದು. :)
Posted on: Mon, 15 Sep 2014 10:55:51 +0000

Trending Topics



Recently Viewed Topics




© 2015