#ಬೆಂಗಳೂರಿನ ಕೆಂಪೇಗೌಡ ನಗರದ - TopicsExpress



          

#ಬೆಂಗಳೂರಿನ ಕೆಂಪೇಗೌಡ ನಗರದ ಗವಿಪುರಂನಲ್ಲಿರುವ #ಅದಮ್ಯಚೇತನದ ಅನ್ನದ ಕಾರ್ಖಾನೆ ನಿಮಗೆ ಕಣ್ಣಿಗೆ ರಾಚುವ ಹಾಗೇನೂ ಇಲ್ಲ. ಹಿಂಬದಿಯಲ್ಲಿ ಬಡಾವಣೆ ಮನೆಗಳಿರುವ ಏರು ಭೂಪ್ರದೇಶ. ಬಲ ಪಕ್ಕದಲ್ಲೇ ಐತಿಹಾಸಿಕ ಗವಿಗಂಗಾಧರೇಶ್ವರ ದೇಗುಲ. ಒಂದು ರೀತಿಯಲ್ಲಿ ಏರಿಗೆ ತಾಗಿದಂತೆ ಅದಮ್ಯ ಚೇತನದ ಊಟ ತಯಾರಿಕಾ ಘಟಕ ಹಬ್ಬಿಕೊಂಡಿದೆ. ಕಟ್ಟಡದ ಸುತ್ತಲೂ ನೀವು ಪ್ರದಕ್ಷಿಣೆ ಹಾಕಿದರೆ ಕಾಣುವುದೆಲ್ಲ ಇಂಧನಕ್ಕೆ ಸಂಬಂಧಿಸಿದ್ದೇ: ಎಡಬದಿಯಲ್ಲಿ ಡೀಸೆಲ್ ಘಟಕ. ಬಲಬದಿಯಲ್ಲಿ ದೈತ್ಯಾಕಾರದ ಗ್ಯಾಸಿಫೈಯರ್. `ಶೂನ್ಯ ತ್ಯಾಜ್ಯ ಅಥವಾ `ಸೊನ್ನೆ ಕಸ’ದ ಗುರಿಯನ್ನು ಇಟ್ಟುಕೊಂಡು ಈಗ `ಮಾದರಿ’ ಎಂದು ಹೇಳಬಹುದಾದ ವ್ಯವಸ್ಥೆಯನ್ನು ಅಳವಡಿಸಿಕೊಂಡಿರುವ ಅದಮ್ಯ ಚೇತನವು ಇಂಧನ ಉಳಿತಾಯ, ಕಸದ ನಿರ್ವಹಣೆಯಲ್ಲಿ ಬೆಂಗಳೂರಿನ ಮುಂಚೂಣಿ ಸಂಸ್ಥೆಯಾಗಿದೆ. AnanthKumar Dr.Tejaswini Ananthkumar Karnataka Renewable Energy Development Limited - KREDL Karnataka Renewable Energy Development Ltd. ( A Govt. Enterprise) goo.gl/y2MUJm
Posted on: Fri, 26 Dec 2014 14:30:00 +0000

Trending Topics



Recently Viewed Topics




© 2015