ಜಯಕಿರಣ ಪತ್ರಿಕೆಯಲ್ಲಿ - TopicsExpress



          

ಜಯಕಿರಣ ಪತ್ರಿಕೆಯಲ್ಲಿ ಬ೦ದತಹ ಯುವತಿಯೊಬ್ಬಳ ಮನದಾಳದ ಮಾತು.. ಪಡೀಲ್‌ನಲ್ಲಿ ನಡೆದ ಹೋಂ ಸ್ಟೇ ಮತ್ತು ನಂತರ ನಡೆದ ಘಟನೆಗಳನ್ನು ನೋಡಿದ ಮೇಲೆ ನನ್ನ ಕೆಲವು ಅನಿಸಿಕೆಗಳನ್ನುವ್ಯಕ್ತಪಡಿಸಬೇಕೆಂದು ಅನಿಸಿತು. ಬಜರಂಗದಳ, ಹಿಂದೂ ಯುವಸೇನೆ ಅಥವಾ ಹಿಂದೂ ಜಾಗರಣ ವೇದಿಕೆ ಯಂತಹ ಸಂಘಟನೆಗಳು ನಮ್ಮ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದ ನಂತರ ಯಾರು ಬೇಕಾದರೂ ಏನೇ ಟೀಕೆ ಮಾಡಲಿ, ಪ್ರತಿಭಟನೆ ನಡೆಸಲಿ, ಲಕ್ಷಾಂತರ ಯುವತಿ ಯರು, ಮಹಿಳೆಯರು ಇಂದು ನಿರ್ಭೀತಿಯಿಂದ ರಾತ್ರಿ ಕೂಡಾ ಸಂಚರಿಸುವಂತಾಗಿದೆ ಎಂಬುದು ನೂರಕ್ಕೆ ನೂರು ಸತ್ಯ. ಈ ಸಂಘಟನೆಗಳು ಅಸ್ತಿತ್ವಕ್ಕೆ ಬರುವ ಮುಂಚೆ ಯುವತಿಯರು, ಮಹಿಳೆಯರು ಸಂಚರಿಸುವ ಅಥವಾ ಅವರು ಕೆಲಸ ಮಾಡುತ್ತಿರುವ ಜಾಗಗಳಲ್ಲಿ ಕೀಚಕರಿಂದ ವಿವಿಧ ರೀತಿಯ ಕಿರುಕುಳಗಳನ್ನು, ತೊಂದರೆಗಳನ್ನು ಅನುಭವಿಸುತ್ತಿದ್ದರು. ಯಾವಾಗ ಈ ಸಂಘಟನೆಗಳು ಗೂಸಾದ ರುಚಿ ತೋರಿಸಲು ಆರಂಭಿಸಿದವೋ? ಅಂದಿನಿಂದ ಅನ್ಯ ಧರ್ಮದವರು ಬಿಡಿ; ಹಿಂದೂ ಧರ್ಮದ ಪುಂಡರೂ ಕೂಡ ಯುವತಿಯರನ್ನು, ಮಹಿಳೆಯರನ್ನುಚುಡಾಯಿಸಲು ಹಿಂದೆ ಮುಂದೆ ನೋಡಲಾರಂಭಿಸಿದರು.ಯುವತಿಯರು ಕೂಡಾ ಈ ರೀತಿ ನಡೆದರೆ ಸಂಘಟ ನೆಯ ಸಹೋದರರಿಗೆ ಸುದ್ದಿಮುಟ್ಟಿಸಿ ಧೈರ್ಯದಿಂದ ಕೆಲಸ ಕಾರ್ಯ ಮಾಡುತ್ತಿದ್ದರು. ಈ ಧೈರ್ಯ ಬಂದದ್ದು ಪೊಲೀಸರಿಂದ ಅಲ್ಲ. ಕೆಲವು ಪುಂಡರು ಯುವತಿಯರನ್ನು ಪ್ರೀತಿ ಪ್ರೇಮದ ನಾಟಕವಾಡಿ ಅವರ ಶೀಲಹರಣ ಮಾಡಿ ಕೊಂದು ಪೊದೆಯಲ್ಲೋ, ನದಿಯಲ್ಲೋ ಎಸೆಯುತ್ತಿದ್ದರು, ವಿದೇಶಗಳಿಗೆ ಮಾರಾಟ, ಮತಾಂತರ ಮಾಡುತ್ತಿದ್ದರು, ವೇಶ್ಯಾವಾಟಿಕೆಗೆ ದೂಡುತ್ತಿದ್ದರು. ಇತ್ತೀಚೆಗೆ ಇವೆಲ್ಲಾ ಬಯಲಾದದ್ದು ಪೊಲೀಸರಿಂದ ಅಲ್ಲ, ಹಿಂದೂ ಸಂಘಟನೆಗಳ ಯುವಕರಿಂದ. ಈಗ ಇದೇ ಮಾದರಿಯನ್ನು ಇತರ ಧರ್ಮದವರೂ ಮಾಡು ತ್ತಿದ್ದಾರೆ. ಮಂಗಳೂರಿನಲ್ಲಿ ಪಾರ್ಟಿ ಹೆಸರಿನಲ್ಲಿ ಮಸಾಜ್ ಸೆಂಟರ್‌ಗಳಲ್ಲಿ, ಲಾಡ್ಜ್‌ಗಳಲ್ಲಿ, ಪಬ್‌ಗಳಲ್ಲಿ ನಡೆಯುತ್ತಿದ್ದ ಅನೈತಿಕ ಚಟುವಟಿಕೆಗಳನ್ನು ತಡೆಯಲು ಪೊಲೀಸರು ವಿಫಲರಾದಾಗ ಹಿಂದೂ ಸಂಘಟನೆಗಳು ಇಲ್ಲಿಗೆ ತಾವೇ ದಾಳಿ ಮಾಡಲು ಪ್ರಾರಂಭಿಸಿದರು. ಗಮನಾರ್ಹವಾದ ಸಂಗತಿ ಎಂದರೆ ಹಿಂದೂ ಸಂಘಟನೆಗಳು ಕೇವಲ ಅಲ್ಪಸಂಖ್ಯಾತ ಸಮುದಾಯದ ಯುವಕರ ಮೇಲೆ ಮಾತ್ರ ದಾಳಿ ಮಾಡಿದ್ದಲ್ಲ. ಅನೈತಿಕ ಚಟುವಟಿಕೆ ನಡೆಸುವ, ಹುಡುಗಿಯರನ್ನು ಪ್ರೀತಿಸಿ ವಂಚಿಸಿದ ಹಿಂದೂಗಳ ಮೇಲೂ ದಾಳಿಯನ್ನು ನಡೆಸಿವೆ ಎಂಬುದು ಅರಿಯಬೇಕಾಗಿದೆ. ಇದರ ಮುಂದುವರಿದ ಭಾಗವೇ ಹೋಂಸ್ಟೇ ದಾಳಿ. ಆದರೆ ಇದಕ್ಕೆ ಪ್ರಚೋದನೆ ಯಾರಿಂದ ಹೇಗೆ ಸಿಕ್ಕಿತು ಎಂಬುದು ಜನರಿಗೆ ಗೊತ್ತಾಗಬೇಕಾಗಿದೆ. ಈ ಬಗ್ಗೆ ತನಿಖೆ ನಡೆಯಬೇಕು. ಬರ್ತ್‌ಡೇ ಪಾರ್ಟಿ ನಮ್ಮ ಸಂಸ್ಕೃತಿಯಲ್ಲ. ಆದರೂ ಪಾರ್ಟಿ ನಡೆಸಲೇಬಾರದು ಎನ್ನುವಂತಿಲ್ಲ. ಅದು ಅವರವರ ಇಚ್ಛೆ. ಅದಕ್ಕೊಂದು ರೀತಿ, ರಿವಾಜು ಎಂಬುದಿದೆ. ಹಿರಿಯರು ಮನೆ ಮಂದಿ ಮತ್ತು ಸ್ನೇಹಿತರೊಂದಿಗೆ ಹುಟ್ಟುಹಬ್ಬ ಆಚರಿಸುವುದು ನಮ್ಮ ಪದ್ಧತಿ. ಆದರೆ ಪಡೀಲ್ ಹೋಂ ಸ್ಟೇಯಲ್ಲಿ ಆದದ್ದೇನು? ಕೇವಲ ಬರ್ತ್‌ಡೇ ಪಾರ್ಟಿಗೆ ಅಷ್ಟು ದೊಡ್ಡ ಕಟ್ಟಡವನ್ನು ಎರಡು ದಿವಸಕ್ಕೆ ನಿಗದಿಪಡಿಸಲಾಗಿದ್ದು, ಅಲ್ಲಿ ಕೇವಲ ಯುವಕರು ಮತ್ತು ಯುವತಿಯರು ಮಾದಕ ಪೇಯಗಳೊಂದಿಗೆ ಅರೆಬರೆ ಬಟ್ಟೆಯಲ್ಲಿ ಸಿದ್ದರಾದುದು ಯಾವುದಕ್ಕೆ? ಕುಮುದ ಕಾಮತ್ ಎಂಬವರು ತನ್ನ ಮಗನನ್ನು ಅಲ್ಲಿವರೆಗೆ ಬಿಟ್ಟು ಬಂದಿದ್ದಾ ರಂತೆ. ಆದರೆ ಬರ್ತ್‌ಡೇ ಪಾಟಿಯಲ್ಲಿ ಅವರೇಕೆ ಭಾಗವಹಿಸಲಿಲ್ಲ. ಅಥವಾ ಅವರಿಗೆ ಪ್ರಾಯಕ್ಕೆ ಬಂದ ಮಗಳಿದ್ದರೆ ಮಗನೊಂದಿಗೆ ಅವಳನ್ನೂ ಕಳುಹಿಸಬಹುದಿತ್ತಲ್ಲವೇ? ಮಸಾಜ್ ಸೆಂಟರ್ ಮತ್ತು ಪಾರ್ಟಿ ಆಯೋಜಿಸಿದ್ದವರ ‘ಕಾಮಪುರಾಣ’ ಹೊರಜಗತ್ತಿಗೆ ಈಗ ಗೊತ್ತಾಗುತ್ತಾಇದೆ. ಇಂತಹ ಬರ್ತ್‌ಡೇ ಪಾರ್ಟಿಗಳನ್ನು ಬೆಂಬಲಿಸುವವರು ತಮ್ಮ ಮನೆಯ ಹೆಣ್ಣು ಮಕ್ಕಳನ್ನು, ಮಾದಕ ಪೇಯಗಳನ್ನು, ಮಾದಕ ವಸ್ತು ಸೇವಿಸಿ ಮಜಾ ಉಡಾಯಿಸುವ ಇಂತಹ ಪಾರ್ಟಿಗಳಿಗೆ ಕಳುಹಿಸಿಕೊಡುತ್ತಾರೆಯೇ ಎಂಬುದು ನನ್ನ ಪ್ರಶ್ನೆ. ಅಲ್ಪಸಂಖ್ಯಾ ತರನ್ನು ಓಲೈಸಲು ಯಾವ ಕಾರಣ ಸಿಗುತ್ತದೆ ಎಂದು ಚಾತಕ ಪಕ್ಷಿಗಳಂತೆ ಕಾಯುತ್ತಿರುವ ಕಾಂಗ್ರೆಸ್, ಜೆಡಿಎಸ್ ಮುಂತಾದ ಜಾತ್ಯತೀತ ಪಕ್ಷಗಳು ಮತ್ತು ಕೇವಲ ಹಿಂದೂ ಧರ್ಮವನ್ನೇ ಗುರಿಯಾಗಿಸಿರುವ ವಿಚಾರವಾದಿಗಳು ಮತ್ತು ಕೇವಲ ಅಲ್ಪಸಂಖ್ಯಾತರ ಪರವಾಗಿ ಮಾತ್ರ ಹೇಳಿಕೆ ನೀಡುವ, ಪ್ರತಿಭಟನೆ ನಡೆಸುವ ಕೋಮು ಸೌಹಾರ್ದ ವೇದಿಕೆಗಳಂತಹವರಿಗೆ ಅಸ್ಸಾಂನಲ್ಲಿ ನಡೆದ ನರಮೇಧ ಕಣ್ಣಿಗೆ ಕಾಣಿಸುವುದೇ ಇಲ್ಲ. ಅದನ್ನು ಖಂಡಿಸಲು ಅವರಿಗೆ ನಾಲಿಗೆ ಇಲ್ಲವೆ? ಪ್ರತಿಭಟನೆ ನಡೆಸಲು ಸಮಯವೇ ಇಲ್ಲವೇ? ಒಂದು ವೇಳೆ ಹೋಂಸ್ಟೇಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಯುವತಿಯರಿದ್ದು, ಅಲ್ಪಸಂಖ್ಯಾತ ಸಂಘಟನೆ ಅಥವಾ ವ್ಯಕ್ತಿಗಳು ದಾಳಿ ನಡೆಸಿದ್ದರೆ ಕಾಂಗ್ರೆಸ್‌ನವರಾಗಲಿ, ಜೆಡಿಎಸ್‌ನವರಾಗಲೀ, ವಿಚಾರವಾದಿಗಳಾಗಲಿ ತುಟಿ ಬಿಚ್ಚುತ್ತಿದ್ದರೇ? ಅಥವಾ ಕಾಂಗ್ರೆಸ್‌ನ ಅಮ್ರತಾ ಶೆಣೈಯವರು ದಾಳಿ ಮಾಡಿದವರ ಮನೆಗೆ ನುಗ್ಗುತ್ತೇವೆ ಎಂದು ಹೇಳುತ್ತಿದ್ದರೇ? ವಿಚಾರವಾದಿ, ಚಿಂತಕ ರಾಜಶೇಖರ್‌ರವರೇ ಕರಾವಳಿಯಲ್ಲಿ ಸತ್ಯ, ನ್ಯಾಯ ಸತ್ತು ಹೋಗಿಲ್ಲ. ಅದು ಯಾವತ್ತೂ ಸಾಯಲ್ಲ ಸ್ವಾಮೀ, ಓರ್ವ ಹಿಂದೂ ಯುವತಿ ಯನ್ನು ಮುಸ್ಲಿಂ ಯುವಕನಿಗೆ ಮದುವೆ ಮಾಡಿಸಿ ಕೋಮು ಸೌಹಾರ್ದತೆ ಮೆರೆದಿದ್ದೇನೆ ಎಂದು ತಮ್ಮ ಬೆನ್ನನ್ನು ತಾನೇ ತಟ್ಟಿಕೊಳ್ಳುತ್ತಿದ್ದೀರಾ? ಕರಾವಳಿಯಲ್ಲಿ ಎಲ್ಲಾದರೂ ಒಂದು ಕಡೆ ಹಿಂದೂ ಹುಡುಗ ಮತ್ತು ಮುಸ್ಲಿಂ ಯುವತಿ ಗುಟ್ಟಾಗಿ ಪ್ರೀತಿಸುತ್ತಿರಬಹುದು. ತಾಕತ್ತಿದ್ದರೆ ಅಂತಹವರನ್ನು ಹುಡುಕಿ ಮದುವೆ ಮಾಡಿಸಿ ನೋಡಿ. ತಮಗೆ ಅಥವಾ ತಮ್ಮ ಕುಟುಂಬದಲ್ಲಿ ಪ್ರಾಯಕ್ಕೆ ಬಂದ ಯುವಕರು ಯಾರಾದರೂ ಇದ್ದರೆ ಅವರಿಗೆ ಓರ್ವ ಬಡ ಮುಸ್ಲಿಂ ಯವತಿಯನ್ನು ತಂದು ಮದುವೆ ಮಾಡಿಸಿ ನೋಡಿ. ಆ ಕ್ಷಣ ದಲ್ಲೇ ನಿಮ್ಮ ವಿರುದ್ಧ ಫತ್ವಾ ಹೊರಡುತ್ತದೆ. ನಿಮ್ಮ ಹತ್ಯೆಗೆ ಸ್ಕೆಚ್ ತಯಾರಾಗುತ್ತದೆ. ಬೇಕಾದರೆ ಪರೀಕ್ಷಿಸಿ ನೋಡಿ. ನಮ್ಮ ಜಿಲ್ಲೆಯ ವಿಚಾರವಾದಿ ಎಂದು ಹೇಳಿಕೊಳ್ಳುವ ನರೇಂದ್ರನಾಯಕರೇ ನಿಮಗೆ ಹಿಂದೂ ಧರ್ಮದ ರಹಸ್ಯಗಳು ಮತ್ತು ಪವಾಡಗಳು ಮಾತ್ರ ಕಾಣುವುದು. ಅನ್ಯ ಧರ್ಮದ ಪವಾಡಗಳನ್ನು ಬಯಲು ಮಾಡಲು ಹೋದರೆ ಏನಾಗುತ್ತದೆ ಎಂದು ನಿಮಗೆ ಗೊತ್ತಿದೆ. ಆದುದರಿಂದ ನೀವು ಹಿಂದೂ ಧರ್ಮ ಬಿಟ್ಟು ಅನ್ಯ ಧರ್ಮದ ಉಸಾಬರಿಗೆ ಹೋಗುವುದಿಲ್ಲ. ಶಾಂತಿಪ್ರಿಯರನ್ನು ಹೀಯಾಳಿಸಿ ಪ್ರಚಾರಗಿಟ್ಟಿಸಲು ನಿಮಗೆ ನಾಚಿಕೆಯೆನಿಸುವುದಿಲ್ಲವೇ? ಹೋಂ ಸ್ಟೇಯಂತಹಾ ದಾಳಿಗಳು ಮರುಕಳಿಸದೇ ಇರಬೇಕಾದರೆ ನೈತಿಕತೆಯ ಗೆರೆಯನ್ನು ದಾಟದಂತೆ ಎಲ್ಲರೂ ಎಚ್ಚರಿಕೆ ವಹಿಸಬೇಕಾಗಿದೆ. ಅಮಲು ಪದಾರ್ಥ ಸೇವಿಸಿ ಡಿಜೆಗೆ ಮೈಮರೆತು ಕುಣಿಯುವುದು, ದೇಹವನ್ನು ತೆರೆದು ತೋರಿಸುತ್ತಾ ದೇಹ ಬೆಸೆದು ಕಾಮ ತಣಿಸುವುದು ಮಾತ್ರ ಬಾಂಧವ್ಯವಲ್ಲ. ಅದರ ಬದಲು ಮನಸ್ಸು ಗಳು ತೆರೆದುಕೊಳ್ಳುವಂತಹಾ ಕಾರ್ಯಕ್ರಮಗಳನ್ನುಹಾಕಿಕೊಳ್ಳುವಲ್ಲಿ ಹಿರಿಯರು, ಯುವಕ - ಯುವತಿಯರು ಪ್ರಯತ್ನಿಸಬೇಕಾಗಿದೆ. ಪಡೀಲ್‌ನ ಹೊಂ ಸ್ಟೇ ಬಗ್ಗೆ ಸ್ಥಳೀಯರು ಆಕ್ರೋಶ ಹೊಂದಿದ್ದರು ಎಂದಾದರೆ ಅಲ್ಲಿಏನು ನಡೆಯುತ್ತಿತ್ತು ಎಂಬುವುದನ್ನು ಸಾಮಾನ್ಯ ನಾಗರಿಕನೂ ಅರ್ಥೈಸಿಕೊಳ್ಳಬಹುದಾಗಿದೆ. ~ ಪ್ರಭಾ, ಕುಪ್ಪೆಪದವು
Posted on: Sun, 04 Aug 2013 07:31:51 +0000

Trending Topics



Recently Viewed Topics




© 2015