Only party which has a local manifesto...!! Which is willing to - TopicsExpress



          

Only party which has a local manifesto...!! Which is willing to solve the burning local issue..!! ಶಿವಮೊಗ್ಗ ಲೋಕಸಭಾ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಪ್ರಣಾಳಿಕೆ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ 1. ಶಿವಮೊಗ್ಗದಲ್ಲಿ ಅಡಿಕೆ ಸಂಶೋಧನಾ ಕೇಂದ್ರ ಸ್ಥಾಪನೆ 2. ರೈತರ ಬಗರ್ ಹುಕುಂ ಸಮಸ್ಯೆಗೆ ಸಮನ್ವಯತೆಯ ಪರಿಹಾರ 3. ನಗರದಲ್ಲಿ ಮತ್ತು ಹಳ್ಳಿಗಳಲ್ಲಿ ಜನರ ಸಭೆಗಳನ್ನು ನಡೆಸಿ ಅವರ ತೀಮರ್ಾನದಂತೆ ಕೇಂದ್ರದಿಂದ ಬರುವ ಹಲವು ಕೋಟಿ ರೂಪಾಯಿಗಳ ಸಂಸದರ ನಿಧಿಯ ಸಮರ್ಪಕ ವಿನಿಯೋಗ. 4. ಶಿವಮೊಗ್ಗ ಜಿಲ್ಲೆಯನ್ನು ಲೂಟಿ ಮಾಡಿದ ಎಲ್ಲ ರಾಜಕಾರಣಿಗಳ ಮತ್ತು ಅಧಿಕಾರಿಗಳ ಸಂಪೂರ್ಣ ಆಸ್ತಿ ತನಿಖೆ ಮತ್ತು ಮುಟ್ಟುಗೋಲು. 5. ನೂರಾರು ವರ್ಷಗಳಿಂದ ಶಿವಮೊಗ್ಗ ನಗರವನ್ನು ತಂಪಾಗಿಟ್ಟಿದ್ದ ಬೃಹತ್ ಮರಗಳನ್ನು ರಸ್ತೆ ಅಗಲೀಕರಣದ ನೆಪದಲ್ಲಿ ಕಡಿದು ಹಾಕಲಾಯಿತು. ಆಮ್ ಆದ್ಮಿ ಪಕ್ಷವು ಇಂತಹ ಭ್ರಷ್ಟ ರಾಜಕಾರಣಿ-ಗುತ್ತಿಗೆದಾರರ ಅಭಿವೃದ್ಧಿ ಮಾದರಿಯನ್ನು ಅನುಸರಿಸುವುದಿಲ್ಲ. ಆಮ್ ಆದ್ಮಿ ಪಕ್ಷವು ಅಧಿಕಾರಕ್ಕೆ ಬಂದಲ್ಲಿ ಶಿವಮೊಗ್ಗ ನಗರದ ಎಲ್ಲ ರಸ್ತೆಗಳ ಇಕ್ಕೆಲಗಳಲ್ಲಿ ಮರಗಳನ್ನು ಮತ್ತು ಗಿಡಗಳನ್ನು ಬೆಳೆಸುತ್ತದೆ. 6. ಶಿವಮೊಗ್ಗದಲ್ಲಿ ಮೆಡಿಕೋ ಟೂರಿಸಂ ಆರಂಭಕ್ಕೆ ಕ್ರಮ 7. ಸೊರಬ ತಾಲ್ಲೂಕಿನ ರಾಜಕೀಯ ಕಾರಣಗಳಿಗಾಗಿ ಹುಟ್ಟುಹಾಕಲಾದ ಅವೈಜ್ಞಾನಿಕ, ಪರಿಸರ ಮತ್ತು ಜನವಿರೋಧಿ ದಂಡಾವತಿ ನೀರಾವರಿ ಯೋಜನೆಯ ರದ್ದತಿ 8. ಈಗ ತಾಳಗುಪ್ಪದವರೆಗೆ ಮಾತ್ರ ಸಾಗುತ್ತಿರುವ ರೈಲನ್ನು ಹೊನ್ನಾವರದವರೆಗೆ ಸಂಪರ್ಕ ಕಲ್ಪಿಸಲು ಕ್ರಮ. 9. ಜಿಲ್ಲೆಯಾದ್ಯಂತ ಆದ್ಯತೆಯ ಮೇರೆಗೆ ಕೃಷಿ ಉತ್ಪನ್ನಗಳ ಸಂರಕ್ಷಣೆಗೆ ಶೀಥಲೀಕರಣ ಘಟಕ ಸ್ಥಾಪನೆ. 10. ಜಿಲ್ಲೆಯಾದ್ಯಂತ ಆದ್ಯತೆಯ ಮೇರೆಗೆ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ. 11. ಶಿವಮೊಗ್ಗದಲ್ಲಿ ಅಂಗವಿಕಲರಿಗಾಗಿ ವಿವಿಧ ಕೌಶಲ್ಯಗಳ ತರಬೇತಿ ಕೇಂದ್ರ ಸ್ಥಾಪನೆ. 12. ಸಾಗರದ ಹಸಿರುಮಕ್ಕಿಯಲ್ಲಿ ಲಾಂಚ್ ವ್ಯವಸ್ಥೆ ಜಾರಿಗೆ 13. ಸಾಗರದ ಕರೂರಿಗೆ ಸಂಪರ್ಕ ಕಲ್ಪಿಸುವ ಖಾಯಂ ಸೇತುವೆ ನಿಮರ್ಾಣ 14. ಮದಗದ ಕೆರೆಯ ಅಭಿವೃದ್ಧಿ ಸಾರ್ವತ್ರಿಕ ವಿಷಯಗಳು : ಕೃಷಿ 1. ರಸಾಯನಿಕಯುಕ್ತ ಸಾವಯವ ಮತ್ತು ನೈಸಗರ್ಿಕ ಕೃಷಿ ಪರಂಪರೆಯನ್ನು ಅನುಷ್ಟಾನಗೊಳಿಸಲು ಕ್ರಿಯಾತ್ಮಕ ಕಾರ್ಯಕ್ರಮಗಳ ಅನುಷ್ಟಾನ. 2. ರೈತ ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮತ್ತು ಪಾರದರ್ಶಕ ಮಾರುಕಟ್ಟೆ ವ್ಯವಸ್ಥೆ 3. ಒಂದು ಲಕ್ಷ ಇಪ್ಪತ್ತು ಸಾವಿರ ಕೋಟಿ ರೂಪಾಯಿಗಳ ಅಗಾಧ ಮೊತ್ತವನ್ನು ರೈತರ ಹೆಸರಿನಲ್ಲಿ ಉದ್ಯಮಿಗಳಿಗೆ ಸಕರ್ಾರ ಕೊಡುತ್ತಿದೆ. ಈ ಅಗಾಧ ಮೊತ್ತದ ಸಬ್ಸಿಡಿ ಹಣವನ್ನು ನೇರವಾಗಿ ರೈತರಿಗೆ ಕೊಡುವ ವ್ಯವಸ್ಥೆ ಜಾರಿಗೆ ತರುವುದು. 4. ಕೃಷಿ ಭಾರತೀಯ ಜೀವನವಿಧಾನವಾಗಿದೆ. ಈ ಕುರಿತು ಹೊಸ ತಲೆಮಾರಿಗೆ ಅರಿವು ಮೂಡಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಂದು ಕಾಲೇಜುಗಳಲ್ಲಿಯೂ ಕೃಷಿ ಕುರಿತು ಪ್ರಾಯೋಗಿಕ ತಿಳುವಳಿಕೆ ನೀಡಲು ಪ್ರತಿಯೊಂದು ಕಾಲೇಜುಗಳಲ್ಲಿಯೂ ಕೃಷಿಗಾಗಿ ಕನಿಷ್ಟ 2 ಎಕರೆ ಭೂಮಿ ಇಡುವುದನ್ನು ಕಡ್ಡಾಯಗೊಳಿಸುವುದು. 5. ಸಕರ್ಾರಿ ಅಥವಾ ಖಾಸಗಿ ಕಂಪನಿಗಳಿಗೆ ಫಲವತ್ತಾದ ಭೂಸ್ವಾಧೀನಕ್ಕೆ ಅವಕಾಶ ನೀಡದಿರುವುದು. ಅವಶ್ಯಬಿದ್ದಲ್ಲಿ ಬಂಜರು ಭೂಮಿಯನ್ನು ಗುತ್ತಿಗೆ ಆಧಾರದ ಮೇಲೆ ಕೊಡುವುದು. 6. ರೈತರ ಗದ್ದೆ-ಹೊಲಗಳಿಗೆ ರಸ್ತೆಸಂಪರ್ಕ ಕಲ್ಪಿಸುವುದು 7. ಸಮದಾಯಧಾರಿತ ಜಲಸಂವರ್ಧನೆ ಯೋಜನೆ ಜಾರಿಗೊಳಿಸುವುದು. 8. ಭೂರಹಿತರಿಗೆ ಲಭ್ಯ ಇರುವ ಸಕರ್ಾರಿ ಭೂಮಿಯನ್ನು ಕೃಷಿಗಾಗಿ ಹಂಚಿಕೆ ಮಾಡುವ ಕಾರ್ಯಕ್ರಮ ಸಾರ್ವತ್ರಿಕ ವಿಷಯಗಳು : ಇತರೆ 1. ಖಾಲಿಯಿರುವ ಸಕರ್ಾರಿ ಭೂಮಿಯನ್ನು ಗುರುತಿಸಿ ಆ ಸ್ಥಳಗಳಲ್ಲಿ ಮನೆಯಿಲ್ಲದ ಎಲ್ಲ ಬಡವರಿಗೆ ವಾಸಯೋಗ್ಯ ಮನೆ ನಿಮರ್ಾಣ ಮಾಡಿ ಕೊಡುವುದು 2. ಇನಾಂ ಭೂಮಿ ರದ್ದತಿ ಆದ ನಂತರ ಪಿ.ಆರ್ ನಂಬರ್ ಆಗಿಯೇ ಉಳಿದಿದೆ. ಇದು ಮರುಸವರ್ೆ ಆಗಿ ಸವರ್ೆ ನಂಬರ್ ಆಗಿ ಬದಲು ಮಾಡುವುದು. 3. ಸಂಪೂರ್ಣ ಪಾನನಿಷೇಧ, ಮಧ್ಯ ವ್ಯಸನ ಮುಕ್ತ ಕೇಂದ್ರಗಳ ಆರಂಭ 4. ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಿದ್ದು, ಇದನ್ನು ತಡೆಯಲು ಆಪ್ತ ಸಮಾಲೋಚನಾ ಕೇಂದ್ರಗಳ ಸ್ಥಾಪನೆ. 5. ಭ್ರಷ್ಟಾಚಾರಕ್ಕೆ ಅಂತ್ಯ ಹಾಡಲು ಸಾಧ್ಯವಾದ ಎಲ್ಲ ಕ್ರಮಗಳು 6. ಜನರಿಗೆ ಅಧಿಕಾರದ ನೇರ ವಗರ್ಾವಣೆ 7. ಜನರಿಗೆ ಸುಲಭವಾಗಿ ಮತ್ತು ಶೀಘ್ರವಾಗಿ ದೊರೆಯುವಂತಹ ನ್ಯಾಯವ್ಯವಸ್ಥೆ 8. ನ್ಯಾಯಬದ್ದ ಚುನಾವಣೆ, ಜನಪ್ರತಿನಿಧಿತ್ವದ ಗುಣಮಟ್ಟ ಹೆಚ್ಚಳಕ್ಕೆ ಅಗತ್ಯ ಕ್ರಮ 9. ಎಲ್ಲರಿಗೂ ಸುಲಭವಾಗಿ ಮತ್ತು ಕಡಿಮೆ ವೆಚ್ಚದ ವೈಧ್ಯಕೀಯ ಸೌಲಭ್ಯ 10. ಯುವಕರಿಗೆ ಸೂಕ್ತವೆನಿಸಬಲ್ಲ ಮತ್ತು ನೆಮ್ಮದಿಯುತ ಜೀವನವನ್ನು ಖಾತರಿಪಡಿಸಬಲ್ಲ ಆದಾಯ ತರಬಲ್ಲ ಉದ್ಯೋಗಗಳ ಸೃಷ್ಟಿ 11. ಸರಳ ಕನೂನುಗಳ ಜಾರಿ, ಜವಾಬ್ದಾರಿಯುತ ಕಾಯರ್ಾಂಗದ ಸ್ಥಾಪನೆ,ಲಂಚದ ಮೂಲೋಚ್ಚಾಟನೆ 12. ಪ್ರಾಮಾಣಿಕ ಉದ್ದಿಮೆಗಳಿಗೆ ಪ್ರೋತ್ಸಹ, ಜನರಲ್ಲಿ ಉದ್ಯಮಶೀಲತೆಯ ಕೌಶಲ್ಯವೃದ್ಧಿಗೆ ಕ್ರಮ. 13. ಬಡವರು ಮತ್ತು ತಳಸಮುದಾಯದವರ ಪ್ರಗತಿಗೆ ಆಧ್ಯತೆ 14. ಗ್ರಾಮೀಣ ಆಥರ್ಿಕ ಪುನಶ್ಚೇತನಕ್ಕೆ ಅಗತ್ಯ ಕ್ರಮ 15. ಪರಿಸರ ಮತ್ತು ನೈಸಗರ್ಿಕ ಸಂಪನ್ಮೂಲಗಳ ರಕ್ಷಣೆಗೆ ಕಠಿಣ ಕಾನೂನು 16. ಅಸಂಘಟಿತ ವಲಯಕ್ಕೆ ಸಾಮಾಜಿಕ ಭದ್ರತೆ 17. ಬೆಲೆನಿಯಂತ್ರಣಕ್ಕೆ ಅಗತ್ಯ ಕ್ರಮ 18. ಜಾತಿ ಆಧಾರಿತ ಅಸಮಾನತೆಗಳ ನಿಮರ್ೂಲನಕ್ಕೆ ಕ್ರಮ 19. ಜಾತ್ಯಾತೀತತೆ ಮತ್ತು ಕೋಮುಸೌಹಾರ್ದದ ರಕ್ಷಣೆ 20. ಮುಸ್ಲಿಮರ ಕುರಿತು ಪಕ್ಷಪಾತವಿಲ್ಲದ ಧೋರಣೆ 21. ಆದಿವಾಸಿಗಳಿಗೆ ತಮ್ಮ ಅಭಿವೃದ್ಧಿಯ ನಿಧರ್ಾರದ ಹಕ್ಕಿನ ಖಾತರಿ
Posted on: Tue, 15 Apr 2014 12:33:55 +0000

Trending Topics



sttext" style="margin-left:0px; min-height:30px;"> ASEAN, EUROPEAN UNION NOW BIGGEST BUYERS FOR PHILIPPINES Along
The Definite Article Matters Regardless whether used in the
Give yourself a break. – Yes, you have battles out in the world

Recently Viewed Topics




© 2015