A beautiful poem on Karl Marx written by Kannada poet - TopicsExpress



          

A beautiful poem on Karl Marx written by Kannada poet siddalingaiah ಕಾರ್ಲ್ ಮಾರ್ಕ್ಸ್ ಮರೆಮಾಚಿ ಹೋಗಿದ್ದ ಜಗದ ನಿಜಗಳನೆಲ್ಲ ಅರಿಯಲೆಂದಡಿಯಿಟ್ಟೆ ಮುಳ್ಳುಗಳ ಮೇಲೆ ನಿದ್ದೆಮಂಪರುಕವಿದ ಮನುಕುಲವನೆಚ್ಚರಿಸಿ ದುಡಿವ ಜನತೆಗೆ ನೀನು ಕಣ್ಣಾಗಿ ನಿಂತೆ ದಿಕ್ಕೆಟ್ಟ ಹಕ್ಕಿಯೊಂದಲೆವಂತೆ ಕಾಡುಗಳ ಕಷ್ಟಗಳ ಕತ್ತಲೆಯ ಕಂಡೆ ನೀನು ಜ್ಞಾನಗೊಂಡಾರಣ್ಯ ಹೊಕ್ಕವನು ಹೊರಬಂದೆ ಭೂಮಿ ಬೆಳಗಿಸಿದಂಥ ಬೆಳ್ಳಿಚುಕ್ಕೆ ಗಿರಣಿಯಂತ್ರದ ಕೆಳಗೆ ಕೈಜಜ್ಜಿ ಹೋದವನು, ಮೈಮಾರಿಕೊಳುತಿರುವ ಬಡವೆ ಹೆಣ್ಣು ಛಾವಣಿಯ ಕುಸುದವನು, ಹಸಿದು ಕಂಗೆಟ್ಟವನು ಇವರೊಳಗೆ ನಿನ್ನನ್ನು ಕಂಡುಕೊಂಡೆ ತೊಟ್ಟಚಿಂದಿಯ ಕಂಡು ತೇಪೆಹಾಕುವ ಬದಲು ಹೊಸಬಟ್ಟೆಯನು ತರುವ ಕನಸ ಕಂಡೆ ನೊಂದಎದೆಯಲಿ ನಗೆಯ ಹೂವ ಅರಳಿಸಲೆಂದು ಹೋರಾಟಗಳ ಕಟ್ಟಿ ಕನವರಿಸಿದೆ ಬಿಗಿದ ಕೋಳಗಳನ್ನು ಕಡಿದೆಸೆವ ಬಿಡುಗಡೆಯ ನಿನ್ನ ಕನಸುಗಳಿಂದು ಅರಳುತಿಹವು ನ್ಯಾಯ ಕೇಳಲು ಹೊರಟ ಜನರ ಮೆರವಣಿಗೆಯಲಿ ಬಂದು ಮುನ್ನಡೆಸುವುದು ನಿನ್ನ ನೆನಪು
Posted on: Fri, 05 Jul 2013 16:21:58 +0000

Trending Topics



Recently Viewed Topics




© 2015