ವಂದೇ ಮಾತರಂ’ನ್ನು - TopicsExpress



          

ವಂದೇ ಮಾತರಂ’ನ್ನು ವಿರೋಧಿಸುವ ಧರ್ಮಾಂಧರು... ‘ವಂದೇ ಮಾತರಂ’ನ ವಿಷಯದಲ್ಲಿ ಮಹರ್ಷಿ ಅರವಿಂದರ ಅಭಿಪ್ರಾಯ ಸ್ಪಷ್ಟವಾಗಿದೆ. ಧರ್ಮಾಂಧರು ‘ವಂದೇ ಮಾತರಂ’ ಈ ರಾಷ್ಟ್ರಗೀತೆಯನ್ನು ಯಾವ ರೀತಿ ವಿರೋಧಿಸಿದರು ಹಾಗೂ ಅದರಿಂದಲೇ ಅದು ರಾಷ್ಟ್ರಗೀತೆಯಾಗಲು ಸಾಧ್ಯವಾಗಲಿಲ್ಲ ಎಂಬುದು ಜಗಜ್ಜಾಹೀರಾಗಿದೆ. ಈ ಸಂದರ್ಭದಲ್ಲಿ ಶ್ರೀ. ಅರವಿಂದರು ಹೇಳುತ್ತಾರೆ, ‘ವಂದೇ ಮಾತರಂ’ ಈ ಗೀತೆಯನ್ನು ರಾಷ್ಟ್ರಗೀತೆಯೆಂದು ಸ್ವೀಕರಿಸಲು ಧರ್ಮಾಂಧರ ವಿರೋಧವಿದೆ. ಈ ಭಾರತ ಭೂಮಿಯಲ್ಲಿ ಜನಿಸಿದ ಪ್ರತಿಯೊಬ್ಬ ಭಾರತೀಯನು ತನ್ನನ್ನು ಪಾಲನೆ-ಪೋಷಣೆ ಮಾಡುವ ಭಾರತಭೂಮಿ ಯನ್ನು ಭಾವನಾತ್ಮಕವಾಗಿ ‘ಭಾರತಮಾತೆ’ ಎಂದು ಗೌರವಿಸುತ್ತಾನೆ. ಹೀಗಿರುವಾಗ ಇಲ್ಲಿಯೇ ಹುಟ್ಟಿ ಬೆಳೆದಿರುವ ಧರ್ಮಾಂಧರು ಮಾತೃವಂದನೆಯ ರೂಪದಲ್ಲಿ ‘ವಂದೇ ಮಾತರಂ’ ಗೀತೆಯನ್ನು ಹಾಡಲು ವಿರೋಧಿ ಸುವುದೇಕೆ ? ಇದು ಕವಿತೆಯ ರೂಪದಲ್ಲಿ ಉಪಯೋಗಿಸುವಂತಹ ಒಂದು ಪ್ರತಿಮೆ ಯಾಗಿದೆ, ಜನ್ಮಭೂಮಿಯ ರೂಪದಲ್ಲಿ ಈ ಪಿತೃಭೂಮಿ, ಜನ್ಮಭೂಮಿ, ಪುಣ್ಯ ಭೂಮಿ ಭಾರತದ್ದಾಗಿದೆ ! ಬ್ರಿಟೀಷರ ಆಳ್ವಿಕೆಯ ನಂತರ ರಾಷ್ಟ್ರೀಯತ್ವದ ಭಾರತೀಯ ಸಂಕಲ್ಪನೆ ಯಾರಿಗೂ ಒಪ್ಪಿಗೆಯಿಲ್ಲದಿದ್ದರೆ, ಇಲ್ಲಿ ಜನಿಸುವ ಹಿಂದೂಗಳು ತಮ್ಮಧರ್ಮ, ಸಂಸ್ಕ ತಿ ಮತ್ತು ಪರಂಪರೆಗಳನ್ನು ತ್ಯಜಿಸು ವುದೇ ಒಳಿತಲ್ಲವೇ ? ಹಾಗಾದರೆ ಇಂತಹ ವ್ಯಕ್ತಿಗಳ ಮೂಲಕ ತಾನು ಹಿಂದೂ ಎಂದು ಹೇಳಿಸಿಕೊಳ್ಳುವುದಕ್ಕಿಂತ ಪರ ಧರ್ಮ ಮತ್ತು ನಿರೀಶ್ವರವಾದವನ್ನು ಸ್ವೀಕರಿಸುವುದೇ ಒಳಿತು. ಹಿಂದೂಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಸಿದ್ಧರಾಗಬೇಕು ! ಈ ಭಾರತ ದೇಶದಲ್ಲಿ ಅಧಿಕಾರದ ಲಾಲಸೆಯಿರುವ ಜನರು ಹಾಗೂ ರಾಜ ನೀತಿಜ್ಞರು ಹಿಂದೂ-ಧರ್ಮಾಂಧರ ಐಕ್ಯ ಕ್ಕಾಗಿ ತಮ್ಮ ಅವಶ್ಯಕತೆಗನುಸಾರ ಎಷ್ಟು ಮಹತ್ವ ನೀಡಿದ್ದಾರೆಂದರೆ, ಅದನ್ನು ನೋಡಿ ನನಗೆ ಅತ್ಯಂತ ದುಃಖವಾಗುತ್ತಿದೆ. ಈ ಜನರು ವಾಸ್ತವಿಕತೆಯನ್ನು ನೋಡಿಯೂ ಅಂಧರಂತೆ ಏಕೆ ವರ್ತಿಸುತ್ತಾರೆ ? ಅದ ರಿಂದೇನು ಲಾಭ ? ಮುಂದೊಂದು ದಿನ ಹಿಂದೂಗಳಿಗೆ ತಮ್ಮ ಅಸ್ತಿತ್ವವನ್ನು ಉಳಿಸಿ ಕೊಳ್ಳಲಿಕ್ಕಾಗಿ ಸಂಘರ್ಷ ಮಾಡಬೇಕಾದೀತು. ಇದನ್ನು ತಪ್ಪಿಸಲು ಸಾಧ್ಯವಿಲ್ಲ. ಆದ್ದರಿಂದ ಹಿಂದೂಗಳು ಸಂಘಟಿತರಾಗಿ ಸಾಮರ್ಥ್ಯಶಾಲಿಗಳಾಗುವ ಆವಶ್ಯಕತೆ ಯಿದೆ. ಧರ್ಮಾಂಧ ಬಂಧುಗಳಿಗೆ ನಾನು ಹೇಳುವುದೇನೆಂದರೆ, ಈ ಮೇಲಿನ ಐಕ್ಯದಿಂದ ‘ಹಿಂದೂಗಳು ಅಡಿಯಾಳಾಗಿ ಬಾಳಬಾರದು. ಧರ್ಮಾಂಧರನ್ನು ಓಲೈಸುವ ಜನರೇ, ಎರಡೂ ಸಮಾಜ ತಮ್ಮ-ತಮ್ಮ ಸ್ಥಳದಲ್ಲಿ ಸಂಘಟಿತವಾಗಿರುವುದೇ ಐಕ್ಯದ ಸರ್ವೋತ್ತಮ ಮಾರ್ಗವಾಗಿದೆ. ‘ಸಂಘಟಿತರಾಗಿ ಹಾಗೂ ಸಾಮರ್ಥ್ಯಶಾಲಿಗಳಾಗಿರಿ’, ಎನ್ನುವ ಮಹರ್ಷಿ ಅರವಿಂದ ಘೋಷರ ಈ ಬೋಧನೆಯನ್ನು ನಿರಂತರವಾಗಿ ಸ್ಮರಿಸುವುದು ಅವಶ್ಯಕ ! ಮಹರ್ಷಿ ಅರವಿಂದರ ಅಭಿಪ್ರಾಯವನ್ನುನಮ್ಮ ಸಮಸ್ತ ಹಿಂದೂ ಬಾಂಧವರು ಒಪ್ಪಿಕೊಳ್ಳುತ್ತಿದ್ದರೆ, ಇಂದು ನಮಗೆ ಈ ಭಾರತವನ್ನು ಎಲ್ಲರೀತಿಯಿಂದ ಪೀಡಿಸುವ ಭಯೋತ್ಪಾದನೆಯ ಮತ್ತು ಹಿಂಸಾಚಾರದ ಭೀಕರ ಸಮಸ್ಯೆಯ ಅನುಭವವಾಗುತ್ತಿರಲಿಲ್ಲ. ಸುಸಂಘಟಿತ ಹಾಗೂ ಸಾಮರ್ಥ್ಯ ಶಾಲಿ ಹಿಂದೂ ಸಮಾಜದ ಮೇಲೆ ಆಘಾತ ನಡೆಸಬೇಕಾದರೆ ಈ ಜಿಹಾದಿ ಹಾಗೂ ಧರ್ಮಾಂಧರು ಹತ್ತು ಬಾರಿ ವಿಚಾರ ಮಾಡುವಂತಾಗುತ್ತದೆ. ಹಾಗಾಗಿ ‘ಸುಸಂಘಟಿತ ಹಾಗೂ ಸಾಮರ್ಥ್ಯಶಾಲಿ ಗಳಾಗಿರಿ’, ಎಂಬ ಮಹರ್ಷಿ ಅರವಿಂದರ ಬೋಧನೆಯನ್ನು ನಾವು ನಿರಂತರವಾಗಿ ಸ್ಮರಣೆಯಲ್ಲಿಡಬೇಕು.’ – ವಸಂತ ಅಣ್ಣಾಜಿ ವೈದ್ಯ (ಧನುರ್ಧಾರಿ, ಆಗಸ್ಟ್ ೨೦೧೦)
Posted on: Wed, 07 Aug 2013 07:51:14 +0000

Trending Topics



Recently Viewed Topics




© 2015