Kannada school in America Celebrates its 5th - TopicsExpress



          

Kannada school in America Celebrates its 5th year. kannadaprabha/horanadu-kannadiga/%E0%B2%85%E0%B2%AE%E0%B3%87%E0%B2%B0%E0%B2%BF%E0%B2%95%E0%B2%BE%E0%B2%A6%E0%B2%B2%E0%B3%8D%E0%B2%B2%E0%B2%BF-%E0%B2%95%E0%B2%A8%E0%B3%8D%E0%B2%A8%E0%B2%A1-%E0%B2%B6%E0%B2%BE%E0%B2%B2%E0%B3%86%E0%B2%AF-%E0%B3%AB-%E0%B2%A8%E0%B3%87-%E0%B2%B5%E0%B2%BE%E0%B2%B0%E0%B3%8D%E0%B2%B7%E0%B2%BF%E0%B2%95-%E0%B2%98%E0%B2%9F%E0%B2%BF%E0%B2%95%E0%B3%8B%E0%B2%A4%E0%B3%8D%E0%B2%B8%E0%B2%B5/221477.html ಅಮೇರಿಕಾದಲ್ಲಿ ಕನ್ನಡ ಶಾಲೆಯ ೫ ನೇ ವಾರ್ಷಿಕ ಘಟಿಕೋತ್ಸವ First Published: 17 Jun 2014 03:04:25 PM IST ಕರ್ನಾಟಕದಲ್ಲೇ ಕನ್ನಡ ಶಾಲೆಗಳು ಅಪರೂಪವಾಗಿ ದುರ್ಬೀನ್ ಇಡ್ಕೊಂಡು ಹುಡುಕಾಡೋ ಈ ಕಾಲದಲ್ಲಿ, ಇದ್ದರೂ ಮಕ್ಕಳೇ ಕನ್ನಡ ಶಾಲೆಗೆ ಬಾರದಂತಹ ಈ ಕಾಲದಲ್ಲಿ ..ದೂರದ ಅಮೇರಿಕಾದ ಕನೆಕ್ಟಿಕಟ್ನಲ್ಲಿ ಇರುವ ಅಮೇರಿಕನ್ನಡ ಶಾಲೆ ಯಶಸ್ವಿಯಾಗಿ ತನ್ನ ೫ ನೇ ವಾರ್ಷಿಕ ಘಟಿಕೋತ್ಸವ ಕಾರ್ಯಕ್ರಮವನ್ನು ಜೂನ್ ೧೪ ರಂದು ಕನೆಕ್ಟಿಕಟ್ನ ಸೌತ್ ವಿಂಡ್ಸರ್ ನಲ್ಲಿ ಏರ್ಪಡಿಸಿತ್ತು! ಎಲ್ಲ ಮಕ್ಕಳು ತಮ್ಮ ಪೋಷಕರೊಂದಿಗೆ ಸಂಭ್ರಮದಿಂದ ಭಾಗವಹಿಸಿದ್ದ ಈ ವಾರ್ಷಿಕ ಘಟಿಕೋತ್ಸವ ವರ್ಷಾಳ ಪ್ರಾರ್ಥನೆಯೊಂದಿಗೆ ಶುರುವಾಯಿತು. ಅನಿತಾ ಜೋಯಿಸ್ ಅವರಿಂದ ಸ್ವಾಗತ. ಆಮೇಲೆ ಎಲ್ಲ ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯಗಳನ್ನು ಕನ್ನಡದಲ್ಲೇ ಹಂಚಿಕೊಂಡರು. ಕನ್ನಡ ಅಕ್ಷರ ಕಲಿಸಿದ ಅನಿತಾ ಜೋಯಿಸ್ ಮತ್ತು ಪ್ರತೀ ವಾರ ಒಂದೊಂದು ಉತ್ತಮ ಕನ್ನಡ ನೀತಿಕಥೆ ಹೇಳಿ ಮಕ್ಕಳಿಗೆ ರಂಜಿಸುತ್ತಿದ್ದ ರಘು ಸೋಸಲೆಯವರಿಗೆ ಧನ್ಯವಾದ ತಿಳಿಸಿದ ನಂತರ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಎಲ್ಲ ಮಕ್ಕಳಿಗೂ ಸರ್ಟಿಫಿಕೇಟ್ ನೀಡಲಾಯಿತು. ವಂದನಾರ್ಪಣೆಯಾದಮೇಲೆ ಲಘು ಉಪಹಾರದೊಂದಿಗೆ ಈ ಚಿಕ್ಕ ಹಾಗು ಚೊಕ್ಕ ಕನ್ನಡ ಕಾರ್ಯಕ್ರಮಕ್ಕೆ ಪೋಷಕರೊಂದಿಗೆ ಇಂಡಿಯಾದಿಂದ ಆಗಮಿಸಿದ್ದ ಅಜ್ಜ-ಅಜ್ಜಿಯರು ಮಕ್ಕಳ-ಮೊಮ್ಮಕ್ಕಳ ಕನ್ನಡದ ಕಲಿಕೆ , ಅಭಿಮಾನ ನೋಡಿ ಸಂತೋಷಗೊಂಡರೆ ಅಕ್ಷರ ಕಲಿಸಿದ ಅನಿತಾ ಜೋಯಿಸ್ ಹಾಗು ತಂಡದವರಿಗೆ ಏನೋ ಒಂದು ರೀತಿಯ ಸಂತೃಪ್ತಿ , ಸಮಾಧಾನ. ಹೀಗೆಯೇ ಈ ಕನ್ನಡ ಶಾಲೆ ಮುಂದೆಯೂ ಯಶಸ್ವಿಯಾಗಿ ನಡೆಯಲಿ ...ಕನ್ನಡದ ಕಂಪನ್ನು ಎಲ್ಲೆಡೆ ಹರಡಲಿ ಎಂದು ಆಶಿಸುವ ... ಎಲ್ಲೇ ಇರು , ಹೇಗೆ ಇರು , ನೀ ಕನ್ನಡ ಕಲಿ-ನಲಿ ..! - ನಾಗರಾಜ್.ಎಂ ಧನ್ಯವಾದಗಳು. ಪ್ರಕಾಶ್ ಹೆಬ್ಬಳ್ಳಿ ಕಾಯಕವೇ ಕೈಲಾಸ - ವಿಶ್ವಗುರು ಬಸವ
Posted on: Mon, 30 Jun 2014 06:30:12 +0000

Trending Topics



Thomas Dean Regular Fit Sport Shirt Olive Large More
My day has been getting better and better! What was bad news on
Wednesday, 6 August 2014 Tropical Storm and Hurricane weather

Recently Viewed Topics




© 2015