ಮಂಡ್ಯ ಜಿಲ್ಲಾಡಳಿತ - TopicsExpress



          

ಮಂಡ್ಯ ಜಿಲ್ಲಾಡಳಿತ ಇತ್ತೀಚಿಗೆ ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸಿರೋ ಗ್ರಾಮ ಲೆಕ್ಕಿಗರ ತಾತ್ಕಾಲಿಕ ಆಯ್ಕೆ ಪಟ್ಟಿಯಿಂದ ಇಡೀ ಜಿಲ್ಲಾಡಳಿತವೇ ತಲೆ ತಗ್ಗಿಸುವಂತಹ ಪ್ರಮಾದ ನಡೆದುಹೋಗಿದೆ. ಗ್ರಾಮ ಲೆಕ್ಕಿಗರ ನೇಮಕಾತಿಯ ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ಅಭ್ಯರ್ಥಿಯೊಬ್ಬರ ವಿಳಾಸದಲ್ಲಿ ಅಶ್ಲೀಲ ಪದಗಳ ಬಳಕೆಯಾಗಿರೋದು ಈಗ ವಿವಾದಕ್ಕೀಡಾಗಿದೆ. ---------------- ಅಂದಹಾಗೆ ಮಂಡ್ಯ ಜಿಲ್ಲೆಯಲ್ಲಿ ಖಾಲಿ ಇರುವ 90 ಗ್ರಾಮ ಲೆಕ್ಕಾಧಿಕಾರಿಗಳ ಹುದ್ದೆಗಾಗಿ 2013ರಲ್ಲಿ ಅಧಿಸೂಚನೆ ಹೊರಡಿಸಿತ್ತು. ರಾಜ್ಯದ ವಿವಿಧ ಜಿಲ್ಲೆಗಳ ನೂರಾರು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಅವುಗಳನ್ನ ಪರಿಶೀಲಿಸಿದ್ದ ನೇಮಕಾತಿ ಪ್ರಾಧಿಕಾರ, ಅಭ್ಯರ್ಥಿಗಳು ಗಳಿಸಿದ ಅಂಕಗಳ ಆಧಾರದ ಮೇಲೆ ಕಳೆದ ಡಿಸೆಂಬರ್ 27 ರಂದು ಜಿಲ್ಲಾಡಳಿತದ ಅಧಿಕೃತ ವೆಬ್ ಸೈಟ್ನಲ್ಲಿ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿದೆ. ಅಲ್ದೇ, ತಾತ್ಕಾಲಿಕ ಆಯ್ಕೆಪಟ್ಟಿ ಸಂಬಂಧ ಏನಾದರೂ ಆಕ್ಷೇಪಣೆಗಳಿದ್ದರೆ, ಜನವರಿ 29 ರೊಳಗಾಗಿ ಆಕ್ಷೇಪಣೆ ಸಲ್ಲಿಸುವಂತೆ ಅಭ್ಯರ್ಥಿಗಳಿಗೆ ತಿಳಿಸಿತ್ತು. ಈ ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ 3ಎ ವರ್ಗಕ್ಕೆ ಸೇರಿದ ಮೊದಲ ಅಭ್ಯರ್ಥಿ ರಂಗ ಎಂಬುವವರ ವಿಳಾಸದಲ್ಲಿ ಅಶ್ಲೀಲ ಪದಗಳನ್ನು ಬಳಸಲಾಗಿದೆ. ವಿಪರ್ಯಾಸ ಅಂದ್ರೆ ಮಂಡ್ಯ ಜಿಲ್ಲಾಧಿಕಾರಿ ಡಾ.ಅಜಯ್ ನಾಗಭೂಷಣ್ ಆಯ್ಕೆ ಸಮಿತಿ ಅಧ್ಯಕ್ಷರಾಗಿದ್ದು, ಅಪರ ಜಿಲ್ಲಾಧಿಕಾರಿ ಬಿ.ಆರ್.ಪೂರ್ಣಿಮಾ ಅವರು ಕಾರ್ಯದರ್ಶಿಯಾಗಿರುವ ಈ ಸಮಿತಿಯಲ್ಲೇ ಇಂತಹ ತಪ್ಪು ನಡೆದಿರೋದು ನಾಗರಿಕರನ್ನ ಕೆರಳುವಂತೆ ಮಾಡಿದೆ. ಪಟ್ಟಿ ಪ್ರಕಟವಾಗಿ 15 ದಿನಗಳಾದ್ರೂ ಆಗಿರೋ ಲೋಪವನ್ನ ಸರಿಪಡಿಸುವ ಗೋಜಿಗೆ ಹೋಗಿಲ್ಲ.
Posted on: Mon, 12 Jan 2015 10:18:16 +0000

Trending Topics



Recently Viewed Topics




© 2015