Happy Dipavali. For the people of Ankola this is not a festival of - TopicsExpress



          

Happy Dipavali. For the people of Ankola this is not a festival of lights only, it’s a way of expressing gratitude to cattle, fields and nature. ದೀವಳಿಗೆ ಮತ್ತು ಗೋವಿನಹಬ್ಬದ ಶುಭಾಶಯಗಳು. ದೀವಳಿಗೆ ನಮ್ಮ ಊರ ಜನಕ್ಕೆ ಒಂದು ಋತುಮಾನ ಕಳೆದ ಪರ್ವ. ಗೋವಿನ ಹಬ್ಬ. ಕೃಷಿಕರ ದೊರೆ ಬಲಿಯೀಂದ್ರರಾಯನಿಗೆ ಪಟ್ಟ. ಮೇಯಲು ಕಳಿಸಿದ ರಾಸುಗಳನ್ನು ತಮ್ಮ ಹಟ್ಟಿಯಲ್ಲಿ ಕಟ್ಟುವ ಸಂಭ್ರಮ. ಮುಂಗಾರಿನ ಪೈರು ಕೈಗೆ ಬಂದ ಸಮಾಧಾನ. ಮಳೆಗಾಲದಲ್ಲಿ ಜೀರ್ಣಗೊಂಡ ದಾಮ, ಕೊರಳ ಪಟ್ಟಿ, ಪಟ್ನೆ, ಮಾಲೆ, ಸುಂಗಟಿಗಳನ್ನು ಹೊಸದಾಗಿ ತಂದು ದನಗಳನ್ನು ಸಿಂಗರಿಸುವ ಹುರುಪು. ಸ್ನಿಗ್ಧ ಶರತ್ಕಾಲವನ್ನು ದೀಪಗಳಿಂದ ಸ್ವಾಗತಿಸಿ ಆರಾಧಿಸುವ ಕಾರ್ತಿಕಮಾಸದ ಆಚರಣೆ. ಇದನ್ನೇ ಸ್ಕಂಧಪುರಾಣದಲ್ಲಿ ಶಿಷ್ಟಾಚರಣೆಯೆಂಬಂತೆ ಹೇಳಿದೆ. [ಚಿತ್ರದಲ್ಲಿರುವುದು ಅಂಕೋಲೆಯಲ್ಲಿ ಸಾಮಾನ್ಯವಾಗಿ ಕಾಣಸಿಗುವ ತೆಂಕಲು ತಳಿ.- Please see full screen]
Posted on: Wed, 22 Oct 2014 05:07:07 +0000

Trending Topics



Recently Viewed Topics




© 2015