ವಿವೇಕವಾಣಿ - 339 ಆತ್ಮವು - TopicsExpress



          

ವಿವೇಕವಾಣಿ - 339 ಆತ್ಮವು ಯಾವುದೇ ವಸ್ತುಗಳಿಂದ ಆದುದಲ್ಲ; ಅದರ ಬಂಧವನ್ನು ವಿಭಜಿಸಲೂ ಆಗದು. ಆದ್ದರಿಂದ ಅದು ನಾಶವಾಗದುದು ಆಗಿರಲೇಬೇಕು. The Soul is not composed of any materials. It is unity indivisible. Therefore it must be indestructible. -ಸ್ವಾಮಿ ವಿವೇಕಾನಂದ. ************* ಅರಿತವರು ಹೇಳಿಹರು ಅಚ್ಚರಿಯ ಸಂಗತಿಯ ಆತ್ಮಕ್ಕೆ ಅಳಿವಿಲ್ಲ ಹುಟ್ಟು ಸಾವುಗಳಿಲ್ಲ | ಬದಲಾಗದು ಬೆಳೆಯದು ನಾಶವಾಗದು ಚಿರಂಜೀವ ನಿತ್ಯ ಶಾಶ್ವತವು ಮೂಢ || -ಕ.ವೆಂ.ನಾ. **************** ವಿವೇಕವಾಣಿ - 340 The varieties of religious belief are an advantage, since all faiths are good, so far as they encourage us to lead a religious life. The more sects there are, the more opportunities there are for making a successful appeal to the divine instinct in all of us. ವಿವಿಧ ಧಾರ್ಮಿ ಕ ನಂಬಿಕೆಗಳು ಪ್ರಯೋಜನಕಾರಿ; ನಮ್ಮನ್ನು ಧಾರ್ಮಿಕವಾಗಿ ಜೀವಿಸಲು ಉತ್ತೇಜಿಸುವಷ್ಟರ ಮಟ್ಟಿಗೆ ಎಲ್ಲಾ ನಂಬಿಕೆಗಳೂ ಒಳ್ಳೆಯವೇ. ಹೆಚ್ಚು ಪಂಗಡಗಳಿದ್ದಷ್ಟೂ ನಮ್ಮ ಎಲ್ಲರಲ್ಲಿರುವ ದೈವಿಕ ಮನೋಭಾವನೆಯನ್ನು ಯಶಸ್ವಿಯಾಗಿ ಉತ್ತೇಜಿಸಲು ಹೆಚ್ಚು ಅವಕಾಶಗಳಿರುತ್ತವೆ. -ಸ್ವಾಮಿ ವಿವೇಕಾನಂದ. **************** ಇರಲೆಮಗೆ ನಮ್ಮ ಪಥ ಬೇಕಿಲ್ಲ ಪರಪಥ ಮನಕೊಪ್ಪುವ ಪಥದಿ ಸಾಗಲಿ ಸಕಲಜನ | ಅವರ ದಾರಿ ಅವರಿಗಿರಲಿ ಗುರಿಯೊಂದೆ ತಲುಪುವ ಗಮ್ಯವೊಂದೇ ಮೂಢ || -ಕ.ವೆಂ.ನಾ.
Posted on: Mon, 16 Dec 2013 03:25:52 +0000

Trending Topics



Recently Viewed Topics




© 2015