ನಮ್ಮಲ್ಲಿ ಇರುವ ಸೌಕರ್ಯ - TopicsExpress



          

ನಮ್ಮಲ್ಲಿ ಇರುವ ಸೌಕರ್ಯ ಇನ್ನೊಬ್ಬರ ಬಾಳಿ ಇಲ್ಲದೇ ಇರಬಹುದು ಏನಂತೀರಿ? ಈ ಬರಹ ಯಾರ ಮನಸ್ಸನ್ನೂ ನೋಯಿಸಲು ಬರೆಯುತ್ತಿಲ್ಲ .ಆದರೂ ಬರೆಯಲೇ ಬೇಕೆನಿಸಿತು ಯಾಕಂದ್ರೆ ನಮ್ಮ ಹಲವರ ಮನಸಲ್ಲಿ ಈ ಅಭಿಪ್ರಾಯ ಖಂಡಿತ ಇರುತ್ತೆ ,ಅದನ್ನು ಸ್ವಲ್ಪ sideline ಮಾಡುವ ದೃಷ್ಟಿಯಿಂದ ಒಂದು ಸಣ್ಣ ಪ್ರಯತ್ನ . ನನಗೂ ಬರೆಯುವ ಹುಚ್ಚು ,ಮನಸಲ್ಲಿ ಇದ್ದಿದ್ದನ್ನ ಲೇಖನದ ಮೂಲಕ ಹೊರಹಾಕುವ ಜ್ಞಾನವನ್ನು ತಾಯಿ ಶಾರದೆ ಕರುಣಿಸಿದ್ದಾಳೆ .ಇಂತಹ ಬರವಣಿಗೆಗಳಿಗೆ ಸಾಮಾಜಿಕ ಜಾಲತಾಣಗಳು ವೇದಿಕೆಯಾಗುತ್ತಿರುವುದು ನಿಜಕ್ಕೂ ಉತ್ತಮ ವಿಚಾರ . . ನಾನು ಸಾಮಾಜಿಕ ತಾಣಗಳ ಬಳಕೆ ಪ್ರಾರಂಭಿಸಿದ್ದು 2006ರಿಂದ ಮೊನ್ನೆ ತಾನೇ ಮಾಯವಾದ orkut ನಿಂದ ಅಲ್ಲಿಂದ ಫೇಸ್ಬುಕ್ ದಾರಿ ಹಿಡಿದು 2013 ರ ವರೆಗೂ ನನ್ನಲ್ಲಿ ಲೇಖನ ಬರೆಯುವ ಸಮಯ ,ವ್ಯವಸ್ತೆಯು ಇರಲಿಲ್ಲ ಯಾಕಂದ್ರೆ ಪತ್ರಿಕೆಗಳಿಗೆ ಬರೆಯುವಷ್ಟು ಪರ್ಫೆಕ್ಟ್ ನಾನಲ್ಲ ,ಆದ್ದರಿಂದ ನನ್ನ statuಸ್ನಲ್ಲಿ ಗೀಚುವ ಅಭ್ಯಾಸ ಶುರು ಮಾಡಿಕೊಂಡೆ ಅದೂ ಸಾಧ್ಯವಾಗಿದ್ದು ನನ್ನ windowsphone ಬಂದ ನಂತರಾನೆ .ಬರೆಯಲು ಪ್ರಾರಂಭಿಸಿದೆ ಮೊದಲ ಲೈಕ್ ಬಂದಾಗ ಕುಶಿಯೋ ಕುಶಿ ಆದ್ದರಿಂದ ಇನ್ನಷ್ಟು ಹೆಚ್ಚು ಹುಮ್ಮಸ್ಸು ಬಂತು .ಅದೇ ರೀತಿ blackboard ಪೋಸ್ಟ್ ಮಾಡುವ ತಂತ್ರ ಸಿಕ್ಕಿಬಿಟ್ಟಿತು .ಸಾಮಾನ್ಯವಾಗಿ ನನ್ನ ಟಾಪಿಕ್ ಸಹಿತ ಲೇಖನಗಳಿಗೆ ಹೆಸರನ್ನು ಹಾಕುತಿದ್ದೆ ಆದರೆ blackboard ಪೋಸ್ಟ್ಗಳಿಗೆ ಹೆಸರನ್ನು ಹಾಕುತ್ತಿರಲಿಲ್ಲ ಆದಕಾರಣ ಅವು ಹಲವು shareಗಳನ್ನೂ ಕಾಣುತಿದ್ದವು . ಆ ಪೋಸ್ಟ್ಗಳನ್ನು ತಮ್ಮದೇ ಹೆಸರಿನಲ್ಲಿ ಹಲವು pageಗಳಲ್ಲಿ ,timelineಗಳಲ್ಲಿ ಹಾಕಿ ಶಹಬ್ಬಾಸ್ಗಿರಿಯನ್ನೂ ಪಡೆದವರಿದ್ದಾರೆ ಆದರೆ ಅದನ್ನು ನನ್ನ ಕೃಪೆ ಎಂದು ಹಾಕಲೂ ವಿನಂತಿಸಿಲ್ಲ ಯಾಕೆಂದರೆ ನನ್ನಪ್ರಕಾರ ವಿಚಾರಗಳು ಮುಟ್ಟಬೇಕೆ ಹೊರತು ಹೆಸರಲ್ಲ . . ಹಲವರಿಗೆ ತಮ್ಮ ಮನಸಲ್ಲೂ ಅಂತಹದೇ ವಿಚಾರಗಳಿರಬಹುದು ಆದಕಾರಣ ಇತರರ ಲೇಖನ ಕಾಪಿ ಮಾಡಬಹುದು ಅಥವಾ ಬರೆಯುವ ಕೌಶಲ್ಯ ಇರದೇ ಹೋಗಬಹುದು ಅಥವಾ ವ್ಯವಸ್ತೆ ಇರದಿರಬಹುದು ಆದ್ದರಿಂದ ಯಾರೋ ಒಬ್ಬರು ನಮ್ಮ ಲೇಖನಗಳನ್ನು ಕದ್ದರೆ ಅಥವಾ ಕಾಪಿ ಮಾಡಿದರೆ ವಿಚಾರಗಳು ತಲುಪುತ್ತವಲ್ಲ ಎಂದು ಸುಮ್ಮನಿರೋಣ . ಏನಂತೀರಿ ? ಕೃಪೆ :ಜ್ಞಾನದಾತೆ ಶಾರದೆ ಬರೆದ ಮೂರ್ಖ :ದೀಕ್ಷಿತ್ s ಕೊಣಾಜೆ
Posted on: Sun, 12 Oct 2014 21:36:02 +0000

Trending Topics



Recently Viewed Topics




© 2015