ಅದು ಷಡ್ಯಂತ್ರವಲ್ಲವಾದರೆ - TopicsExpress



          

ಅದು ಷಡ್ಯಂತ್ರವಲ್ಲವಾದರೆ ಇನ್ನೇನು? ಅದು ಸುಮಾರು ನಲವತ್ತೈದು ಸಾವಿರ ರೂಪಾಯಿ ಗಳ ಹ್ಯಾಂಡ್ ಸೆಟ್ . ಆಫೀಸ್ ನಿಂದ ಹೊಸದಾಗಿ ಸೇರಿದ ಒಬ್ಬ ಟೀಂ ಮೇಟ್ ಗೆ ಕೊಟ್ಟ ಫೋನ್ -ಅದು ಅವರು ಒಂದು ದಿವಸ ಆಫೀಸ್ ಬಿಟ್ಟು ಮನೆಗೆ ಹೋಗುತ್ತಿರುವಾಗ ಬಸ್ ನಲ್ಲಿ ಕದಿಯಲ್ಪಟ್ಟಿತು - ಸರಿ ಅದಕ್ಕೆ ಯಾವುದೇ ರೀತಿಯ ಇನ್ಸೂರೆನ್ಸ್ ಎಲ್ಲ ಬರಬೇಕಿದ್ದರೆ ನಮಗೊಂದು ದೂರು ದಾಖಲಿಸಿ ಅದರ ಪ್ರಥಮ ಮಾಹಿತಿ ವರದಿಯ ಕಾಪಿ ಬೇಕಾಗಿತ್ತು - ಸರಿ ಆ ನನ್ನ ಮಿತ್ರನ ಜೊತೆ ಆ ವ್ಯಾಪ್ತಿಯ ಪೋಲಿಸ್ ಸ್ಟೇಷನ್ ಗೆ ಹೋಗಿ ಆಯಿತು - ಸರಿ ನಮ್ಮ ಎಲ್ಲ ವಿಷಯ ಕೇಳಿದ ಆ ದಾಖಲು ಮಾಡಿ ಕೊಳ್ಳುವ ಮನುಷ್ಯ ತಾವು ಫೋನ್ ಕಳೆದು ಕೊಂಡಿದ್ದು ಬಸ್ ಇಳಿಯುವಾಗ ಗಮನಿಸಿದ್ದು ಎನ್ನುತ್ತಿರಾ - ಅದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ - ಇನ್ನೊಂದು ಠಾಣೆ ಗೆ ಹೋಗಿ ದೂರು ಕೊಡಿ ಎಂದ - ಇನ್ನೇನು ಮಾಡುವುದು ಬೇಕಾದ್ದು ನಮಗೆ ಆಟೋ ಒಂದನ್ನು ಹಿಡಿದು ಕೊಂಡು ಕೆಲವು ಕಿಲೋ ಮೀಟರ್ ದೂರದ ಇನ್ನೊಂದು ಠಾಣೆ ಗೆ ಹೋಗಿ ಆಯಿತು - ಸರಿ ಅಲ್ಲಿಯೂ ಮತ್ತದೇ ಕಥೆ - ನೀವು ಹೋಗುವ ಬಸ್ ಇನ್ನೊಂದು ಪೋಲಿಸ್ ಸ್ಟೇಷನ್ ವ್ಯಾಪ್ತಿಗೆ ಬರುತ್ತದೆ - ನೀವು ಅಲ್ಲಿಗೆ ಹೋಗಿ! ಆಗ ನಿಜವಾಗಿಯೂ ನನ್ನ ತಾಳ್ಮೆ ಕೆಟ್ಟಿತ್ತು - ಸರಿ ನನ್ನ ಅತ್ಯಂತ ಆತ್ಮೀಯರೂ, ಸದ್ಯದ ವಿಧಾನ ಸಭೆಯ ಸದಸ್ಯರೂ , ಕರ್ನಾಟಕದ ರಾಜಕಾರಣದಲ್ಲಿ ಅತ್ಯಂತ ಸ್ವಚ್ಛ ರಾಜಕಾರಣಕ್ಕೆ ಹೆಸರಾದವರೂ ಅದವರಿಂದ ಅವರಿಗೆ ಹೇಳಿಸಿದರೂ ಉಹೂ ಏನು ಉಪಯೋಗವಿಲ್ಲ - ಕೊನೆಗೂ ಈ ಒಂದು ಪ್ರಕರಣ ದಾಖಲಾಗಲು ಈ ರಾಜ್ಯದ ಸಚಿವರ ಆಪ್ತ ವ್ಯಕ್ತಿ ಯೊಬ್ಬರ ಕರೆ ಅವಶ್ಯಕ ವಾಗಿತ್ತು ಇದಾಗಿ ಸ್ವಲ್ಪ ದಿನಗಳು . ಮತ್ತಿದೇ ಬೆಂಗಳೂರು ವ್ಯಾಪ್ತಿ ಯ ಪೋಲಿಸ್ ಠಾಣೆ. ಅಲ್ಲಿ ಸಂಪೂರ್ಣ ಭಿನ್ನ . ಅಲ್ಲೇನೋ ಯಾವುದೊ ಫೇಸ್ಬುಕ್ ನಲ್ಲಿ ಬರೆದರಂತೆ - ಯಾರೋ ದೂರು ಕೊಟ್ಟರಂತೆ - ದಸ್ತಗಿರಿಯೂ ಅಗಿಹೊಯಿತಂತೆ! ಅಲ್ಲಿಗೇ ನಿಲ್ಲಲಿಲ್ಲ - ಒಂದಲ್ಲ ಎರಡಲ್ಲ ಮೂರು ಜನ ಐ ಪಿ ಎಸ ಅಧಿಕಾರಿಗಳು ಇದನ್ನು ತನಿಖೆ ಮಾಡಲು ಖುದ್ದು ಕೆಲವು ಘಂಟೆಗಳನ್ನು ಕೊಟ್ಟರಂತೆ! ನನಗೋ ಸಂಪೂರ್ಣ ಶಾಕ್! ಸ್ವಾಮಿ ಏನಿದು - ನಮಗೆ ಕೇವಲ ಒಂದು ದೂರು ದಾಖಲು ಮಾಡಲೇ ಸಚಿವರ ಕರೆ ಅವಶ್ಯಕವಾಯಿತು - ಅಂತದ್ದರಲ್ಲಿ ಫೇಸ್ಬುಕ್ ಬರಹಕ್ಕೆನೇ ಪೊಲೀಸರು ದಸ್ತಗಿರಿ ಮಾಡುತ್ತೆರೆಂದರೆ , ಅದು ಕೇವಲ ದೂರು ದಾಖಲಾದ ತಕ್ಷಣ ಆಗುತ್ತದೆ ಎಂದು ಯಾರು ನಂಬಲು ಸಾಧ್ಯ - ಅಲ್ಲಿಗೇ ನಿಲ್ಲುವುದಿಲ್ಲ - ಕೇವಲ ಒಂದೆರಡೆ ನಿಮಿಷಗಳಲ್ಲಿ ಎಲ್ಲ ಚಾನೆಲ್ ಗಳಲ್ಲಿ ಬ್ರೇಕಿಂಗ್ ನ್ಯೂಸ್! ದೂರು ದಾರರು ಕೇವಲ ದೂರುದಾರರು ಮಾತ್ರ ಇದನ್ನು ಮಾಡಲು ಸಾಧ್ಯ ಎಂದು ನಾವು ನಂಬ ಬೇಕೇ .. ಇಲ್ಲೇ ಹೇಳಬೇಕಾಗಿರುವುದು - ಇದು ಷಡ್ಯಂತ್ರ ಎಂಬುದಾಗಿ - ರಾಶಿ ರಾಶಿ ಸಂಗತಿಗಳಿವೆ ಕೇವಲ ದೂರು ದಾರರು ಮಾತ್ರ ಮಾಡಲು ಸಾಧ್ಯ ವಾಗದ ವಿಷಯಗಳು - ಅಲ್ಲಾರಿ ನಾನೂ ಕೂಡ ಈ ನೆಲದ ಕಾನೂನನ್ನು , ಅದಕ್ಕಿಂತ ಹೆಚ್ಚಾಗಿ ನೈತಿಕತೆ ಯನ್ನು ಗೌರವಿಸುವವನು . ಹೆಣ್ಣಿಗೆ ಅನ್ಯಾಯ ಆಗಿದ್ದೇ ಹೌದಾಗಿದ್ದಲ್ಲಿ ಪ್ರತಿಭಟಿಸೋಣ - ಆದರೆ ಇಲ್ಲಿ ಆಗುತ್ತಿರುವುದು - ಹೆಣ್ಣಿಗೆ ಆ ಷಡ್ಯಂತ್ರದ ದಾಳವಾಗಿ ಅನ್ಯಾಯ ಆಗುತ್ತಿದೆಯಲ್ಲ ಅದನ್ನೂ ಪ್ರತಿಭಟಿಸೋಣ! ಹೌದು ಈ ಪ್ರಕರಣ ನೇರಾನೇರ ಪೂಜ್ಯ ಶ್ರೀ ಸ್ವಾಮೀಜಿ ಮತ್ತು so called ನೊಂದ ಮಹಿಳೆ ಯ ಮದ್ಯದ ಪ್ರಕರಣವಾಗಿ ಎಲ್ಲೂ ಕಾಣುತ್ತಿಲ್ಲ - ಒಮ್ಮೆ ಯೋಚಿಸಿ ನೋಡಿ - ಈ ಕಂಪ್ಲೀಟ್ ಎಪಿಸೋಡ್ ಗೆ ಹೊಸ ಸೇರ್ಪಡೆ - ಸತ್ಯ ಸಂಗತಿ. ಅದರಲ್ಲಿರುವ ವಿಷಯ ಗಳ ಸತ್ಯಾಸತ್ಯತೆ ಎಲ್ಲರಿಗೂ ಗೊತ್ತೇ ಇದೆ - ಹೋಗಲಿ ಅದು . ಆದರೆ ಅದನ್ನು ಪ್ರಿಂಟ್ ಮಾಡಿ ೪೦೦೦೦ ಜನರಿಗೆ ತಲುಪಿಸಲು ಆಗಿರಬಹುದಾದ ಖರ್ಚು ಏನಿಲ್ಲವೆಂದರೂ ೧೫ ಲಕ್ಷ! ಅದರ ಪ್ರಾಯೋಜಕರು ಯಾರು - ಅವರಿಗೂ ಇದಕ್ಕೂ ಏನು ಸಂಭಂಧ . ಹೋಗಲಿ ಲಕ್ಷಗಳ ಬಾಬತ್ತು . ನಾವೆಲ್ಲ ಗಮನಿಸಿದ್ದಂತೆ ಪತ್ರಿಕೆ ಗಳ ವರದಿಗಳ ಪ್ರಕಾರ ಪ್ರಕರಣ ಸಿ ಐ ಡಿಗೆ ಹೋದ ಮೇಲೂ ಗಿರಿನಗರ ಪೋಲಿಸ್ ರು ಕೆಕ್ಕಾರಿನವರೆಗೆ ಹೋಗುವ ಶ್ರಮ ತೆಗೆದು ಕೊಂಡರಲ್ಲ ? ಅಲ್ಲಾರಿ ಜನ ಸಾಮಾನ್ಯರು , ನಮ್ಮ ನಿಮ್ಮಂತವರು ಯಾವುದೊ ಒಂದು ದೂರು ಕೊಟ್ಟರೆ ಇವೆಲ್ಲಾ ಸಾಧ್ಯವಾ. ಮೂರು ಘಂಟೆ - ಸತತ ಮೂರು ಘಂಟೆಯ ಪ್ರೈಮ್ ಟೈಮ್ ಆ ದಂಪತಿ ಗಳಿಗೆ ಆ ಚಾನಲ್ ನಲ್ಲಿ ಮೀಸಲಾಗಿತ್ತು - ಲೈವ್ ಅಲ್ಲದ, ಕೇವಲ ಅವರೇ ಮಾತ್ರ ಇರುವ ಅವರಿಗೆ ಬೇಕಾದ ರೀತಿಯಲ್ಲಿಯೇ ಪ್ರಶ್ನೆ ಕೇಳಿ , ಅವರಿಗೆ ಬೇಕಾದ ರೀತಿಯಲ್ಲಿ ಉತ್ತರ ನೀಡಿಸುವ ಕಾರ್ಯಕ್ರಮ! ಇದು ಬಹುತೇಕ ಎಲ್ಲ ಚಾನಲ್ ಗಳಲ್ಲಿ ಆಗಿದ್ದು - ಈಗ ಹೇಳಿ ಇಂತಹ ಒಂದು ಸಪೋರ್ಟ್ ನಮ್ಮ ಎಲ್ಲ ಅತ್ಯಾಚಾರಿ ಸಂತ್ರಸ್ತ ಸಹೋದರಿಯರಿಗೆ ಸಿಕ್ಕಿದ್ಯಾ ಇದೆ ಮಾಧ್ಯಮಗಳಿಂದ - ಪಾಪ - ಅದೆಸ್ಟೋ ಚಿಕ್ಕ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದೆಯಲ್ಲ - ಕೇವಲ ಒಂದು ಬ್ರೇಕಿಂಗ್ ನ್ಯೂಸ್ ಒಂದು ಲೈನ್ ಹಾಕಿದಲ್ಲಿ ಆಗಿ ಹೋಯಿತಾ - ಅಥವಾ ಅದುವೇ ಮಾಧ್ಯಮಗಳ ನಿಜವಾದ ಸಂವೇದನೆ ಆಗಿದ್ದು ಈ ವಿಶೇಷ ಸಂವೇದನೆ ಹಿಂದೆ ಬೇರೆ ಏನೋ ಇರಬೇಕು ಎಂಬ ಜನ ಸಾಮಾನ್ಯರ ಮಾತು ನಿಜವಿರಬಹುದಾ ಹೀಗೆ ಹೇಳುತ್ತಾ ಹೋದರೆ ಕೊನೆ ಮೊದಲಿಲ್ಲ - ಒಂದು ರಾಜ್ಯದ ವ್ಯವಸ್ಥೆ ಯನ್ನು ಕಟ್ಟಿ ಆಡಿಸುತ್ತಿರುವದರ ಜೊತೆಗೆ ಇದರಲ್ಲಿ ಮಾತ್ರ ವಿಶೇಷ ಆಸಕ್ತಿ ತೋರಿದ ಕೇಂದ್ರ ಮಹಿಳಾ ಆಯೋಗದ ಪಾತ್ರವೂ ಸೇರಿದಂತೆ ಈ ಪ್ರಕರಣದಲ್ಲಿ ದೂರುದಾರರು ಯಾವತ್ತೂ ಸಂತ್ರಸ್ತರಾಗಿ ಕಾಣಿಸಲೇ ಇಲ್ಲ - ಅದಕ್ಕಿಂತ ಹೆಚ್ಚಾಗಿ ಒಂದು ತಂಡ ಅತ್ಯಂತ ವ್ಯವಸ್ತಿತ ವಾಗಿ ಎಲ್ಲವನ್ನೂ ಮ್ಯಾನೇಜ್ ಮಾಡುತ್ತಿರುವುದು ಕಣ್ಣಿಗೆ ಎದ್ದು ಕಾಣುತ್ತಿದೆ . ಮತ್ತು ಆ ತಂಡದ ಉದ್ದೇಶ ಅವರೇ ಅತ್ಯಂತ ಬಹಿರಂಗವಾಗಿ ಎಲ್ಲ ಕಡೆ ಹೇಳಿಕೊಂಡ ಹಾಗೆ ಅದು ಶ್ರೀಗಳ ಪೀಠ ತ್ಯಾಗ! ಅವರೇ ಬಂದು ಅಟೆಂಡ್ ಮಾಡಿದ ಮಾಧ್ಯಮ ಗಳಿಗಾಗಲಿ , ಅವರೇ ಹೊರಡಿಸಿದ ಸತ್ಯ ಸಂಗತಿ ಗಳಲ್ಲಾಗಲಿ ಅವರ intention ಅಷ್ಟೇ - ನಮಗೆ ಇಂತಹ ಶ್ರೀಗಳು ಬೇಡ ಅವರು ಪೀಠ ತ್ಯಾಗ ಮಾಡಲಿ - ನಿಜವಾಗಿಯೂ ಆ ಮಹಿಳೆ ನೊಂದಿದ್ದರೆ, ಇವರೆಲ್ಲ ನೊಂದ ಮಹಿಳೆಯ ರಕ್ಷಣೆಗೆ , ನ್ಯಾಯ ಕೊಡಿಸಲೇ ನಿಂತಿದ್ದರೆ , ಅವರ ಒತ್ತಾಯ ಬೇರೆಯೇ ಇರುತ್ತಿತ್ತು ಅಲ್ಲವೇ ? ಸದ್ಯಕ್ಕೆ ಇವಿಷ್ಟು ಸಾಕು .. ಈಗ ನೀವೇ ಒಮ್ಮೆ ಯೋಚಿಸಿ - ಇದು ಷಡ್ಯಂತ್ರವೆ ಎಂದು ಹೇಳಲು ಸಾವಿರಾರು ಘಟನೆ ಗಳು ನಮ್ಮ ಕಣ್ಣೆದುರಿಗೆ ನಿಂತಿವೆ - ಅಂತಹ ಷಡ್ಯಂತ್ರ ಮಾಡುವರನ್ನು ಧಿಕ್ಕರಿಸಿ - ಗೊತ್ತಿದ್ದೋ ಗೊತ್ತಿಲ್ಲದೆಯೋ ಅಂತಹ ಒಂದು ಷಡ್ಯಂತ್ರದ ಭಾಗವಾಗದಿರೋಣ .. ಅದು ಎಂತಹದೇ ಷಡ್ಯಂತ್ರ ಬಂದರೂ ನಾವಿದ್ದೇವೆ ನಾವಿದ್ದೇವೆ ಶ್ರೀಗಳೊಂದಿಗೆ ನಾವಿದ್ದೇವೆ ಎಂಬುದನ್ನು ನಿರೂಪಿಸೊಣ ನಮಸ್ಕಾರ ಪ್ರಸನ್ನ ಎಂ ಮಾವಿನಕುಳಿ
Posted on: Tue, 25 Nov 2014 02:59:42 +0000

Trending Topics



Recently Viewed Topics




© 2015