ಆಂಧ್ರದ ಅನಂತಪುರ - TopicsExpress



          

ಆಂಧ್ರದ ಅನಂತಪುರ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಅನಂತಪುರ ಜಿಲ್ಲೆಯ ಮಡಕಶಿರ ಬಳಿ ಎಪಿಎಸ್ಆರ್ಟಿಸಿ ಬಸ್ವೊಂದು ಉರುಳಿಬಿದ್ದಿದೆ. ಈ ಅಪಘಾತದಲ್ಲಿ ಮೃತರ ಸಂಖ್ಯೆ 16ಕ್ಕೇ ರಿದೆ. ಇಲ್ಲಿ, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಬಸ್ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳೇ ಇದ್ದರು ಎನ್ನಲಾಗಿದೆ. ಈ ಬಸ್ ಮಡಕಶಿರದಿಂದ ಪೆನುಕೊಂಡಕ್ಕೆ ತೆರಳುತ್ತಿತ್ತು. ಇದೊಂದು ಭೀಕರ ಅಪಘಾತವಾಗಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ. ಸದ್ಯ ಗಾಯಾಳುಗಳನ್ನ ಬೆಂಗಳೂರು ಹಾಗೂ ಹಿಂದೂಪುರದ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ. ಗಂಭೀರವಾಗಿ ಗಾಯಗೊಂಡವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಹಾಗೂ ಕೊಲಂಬಿಯಾ ಏಷ್ಯಾ ಆಸ್ಪತ್ರೆಗಳಿಗೆ ಸಾಗಿಸಲಾಗ್ತಿದ್ದು, ಸಣ್ಣಪುಟ್ಟ ಗಾಯಗಳಾದವರಿಗೆ ಹಿಂದೂಪುರ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಬಸ್ನಲ್ಲಿ ಸುಮಾರು 60 ಮಂದಿ ಪ್ರಯಾಣಿಕರಿದ್ದರು ಎನ್ನಲಾಗಿದ್ದು, ಬಹುತೇಕರು ಗಾಯಗೊಂಡಿದ್ದಾರೆ. ಇನ್ನು ಸಿಎಂ ಚಂದ್ರಬಾಬು ನಾಯ್ಡು ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದಾರೆ. ಗಂಭೀರ ಗಾಯಾಳುಗಳಿಗೆ ತಲಾ 2 ಲಕ್ಷ ರೂಪಾಯಿ, ಸಣ್ಣಪುಟ್ಟ ಗಾಯಾಳುಗಳಿಗೆ 1 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಇನ್ನು ಗಾಯಾಳುಗಳಿಗೆ ಸಮರ್ಪಕ ಚಿಕಿತ್ಸೆ ನೀಡುವಂತೆ, ಗಾಯಾಳುಗಳು ದಾಖಲಾಗಿರುವ ಆಸ್ಪತ್ರೆಗೆ ಸೂಚಿಸಲಾಗಿದೆ. ಇನ್ನು ದುರಂತದ ಕುರಿತು ಉನ್ನತ ತನಿಖೆಗೆ ಸಿಎಂ ಚಂದ್ರಬಾಬು ನಾಯ್ದು ಆದೇಶಿಸಿದ್ದಾರೆ. ಅಪಘಾತ ಸ್ಥಳಕ್ಕೆ ಸಚಿವರಾದ ಪಲ್ಲೆ ರಘುನಾಥ್ ರೆಡ್ಡಿ, ಪೆರಿಟಾಲ ಸುನೀತಾ, ರಾಘವ್ ರಾವ್ ಭೇಟಿ, ಪರಿಶೀಲನೆ ನಡೆಸಿದ್ರು. ಇದೇ ವೇಳೆ ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ರು. ------------ ಇನ್ನು ಮಡಕಶಿರ-ಪೆನುಗೊಂಡ ನಡುವಿನ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಸಂಚಾರಕ್ಕೆ ಕಿರಿದಾದ ಜಾಗವಿದೆ. ಈ ಹಿನ್ನೆಲೆಯಲ್ಲಿ, ಎದುರಿನಿಂದ ಬಸ್ ಮತ್ತೊಂದು ವಾಹನಕ್ಕೆ ಜಾಗ ಬಿಡಲು, ಬಸ್ ರಸ್ತೆಯ ಬದಿಗೆ ಚಲಿಸಿದೆ. ಆದ್ರೆ, ಬಸ್ ಆಯತಪ್ಪಿ ಪಕ್ಕದಲ್ಲೇ ಇದ್ದ ಕಂದಕಕ್ಕೆ ಉರುಳಿಬಿದ್ದಿದೆ ಎನ್ನಲಾಗ್ತಿದೆ.
Posted on: Wed, 07 Jan 2015 14:24:25 +0000

Trending Topics



Recently Viewed Topics




© 2015