ನಾನು ಇತ್ತೀಚಿಗೆ - TopicsExpress



          

ನಾನು ಇತ್ತೀಚಿಗೆ ಇಂಟರ್ನೆಟ್ಲ್ಲಿ ಕನ್ನಡದ ಹೊಸ ಚಿತ್ರಗಳ ಮಧುರ ಹಾಡುಗಳಿಗಾಗೆ ಹುಡುಕಾಡುತ್ತಿರಬೇಕಾದರೆ “ಸವಾರಿ-2” ಚಿತ್ರವೊಂದರ ಹಾಡು “ನಿನ್ನ ದನಿಗಾಗಿ ನಿನ್ನ ಕರೆಗಾಗಿ ನಿನ್ನ ಸಲುವಾಗಿ ಕಾಯುವೆ....” ಸಿಕ್ಕಿತು. ನಿಜ ಹೇಳುತ್ತೇನೆ ಈ ಹಾಡು ನನಗೆ ಅದ್ಯಾವ ಪರಿ ಹುಚ್ಚು ಹಿಡಿಸಿದೆಯೆಂದರೆ ನಾನಿದನ್ನು ಈಗಾಗಲೇ ಸುಮಾರು ಐವತ್ತು ಸಾರಿ ಕೇಳಿರಬಹುದೇನೋ/ನೋಡಿರಬಹುದೇನೋ! ಜೊತೆಗೆ ಈ ಹಾಡು ನನಗರಿವಿಲ್ಲದಂತೆ ನನ್ನೊಳಗೊಂದು ಹೊಸ ಪ್ರೇಮ ಪುಳಕವನ್ನು ಹುಟ್ಟು ಹಾಕಿದೆಯೆಂದರೆ ನೀವು ನಂಬಲೇಬೇಕು. ಅಬ್ಬಬ್ಬಾ! ಅದೇನು ಸಾಹಿತ್ಯ! ಅದೇನು ಸಂಗೀತ! ಅದೆಷ್ಟು ಚೆಂದದ ಚಿತ್ರಿಕರಣ! ಅಷ್ಟು ಚೆಂದದ locationನ್ನು ಎಲ್ಲಿ ಹುಡುಕಿದರು ನಿರ್ದೇಶಕರು? ಅದೆಲ್ಲಿಯದೋ ಹಸಿರು ಹೊತ್ತ ಕೆಂಪು ಗುಡ್ದಗಳು (ಬಹುಶಃ ಕೆಮ್ಮಣ್ಣುಗುಂಡಿ ಇರಬೇಕು) ಮತ್ತು ಬೇಕಲ್ ಫೋರ್ಟ್ನ್ನು ತುಂಬಾ ಅದ್ಭುತವಾಗಿ ತೋರಿಸಿದ್ದಾರೆ ಈ ಹಾಡಿನಲ್ಲಿ. ಈ ಹಾಡಿನ ಸಾಹಿತ್ಯ ಮತ್ತು ಸಂಗೀತ ಹದವಾಗಿ ಮಿಳಿತಗೊಂಡಿದ್ದರೆ ಅಲ್ಲಿ ಬರುವ ದೃಶ್ಯಗಳೆಲ್ಲವೂ ಹಾಡಿಗೆ ಮತ್ತಷ್ಟು romantic ಮೆರಗನ್ನು ತಂದುಕೊಟ್ಟಿವೆ. ಜಯಂತ್ ಅವರ ಚೆಂದದ ಸಾಲುಗಳಿಗೆ ಮಣಿಕಾಂತ್ ಕದ್ರಿ ಅವರ ಸಂಗೀತ ಅಲ್ಲೆಲ್ಲೋ ಹಿನ್ನೆಲೆಯಲ್ಲಿ ಜುಳುಜುಳು ಎಂದು ಹರಿದಂತೆ ಭಾಸವಾಗುತ್ತದೆ. ಈ ಹಾಡನ್ನು ಹಾಡಿದವರು ಯಾರೋ ಗೊತ್ತಿಲ್ಲ. ಒಟ್ಟಿನಲ್ಲಿ ನಾನು ಇತ್ತೀಚಿಗೆ ಗಮನಿಸಿದಂತೆ ಕನ್ನಡದಲ್ಲಿ ಒಳ್ಳೊಳ್ಳೆ ಹಾಡುಗಾರರು ಬರುತ್ತಿದ್ದಾರೆ. I wish all of them a grand success in their career. ಇನ್ನು ಈ ಹಾಡಿಗೆ ಆ ಹುಡುಗ ಮತ್ತು ಹುಡುಗಿ (ಅವರ ಹೆಸರು ನನಗೆ ಗೊತ್ತಿಲ್ಲ) ಅಷ್ಟೇ romantic ಆಗಿ ಅಭಿನಯಿಸಿದ್ದಾರೆ. They make a fine pair! Please watch this song. Here is the link-https://youtube/watch?v=mTuPDGFboNU ನೋಡುವಾಗಲೇ ನಿಮ್ಮಲ್ಲೂ ಪ್ರೇಮ ಪುಳಕಗಳು ಏಳದಿದ್ದರೆ ಕೇಳಿ. ಮುಟ್ಟಿಯೂ ಮುಟ್ಟದ ಹಾಗೆ, ಅಪ್ಪಿಯೂ ಅಪ್ಪದ ಹಾಗೆ, ಸ್ಪರ್ಶಿಸಿಯೂ ಸ್ಪರ್ಶಿಸದ ಹಾಗೆ ಒಂದು ಪ್ರೇಮವನ್ನು ಈ ದಿನಗಳಲ್ಲಿ ಇಷ್ಟೊಂದು ನಯ-ನಾಜೂಕಾಗಿ ತೋರಿಸಲು ಸಾಧ್ಯವೆ? ಎಂದು ನಿರ್ದೇಶಕರ ಪ್ರತಿಭೆಗೆ ಬೆರಗಾಗಿದ್ದೇನೆ. Hats off to him!
Posted on: Sun, 19 Oct 2014 15:04:49 +0000

Recently Viewed Topics




© 2015