೧ ರೂಪಾಯಿ ಅಕ್ಕಿ !! ಏನಿದರ - TopicsExpress



          

೧ ರೂಪಾಯಿ ಅಕ್ಕಿ !! ಏನಿದರ ಲೆಕ್ಕ ?? ೧ ರೂಪಾಯಿಗೆ ಒಂದು ಚೆನ್ನಾಗಿರೋ ಚಾಕಲೇಟ್ ಸಿಗದ ಕಾಲದಲ್ಲಿ ೧ ರೂಪಾಯಿಗೆ ೧ ಕೆಜಿ ಅಕ್ಕಿ ಕೊಡುವ ಯೋಜನೆಗೆ ಕಾಂಗ್ರೆಸ್ ಸರ್ಕಾರ "ಕೈ" ಹಾಕಿದೆ. ಕೇಂದ್ರದಲ್ಲಿ ದೇಶದ ಅರ್ಥ ವ್ಯವಸ್ಥೆಯನ್ನು ಬುಡಮೇಲು ಮಾಡಿದ್ದೂ ಸಾಕಾಗದೆ ಕರ್ನಾಟಕದಲ್ಲೂ ತನ್ನ ಚಾಳಿಯನ್ನು ಪ್ರಾರಂಭಿಸಿದೆ. ೧ ರೂಪಾಯಿ ಅಕ್ಕಿ ಯೋಜನೆ ನಮ್ಮ ರಾಜ್ಯದ ಅರ್ಥ ವ್ಯವಸ್ಥೆಯ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದೆಂದರೆ ,ಕರ್ನಾಟಕ ಬಹುಬೇಗ ಆಂಧ್ರಪ್ರದೇಶ, ಕೇರಳದಂತೆ ಪಾತಾಳಕ್ಕೆ ಹೋಗುವ ಕಾಲ ಸನ್ನಿಹಿತವಾಗಿದೆ. ನಮ್ಮ ಮುಖ್ಯಮಂತ್ರಿಗಳು ಯಾವ ಸಂದೇಶವನ್ನು ನಮ್ಮ ಜನತೆಗೆ ನೀಡುತ್ತಿದ್ದಾರೆ? ಈ ಯೋಜನೆ ಆಲಸ್ಯಕ್ಕೆ ನಾಂದಿಯಾಗುವುದಿಲ್ಲವೇ? ಭವ್ಯ ಕರ್ನಾಟಕದ ಜನತೆ ಇನ್ನು ಮುಂದೆ ಆಲಸ್ಯದ ಜನ ಆಗುವುದರಲ್ಲಿ ಯಾವ ಅನುಮಾನ ಇಲ್ಲ. ಈ ನಮ್ಮ ಘನವೆತ್ತ ಮುಖ್ಯಮಂತ್ರಿಯವರು ಜಾತಿವಾರು ಜನ ಗಣತಿ ಮಾಡಬೇಕೆಂದು ಸಂದೇಶ ಸಾರುತ್ತಾ, ಸಮಾಜವನ್ನು ಜಾತಿ ಆಧಾರದ ಮೇಲೆ ವಿಭಾಗಿಸಿ ತಮ್ಮ ವೋಟ್ ಬ್ಯಾಂಕ್ ಬೇಳೆ ಬೇಯಿಸಿಕೊಂಡು ೧ ರೂಪಾಯಿ ಅಕ್ಕಿ ತಿನ್ನಿಸಲು ಯತ್ನಿಸುತ್ತಿದ್ದಾರೆ. ಅರ್ಥ ವ್ಯವಸ್ಥೆಯ ಮೇಲೆ ಬೀರುವ ಪರಿಣಾಮ ಲೆಕ್ಕಿಸದೆ ಕೇವಲ ವೋಟ್ ಬ್ಯಾಂಕ್ ಗಾಗಿ ಈ ರೀತಿ ಯೋಜನೆಗೆ "ಕೈ" ಹಾಕಿರುವ ಮುಖ್ಯಮಂತ್ರಿಯವರಿಂದ ಇನ್ನೇನು ನೀರಿಕ್ಷಿಸಲು ಸಾದ್ಯ ? ಈ ಜಾತಿವಾರು ಗಣತಿ, ೧ ರೂಪಾಯಿ ಅಕ್ಕಿ ಇವೆಲ್ಲವೂ ಮಾಡುತ್ತಿರುವ ಕಾರಣ ಒಂದೇ !! ೨೦೧೪ ಚುನಾವಣೆ !!!.ಜನರನ್ನು ಮರಳು ಮಾಡಿ ತಮ್ಮ ವೋಟ್ ಬ್ಯಾಂಕ್ಅನ್ನು ಹೆಚಿಸಿಕೊಳ್ಳುವ ಯೋಜನೆ ಇದು. ಇದರಿಂದ ನಯ ಪೈಸೆ ಲಾಭ ಜನಕ್ಕಗಲಿ ಅಥವ ರಾಜ್ಯದ ಅರ್ಥ ವ್ಯವಸ್ಥೆಗಾಗಲಿ ಇಲ್ಲ. ಅದು ಅಲ್ಲದೆ ಕೆ.ಜಿ ಗೆ ೨೫ ರೂಪಾಯಿ ಕೊಟ್ಟರು ಉತ್ತಮ ಗುಣಮಟ್ಟದ ಅಕ್ಕಿ ಸಿಗದೇ ಇರೋ ಪ್ರಸ್ತುತ ಸಮಾಜದಲ್ಲಿ ೧ ರೂಪಾಯಿ ಅಕ್ಕಿಯ ಸ್ಥಿತಿ ಹೇಗಿರಬಹುದೆಂದು ನಾವಿಲ್ಲಿ ಊಹಿಸಿಕೊಳ್ಳಬಹುದು !!! ಈ ಅಕ್ಕಿಯ ಯೋಜನೆಗಾಗಿ ರಾಜ್ಯದ ಬೊಕ್ಕಸದಿಂದ ೪೫೦೦ ಸಾವಿರ ಕೋಟಿಗೂ ಅಧಿಕ ಭತ್ಯೆ ಭರಿಸಬೇಕಾಗುತ್ತದೆ. ಇಷ್ಟೊಂದು ಹಣವನ್ನು ಶಿಕ್ಷಣ ಕ್ಷೆತ್ರದಲ್ಲೋ ಇಲ್ಲ ಔಧ್ಯೋಗಿಕ ಕ್ಷೇತ್ರದಲ್ಲಿ ಹಾಕಿದಿದ್ದರೆ ನಮ್ಮ ರಾಜ್ಯ ಸ್ವಲ್ಪ ಮಟ್ಟಿನ ಏಳಿಗೆಯನ್ನು ಕಾಣಬಹುದಿತ್ತು. ಬಡ ಜನರಿಗೆ ಔಧ್ಯೋಗಿಕ ತರಭೇತಿ ನೀಡಿ ಅವರನ್ನು ಸ್ವಾವಲಂಬಿಗಳಾಗಿ ಮಾಡುದನ್ನು ಬಿಟ್ಟು ಆಲಸಿಗಳನ್ನಾಗಿ ಮಾಡಲು ಹೊರಟಿದ್ದಾರೆ ನಮ್ಮ ಘನವೆತ್ತ ಮುಖ್ಯಮಂತ್ರಿಗಳು. ಅದೆಷ್ಟೋ ವಿಧ್ಯಾರ್ಥಿಗಳು ಹಣವಿಲ್ಲದೆ , ಕೊಳಕು ಮೀಸಲಾಯಿತಿ ಇಲ್ಲದೆ ಓದಲಾಗದೆ ತಮ್ಮ ತಮ್ಮ ಕನಸು ಬಲಿ ಕೊಟ್ಟಿದ್ದಾರೆ. ಅಂಥವರಿಗೆ ವಿಧ್ಯಾರ್ಥಿ ವೇತನ ಮತ್ತು ಸೌಲಭ್ಯಗಳನ್ನೂ ಕೊಡೋದು ಬಿಟ್ಟು , ರಾಜ್ಯದ ಬ್ಹೊಕ್ಕಸವನ್ನೇ ನುಂಗಿ ನೀರು ಕುಡಿಯುವ "ಅನ್ನಭಾಗ್ಯ" ಯೋಜನೆ ನಮಗೆ ಬೇಕಾ? ೧ ರೂಪಾಯಿಗೆ ೧ ಕೆ.ಜಿ ಅಕ್ಕಿ ಕೊಟ್ಟು ಮನೆಯಲ್ಲೇ ಕೂತು ಸೋಮಾರಿಗಳನ್ನಾಗಿ ಮಾಡುವ ಯೋಜನೆಗೆ "ಕೈ" ಸರ್ಕಾರ ಕೈ ಹಾಕಿರುವುದು ದುಸ್ತರದ ಸಂಗತಿಯೇ ಸರಿ. ಅದೂ ಅಲ್ಲದೆ ಅಕ್ಕಿಯನ್ನು ಬೇರೆ ರಾಜ್ಯದಿಂದ ಅಮದು ಮಾಡಿ ೧ ರೂಪಾಯಿಗೆ ಹಂಚುವ ಅಗತ್ಯತೆ ಏನಿತ್ತು? ಕರ್ನಾಟಕವೇನು ಆಫ್ರಿಕಾದ ಕೆಲ ದೇಶಗಳಂತೆ ಹಸಿವಿನಿಂದ ಬಳಲುತ್ತಿದೆಯಾ? ಇಲ್ಲ ಕರ್ನಾಟಕದ ಜನತೆಗೆ ಊಟ ಹಾಕಿ ಮಲಗಿಸುವ ಯತ್ಹ್ನವಾ? ತಮ್ಮ ಈ ಜನಪ್ರಿಯ ಯೋಜನೆ ಹಿಂದಿನ ಕಾರಣ ವೋಟ್ ಬ್ಯಾಂಕ್ ಎನ್ನುವುದು ಸರ್ವರಿಗೂ ತಿಳಿದ ಸಂಗತಿ. ನಿಮ್ಮ ಪಕ್ಷದವರು ಕಳೆದ ೬೦ಕ್ಕೂ ಹೆಚ್ಹು ವರ್ಷಗಳಿಂದ ಭಾರತೀಯರನ್ನು ಮೂರ್ಖರನ್ನಾಗಿ ಮಾಡಿದ ಹಾಗೆ, ಸ್ವಾಮೀ !! ನೀವು ಕರ್ನಾಟಕದ ಜನತೆಯನ್ನು ಮೂರ್ಖರನ್ನಾಗಿ ಮಾಡಲು ಯತ್ನಿಸುತ್ತಿರುವುದು ಬಹಳ ದಟ್ಟವಾಗಿ ಗೋಚರಿಸುತ್ತಿರುವ ಸತ್ಯ ಸಂಗತಿ. ಶ್ರೀಯುತ ಸಿದ್ದರಾಮಯ್ಯನವರೇ ಯಾವ ದೂರಾಲೋಚನೆ ಇಟ್ಟುಕೊಂಡು ಈ ಯೋಜನೆಗೆ ಕೈ ಹಾಕಿದ್ದಿರಾ? ಅಕ್ಕಿಯ ಲೆಕ್ಕದ ಬಗ್ಗೆ ಸ್ವಲ್ಪ ತಿಳಿಸಿಕೊಡ್ತಿರಾ? ಬಡವರನ್ನು ಬಡವರಾಗೇ ಇರಬೇಕೆಂಬುದು ತಮ್ಮ ಉದ್ದೇಶಾನ? ಕರ್ನಾಟಕವನ್ನು ಮುಳುಗಿಸಲು ಸಿದ್ದರಾಗಿದ್ದಿರಾ ಸಿದ್ದರಮ್ಮಯ್ಯನವರೆ ? -ಸುಬ್ರಹ್ಮಣ್ಯ ದೇವಾಡಿಗ
Posted on: Thu, 11 Jul 2013 13:35:36 +0000

Trending Topics



Recently Viewed Topics




© 2015