ಹಚ್ಚೋಣ - TopicsExpress



          

ಹಚ್ಚೋಣ ಹಣತೆಯನ್ನು, ಹಾದಿಗೂ ಬೀದಿಗೂ, ಓಣಿಗೂ ಕೋಣೆಗೂ, ತಮವನ್ನು ತೊಡೆವ, ದೂರದೃಷ್ಟಿಯ ಹಡೆವ, ದಿವ್ಯಜ್ಯೋತಿಯ ದೀವಿಗೆಯನು! ಹಚ್ಚೋಣ ಹಣತೆಯನ್ನು, ಕೋಶ-ಕೋಶದೊಳಗೆ, ಅಂತರಂಗನಾತ್ಮದೊಳಗೆ, ತೋಮರದಿ ತಿವಿದು, ರಕುತವನೇ ಬಸಿದ ಮಾನವನ ಮನಶ್ಶುದ್ಧಿಗೆ ಜ್ಞಾನಜ್ಯೋತಿಯ ದೀವಿಗೆಯನು! ಹಚ್ಚೋಣ ಹಣತೆಯನ್ನು, ಅಂಧತೆಯ ನೆರಳೊಳಗೂ, ನೋಡಲಿ ನಮ್ಮ ಕಣ್ಣು, ಸೇರಿದ ಮೇಲೂ ಈ ದೇಹ ಭೂದೇವಿಯ ಮಣ್ಣು, ಹಚ್ಚೋಣ ಬನ್ನಿರೈ ಬನ್ನಿ ತೇಜೋರೂಪಿ ದೀಪ್ತಿಯನ್ನು! --> ಮಂಜಿನ ಹನಿ dewdrop143.blogspot.in/2012/11/blog-post_11.html ಹಳೇ ಪದ್ಯ, ದೀಪಾವಳಿಗೇ ಬರ್ದಿದ್ದು.. ಎಲ್ರಿಗೂ ದೀಪವಳಿ ಹಬ್ಬದ ಶುಭಾಶಯಗಳು..:-) Wish you happy Deepavali to all of you, may the light of knowledge and insights enter into your lives..:-)
Posted on: Wed, 22 Oct 2014 10:30:33 +0000

Trending Topics



Recently Viewed Topics




© 2015