Enquiry On Karanataka VV Chancellor DR H B Walikar - - TopicsExpress



          

Enquiry On Karanataka VV Chancellor DR H B Walikar - TV9 ಕೊನೆಗೂ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಡಾ. ಎಚ್.ಬಿ.ವಾಲೀಕಾರ್ ವಿರುದ್ಧ ತನಿಖೆ ಆರಂಭವಾಗಿದೆ. ರಾಜ್ಯಪಾಲರ ಆದೇಶದಂತೆ ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಬಿ. ಪದ್ಮರಾಜ್ ನೇತ್ರತ್ವದಲ್ಲಿ ತನಿಖೆಗೆ ಮಾಡಲಾಗ್ತಿದೆ. ವಿಶ್ವವಿದ್ಯಾಲಯದಲ್ಲಿನ ಅಕ್ರಮಗಳ ಬಗ್ಗೆ ತನಿಖೆ ನಡೆಸುವಂತೆ ಕವಿವಿ ಬಚಾವೋ ಸಮಿತಿ ಸದಸ್ಯರು ನೂತನ ರಾಜ್ಯಪಾಲರಾದ ವಾಜುಭಾಯಿ ವಾಲಾರಿಗೆ ಅವ್ಯವಹಾರಗಳ ಕುರಿತ ದಾಖಲೆಗಳನ್ನ ನೀಡಿದ್ದರು. ನಿನ್ನೆ ತನಿಖೆ ಆರಂಭಿಸಿದ ನ್ಯಾಯಮೂರ್ತಿ ಡಿ. ಪದ್ಮರಾಜ್, ವಿವಿಯ ಮುಖ್ಯ ಕಚೇರಿ ಸೇರಿದಂತೆ ಪ್ರತಿಯೊಂದು ವಿಭಾಗದಿಂದಲೂ ಕಡತಗಳ ತರಿಸಿ ಪರಿಶೀಲನೆ ನಡೆಸಿದರು. ಅಲ್ದೆ, ಅಂಕಪಟ್ಟಿ ಖರೀದಿ, ಕಂಪ್ಯೂಟರ್ ಖರೀದಿ, ಸೋಲಾರ್ ಅಳವಡಿಕೆ, ಉಪನ್ಯಾಸಕರ ಹುದ್ದೆ ಭರ್ತಿ ಪ್ರಕರಣ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಮಾಹಿತಿಯನ್ನು ಕಲೆ ಹಾಕಿದರು. ಈಗಾಗಲೇ ತನಿಖೆಯ ಬಗ್ಗೆ ಪರ ಹಾಗೂ ವಿರೋಧದ ಪ್ರತಿಭಟನೆಗಳು ನಡೆದಿದ್ದು, ಒಂದು ಕಡೆ ಕೆಲವರು ತನಿಖೆ ಆಗಲಿ ಅಂತಾ ಪ್ರತಿಭಟನೆ ನಡೆಸಿದ್ದರೆ, ತನಿಖೆ ಬೇಡವೇ ಬೇಡ ಅಂತಾ ಮತ್ತೆ ಕೆಲವರ ಅಭಿಪ್ರಾಯ. ವಿದ್ಯಾರ್ಥಿ ಸಮೂಹದಲ್ಲಿಯೂ ಎರಡು ಗುಂಪುಗಳಾಗಿದ್ದು, ವಾಲೀಕಾರ್ ಪರ ಹಾಗೂ ವಿರೋಧವಾಗಿ ಎರಡು ಬಣಗಳು ಹೋರಾಟ ನಡೆಸಿವೆ.
Posted on: Fri, 19 Sep 2014 06:28:25 +0000

Trending Topics



ody" style="min-height:30px;">
Scorpio and Self-Sabotage Let me tell you a little story about

Recently Viewed Topics




© 2015