Gold Loan Misuse In Mysore Dist Bank form a - TopicsExpress



          

Gold Loan Misuse In Mysore Dist Bank form a Person ಮೈಸೂರಿನಲ್ಲಿ ಚಿನ್ನ ಪರೀಕ್ಷಕನ ಯಡವಟ್ಟಿನಿಂದ ನಕಲಿ ಚಿನ್ನ ಅಡವಿಟ್ಟುಕೊಂಡು ಸಾಲ ನೀಡಿದ್ದು ತಡವಾಗಿ ಬೆಳಕಿಗೆ ಬಂದಿದೆ. ಅಶೋಕ ರಸ್ತೆಯಲ್ಲಿರುವ ಬ್ಯಾಂಕ್ ಆಫ್ ಇಂಡಿಯಾದ ಶಾಖೆಯಲ್ಲಿ 2011ರಲ್ಲಿ ಗಾಯತ್ರಿಪುರಂ ನಿವಾಸಿ ದೀಪಕ್ ಎನ್ನುವವರು 66.5 ಗ್ರಾಂ ಚಿನ್ನ ಅಡವಿಟ್ಟು, 1.27 ಲಕ್ಷ ಸಾಲ ಪಡೆದಿದ್ದರು. ಸಾಲ ನೀಡುವ ಮುನ್ನ ಒಡವೆಗಳನ್ನು ಪರೀಕ್ಷಿಸಿದ್ದ ಚಿನ್ನ ಪರೀಕ್ಷಕ ನಕಲಿ ಚಿನ್ನವನ್ನ ಅಸಲಿ ಎಂದು ಪ್ರಮಾಣೀಕರಿಸಿದ್ದ. ಚಿನ್ನ ಪರೀಕ್ಷೆ ನಂತರ ಬ್ಯಾಂಕ್ ದೀಪಕ್ಗೆ ಸಾಲ ನೀಡಿತ್ತು. ಆದರೆ ಸಾಲ ಪಡೆದಿದ್ದ ದೀಪಕ್ 3 ವರ್ಷಗಳಾದ್ರೂ ಅಡವಿಟ್ಟ ಚಿನ್ನ ವಾಪಸ್ ಪಡೆದಿರಲಿಲ್ಲ. ಆದ್ದರಿಂದ ಬ್ಯಾಂಕ್ ಅಡವಿಟ್ಟಿದ್ದ ಚಿನ್ನವನ್ನ ಹರಾಜು ಹಾಕಿತ್ತು. ಹರಾಜಿನ ವೇಳೆ ದೀಪಕ್ ಅಡವಿಟ್ಟಿದ್ದ ಚಿನ್ನ ನಕಲಿ ಎಂದು ಬಯಲಾಗಿದೆ. ಇನ್ನು ಚಿನ್ನ ಪರೀಕ್ಷಿಸಿದ್ದ ಪರೀಕ್ಷಕ ಎರಡು ವರ್ಷದ ಹಿಂದೆಯೇ ಮೃತಪಟ್ಟಿದ್ದಾರೆ. ಸದ್ಯ ಬ್ಯಾಂಕ್ ಅಧಿಕಾರಿಗಳು ದೇವರಾಜ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Posted on: Sun, 14 Dec 2014 09:59:09 +0000

Trending Topics



Recently Viewed Topics




© 2015