ಅಗಸ್ಟ್ ತಿಂಗಳ ಮಹಿಳೆಯಾಗಿ - TopicsExpress



          

ಅಗಸ್ಟ್ ತಿಂಗಳ ಮಹಿಳೆಯಾಗಿ ನನ್ನನ್ನು ಆಯ್ಕೆ ಮಾಡಿದ woman.wonderful creation of God ಗುಂಪಿನ ಎಲ್ಲ ಸದಸ್ಯರಿಗೆ ಕೃತಜ್ಞತೆಗಳು LAKSHMI G PRASAD AN EXCLUSIVE WOMAN-WOMAN OF AUGUST-2014 You cant stop a diamond, and a born talent from shining. Dr Lakshmi G Prasad is a very special woman with exceptional talent and exclusive knowledge, who has chiselled her personality in to a beautiful sculpture with her great effort, interest, strong will, dedication, wide researching, deep range of study and thus have gained special recognition and respect from the society . DR Lakshmi G Prasad is a lecturer by profession, writer and also a research scholar. In all these fields she has involved herself with great enthusiasm and dedication with a deep social concern and has achieved amazing results.DRLakshmi was born in Kolluru Kasaragod district. She is married to Mr Govindaprasad panjigadde . Mr Vedamurthy Narayana Bhatt and Smt Sarasvathi amma are her parents. As a lecturer by profession she works in Bellare government pre university college. As Dr Lakshmi was born and brought up in an orthodox family and in religious atmosphere she had to face many restrictions and obstacles which she faced firmly. She was graduated in science, but she didnt stop at that. Her qualifications are surprising, After graduation she did M.Phil. and got three master degrees in Sanskrit, Kannada and Hindi languages respectively with ranks and distinction. Later she involved herself in research works and got doctorate degree and has submitted her thesis for another doctorate degree which is yet to be awarded. .she also passed NET-UGC examinations related to her profession. This long list of her educational qualification tells us about her thirst for knowledge and her dedication. DR Lakshmi has written and published about 20 books and all of them related to her research works on Tulu daivas and Bhoothaaraadhana which is practiced in Dakshinakannada District. Tulu people worship local gods with many names, backgrounds, history and with great devotion and respect since ages. They follow very strict customs, practice and believe in the special power of these Bhoothas/ Daivas . She is a known name in many famous newspapers and magazines for her articles and also has written short stories and dramas. To quote few, 1. Arivinangalada sutha 2. Maneyangaladi huu 3. Tulu jaanapada kavithegalu, chandabaari gopala maththu ithara apurva paaddanagalu 4. Kambala kori nema 5. Tulunaadina apurva bhoothagalu 6. Belakinedege and others. Her articles on present education and Social mal practices are really worth reading. Lakshmi wrote a drama in Havyaka kannada when she was in seventh standard which gave her the fame . She is known as The first woman drama writer in Havyaka kannada DR Lakshmi is also crowned with many prestigious awards like, 1. Jayaprakasha Narayana raashtriya mahila rathna award 2. Karnataka bhushana 3. Kalajyothi 4. Kaavyashree puraskara 5. Havikannada modala naatakakarthi DR Lakshmi has never neglected her profession. She works with dedication and innovation and been awarded with Outstanding teacher award 2013. Her research work is very demanding with lot of travelling. but well supported by her husband and son Arvind who are her inspiration. Dr Lakshmi is out spoken and always stood against social injustice, gender discrimination . This is just a brief about DR Lakshmi. For details please refer the link given below and visit her blogs. we “Woman the wonderful creation of God group proud to honour DR Lakshmi as the SPECIAL WOMAN FOR THE MONTH OF AUGUST 2014 DR Lakshmi as the SPECIAL WOMAN FOR THE MONTH OF AUGUST 2014 ವಜ್ರ ಎಲ್ಲಿದ್ದರೂ ಪ್ರಕಾಶಿಸುವಂತೆ ಪ್ರತಿಭೆ ಕೂಡ ಎಲ್ಲಿದ್ದರೂ ಪ್ರಕಾಶಿಸುತ್ತದೆ,ಲಕ್ಶ್ಮಿ ಜಿ ಪ್ರಸಾದ್ ಕೂಡ ಓರ್ವ ಇಂತಹ ಅಸಾಧಾರಣ ಪ್ರತಿಭೆ- ಸ್ವಂತಿಕೆ, ಸ್ವಾಭಿಮಾನಗಳಿಂದ ಕೂಡಿದ ವಿಶಿಷ್ಟ ಮಹಿಳೆ,ಅಲ್ಲದೆ ದಕ್ಷತೆ,ಶ್ರಧ್ಧೆ,ನಿರಂತರ ಅಧ್ಯಯನ ಇವುಗಳಿಂದ ವಿಶಿಷ್ಟ ವ್ಯಕ್ತಿತ್ವವನ್ನು ರೂಪಿಸಿಕೊಂಡಿರುವ, ತನ್ಮೂಲಕ ಸಮಾಜದಲ್ಲಿ ಗುರುತಿಸಲ್ಪಟ್ಟಿರುವ, ಸಮಾಜದಿಂದ ಗೌರವಿಸಲ್ಪಟ್ಟಿರುವ ಶಿಕ್ಷಕಿ-ಬರಹಗಾರ್ತಿ-ಸಂಶೋಧಕಿ. ಲಕ್ಷ್ಮಿಯವರ ಹುಟ್ಟೂರು ಕೋಳ್ಳೂರು-ಕಾಸರಗೋಡು ಜಿಲ್ಲೆ-ತಂದೆ-ಶ್ರೀಯುತ ವೇದಮೂರ್ತಿ ನಾರಾಯಣ ಭಟ್-ವಾರಣಾಶಿ-ತಾಯಿ-ಸರಸ್ವತಿ ಅಮ್ಮ-ವಾರಣಾಶಿ.ಪತಿ ಗೋವಿಂದ ಪ್ರಸಾದ ಪಂಜಿಗದ್ದೆ. ವೃತ್ತಿ-ಲಕ್ಷ್ಮಿಯವರು ದಕ್ಷಿಣಕನ್ನಡಜಿಲ್ಲೆಯ ಸುಳ್ಯ ತಾಲ್ಲೂಕಿನ ಬೆಳ್ಳಾರೆಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿ,ಪ್ರಸ್ತುತ ಬೆಂಗಳೂರಿನ S J B ಕಾಲೇಜಿನಲ್ಲಿ ಬಿಎಡ್ ಅನ್ನು ಇಲಾಖಾ ನಿಯೋಜನೆಯ ಮೇರೆಗೆ ಓದುತ್ತಿದ್ದಾರೆ. ವಿದ್ಯಾಭ್ಯಾಸ--ಲಕ್ಶ್ಮಿಯವರ ಶೈಕ್ಷಣಿಕ ಅರ್ಹತೆ ಅನನ್ಯವಾದುದು.ವಿಜ್ನ್ಯಾನ ಪದವೀಧರೆಯಾದ ಲಕ್ಷ್ಮಿಸಂಸ್ಕೃತ-ಕನ್ನಡ-ಹಿಂದಿ ಈ ಮೂರು ವಿಷಯಗಳಲ್ಲಿ ಸ್ನಾತಕೋತ್ತರ ಪದವಿ-ಎರಡು ಪಿ ಹೆಚ್ ಡಿ (she is awarded with one Phd and has done research work on the other -has submitted her thesis and expecting her second Phd award ) ಅದರಲ್ಲೂ ಸಂಸ್ಕೃತ ಎಂ ಎನಲ್ಲಿ ಮೊದಲ ರಾಂಕ್-ಕನ್ನಡ ಎಂಎ ನಲ್ಲಿ ನಾಲ್ಕನೆಯ ರಾಂಕ್ -ಹಿಂದಿ ಎಂ ಎ ನಲ್ಲಿ ಡಿಸ್ಟಿಂಕ್ಷನ್ ಗಳಿಸಿದ್ದಾರೆ.ಅಲ್ಲದೆ ಎಂ ಫಿಲ್-ರಾಷ್ಟ್ರಭಾಷಾ ಪ್ರವೀಣ-ಮತ್ತು ಎನ್ ಇ ಟಿ, ಯು ಜಿ ಸಿ ಶೈಕ್ಷಣಿಕ ಅರ್ಹತೆಗಳನ್ನೂ ಗಳಿಸಿದ್ದಾರೆ.ಲಕ್ಷ್ಮಿಯವರ ಜ್ನ್ಯಾನದಾಹ,ಅದಮ್ಯ ಉತ್ಸಾಹ,ಸಾಧಿಸುವ ಛಲ ಇವುಗಳಿಗೆ ಅವರು ಗಳಿಸಿರುವ ಶೈಕ್ಷಣಿಕ ಅರ್ಹತೆಗಳ ದೀರ್ಘ ಪಟ್ಟಿಯೇ ಸಾಕ್ಷಿ. ಲಕ್ಷ್ಮಿಯವರ ಕೃತಿಗಳು-ಲಕ್ಶ್ಮಿಯವರು ಇಪ್ಪತ್ತು ಸಂಶೋಧನಾ ಕೃತಿಗಳು-ನೂರಕ್ಕೂ ಹೆಚ್ಚು ಸಾಮಾಜಿಕ-ಶೈಕ್ಷಣಿಕ-ಜಾನಪದ -ಸಾಹಿತ್ಯಕ ವಿಷಯಗಳನ್ನು ಕುರಿತ ಲೇಖನಗಳನ್ನು ವಿವಿಧ ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ.ನಾಟಕ-ಸಣ್ಣಕಥೆಗಳೂ ಕೂಡ ಇವರ ಲೇಖನಿಯಿಂದ ಹೊರಹೊಮ್ಮಿವೆ.ಅವುಗಳಲ್ಲಿ ಮುಖ್ಯವಾದುವೆಂದರೆ ೧-ಅರಿವಿನಂಗಳದ ಸುತ್ತ{ಶೈಕ್ಷಣಿಕ ಬರಹಗಳ ಸಂಕಲನ} ೨-ಮನೆಯಂಗಳದಿ ಹೂ {ಸಣ್ಣ ಕಥೆಗಳ ಸಂಕಲನ} ೩-ತುಳು ಜಾನಪದ ಕವಿತೆಗಳು,ಚಂದಬಾರಿಗೋಪಾಲ ಮತ್ತು ಇತರಅಪೂರ್ವ ಪಾಡ್ದನಗಳು ೪-ಕಂಬಳ ಕೋರಿ ನೇಮ {ತುಳು ಜಾನಪದ ಸಂಶೋಧನೆ) ೫-ತುಳು ನಾಡಿನ ಅಪೂರ್ವ ಭೂತಗಳು ೬-ಬೆಳಕಿನೆಡೆಗೆ-ಮುಂತಾದುವು.ಪ್ರಾಥಮಿಕ ಶಿಕ್ಷಣಕ್ಕೆ ಎಂಥ ಶಾಲೆ ಉತ್ತಮ--ಪರೀಕ್ಷೆಗಳು ಬರುತ್ತಿವೆ-ಕನ್ನಡ ಮಾಧ್ಯಮದಲ್ಲಿ ವಿಜ್ನ್ಯಾನ ಶಿಕ್ಷಣ-ಸಾಮಾನ್ಯ ಪರೀಕ್ಷೆ ಸಾಮಾನ್ಯರಿಗಲ್ಲಮೊದಲಾದ ಇವರ ಶೈಕ್ಷಣಿಕ ಕಾಳಜಿಯ ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾದ ಇವರ ಲೇಖನಗಳು ಗಮನಾರ್ಹ-ಸಂಗ್ರಹಯೋಗ್ಯ. ೭-ಏಳನೆಯ ತರಗತಿಯಲ್ಲಿದ್ದಾಗಲೇ ಇವರು ರಚಿಸಿ ವೇದಿಕೆಯಲ್ಲಿ ಅಭಿನಯಿಸಿದ್ದ {ಸುಬ್ಬಿ ಇಂಗ್ಲಿಷ್ ಕಲ್ತದ್ದು ಎಂಬ ನಾಟಕ ಹವ್ಯಕ ಕನ್ನಡದಲ್ಲಿ ಮಹಿಳೆ ರಚಿಸಿದ ಮೊದಲ ನಾಟಕ ಎಂಬ ದಾಖಲೆ ನಿರ್ಮಿಸಿದೆ. )ಪ್ರಶಸ್ತಿ-ಪುರಸ್ಕಾರಗಳು 1 .ಜಯಪ್ರಕಾಶ ನಾರಾಯಣ ರಾಷ್ಟ್ರೀಯ ಮಹಿಳಾ ರತ್ನ 2 .ಕರ್ನಾಟಕ ಭೂಷಣ 3.ಕಲಾ ಜ್ಯೋತಿ 4.ತುಳುವೆರೆ ಆಯನೋ 2009[ಸಂಶೋಧನಾ ವಿಭಾಗ] 5.ಕಾವ್ಯಶ್ರೀ ಪುರಸ್ಕಾರ[ಕಥಾ ವಿಭಾಗ] 6OUTSTANDING TEACHER AWARD -2013 7 ಹವಿಗನ್ನಡದ ಮೊದಲ ನಾಟಕಗಾರ್ತ ಸಂಶೋಧನೆ ಕುರಿತು------------ ನಾಡಿನ ಹಿರಿಯ ಸಂಶೋಧಕರೂ ,ಸಾಹಿತಿಗಳೂ .ಶಿಕ್ಷಣ ತಜ್ಞರೂ ಆಗಿರುವ ಡಾ.ಅಮೃತ ಸೋಮೇಶ್ವರ ಅವರು “ಅಧ್ಯಯನ ಕ್ಷೇತ್ರದಲ್ಲೂ ಕ್ಷೇತ್ರ ಕಾರ್ಯದಲ್ಲೂ ವಿಶೇಷ ಪರಿಶ್ರಮಿಸಲು ಹಿಂಜರಿಯತಕ್ಕ ಸಾಮಾನ್ಯ ಸಂಶೋಧಕರಿಗಿಂತ ಭಿನ್ನವಾಗಿ ಲಕ್ಷ್ಮೀ ಜಿ ಪ್ರಸಾದ ಅವರು ಬಹುಮಟ್ಟಿಗೆ ಸಂಕೀರ್ಣ ಹಾಗೂ ಕ್ಲೆಶಕರವಾದ ಭೂತಾರಾಧನಾ ರಂಗವನ್ನು ತಮ್ಮ ಅಧ್ಯಯನಕ್ಕೆ ಆರಿಸಿಕೊಂಡಿದ್ದಾರೆ.ಸಾಮಾನ್ಯವಾಗಿ ರಾತ್ರಿ ಕಾಲದಲ್ಲಿ ನಡೆಯುವ ,ವಿವಿಧ ವಿಧಿ ನಿಷೆಧಗಳಿಂದ ಕೂಡಿರುವ ಈ ಆರಾಧನಾ ಪದ್ಧತಿಯ ಕುರಿತಾದ ವಿವರಗಳನ್ನು ಸಮೀಪದಿಂದ ಕಲೆಹಾಕುವುದು ಮಹಿಳೆಯರಿಗಂತೂಕಷ್ಟ ಸಾಧ್ಯ ಕಾರ್ಯ .ಆದರೆ ಲಕ್ಷ್ಮಿಯವರು ಅಂಥ ಸಾಹಸದಲ್ಲಿ ಸಫಲತೆಯನ್ನು ಹೊಂದಿದ್ದಾರೆ.ತಮ್ಮ ಅಧ್ಯಾಪನ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸುತ್ತಲೇ ಅವರು ಸಂಶೋಧನಾ ಹಾಗೂ ಸಾಹಿತ್ಯಿಕ ಕ್ಷೇತ್ರದಲ್ಲಿ ದುಡಿಯುತ್ತಾ ಬಂದಿದ್ದಾರೆ “ಎಂದು ಮುಕ್ತವಾಗಿ ಲಕ್ಷ್ಮೀ ಜಿ ಪ್ರಸಾದರ ಸಾಧನೆ ಬಗ್ಗೆ ಮುಕ್ತವಾಗಿ ಪ್ರಶಂಸಿಸಿದ್ದಾರೆ. ಇತ್ತೀಚಿಗೆ ಪ್ರಕಟವಾದ ತುಳುನಾಡಿನ ನಾಗ ಬ್ರಹ್ಮ ಮತ್ತು ಕಂಬಳ –ಒಂದು ವಿಶ್ಲೇಷಣಾತ್ಮಕ ಅಧ್ಯಯನ ಎಂಬ ಇವರ ಪಿಎಚ್.ಡಿ ಸಂಶೋಧನಾ ಕೃತಿ ಎಲ್ಲರ ಮೆಚ್ಚುಗೆ ಯನ್ನು ಗಳಿಸಿದ್ದು ಅತ್ಯಧಿಕ ಬೇಡಿಕೆಯನ್ನು ಪಡೆದಿದೆ.ಭೂತಗಳ ಅದ್ಭುತ ಜಗತ್ತು ಇವರ ಕ್ಷೇತ್ರ ಕಾರ್ಯದ ಅನುಭವನ್ನು ಒಳಗೊಂಡ ಕೃತಿ .ಇದರಲ್ಲಿ ಕೋಟಿ ಚೆನ್ನಯ ,ಅಬ್ಬೆ ಜಲಾಯ,ಮುಗೆರ್ಲು ,ಬಬ್ಬರ್ಯ,ಕೋಟೆದ ಬಬ್ಬು ,ಕೊರಗ ತನಿಯ ,ಅಜ್ಜಿ ಭೂತ ,ಬೀರ್ನಾಲ್ವ.ಚಾಮುಂಡಿ ಭೂತಗಳು ,ಅರಬ್ಬಿ ಮತ್ತು ಚೀನೀ ಭೂತಗಳು ಸೇರಿದಂತೆ ಸುಮಾರು ಐವತ್ತು ದೈಅವಗಳ ಬಗ್ಗೆ ಸಮಗ್ರ ಮಾಹಿತಿ ಇದೆ 7-ಲಕ್ಷ್ಮಿಯವರ ಸಾಧನೆಗಳಿಗೆ ಪ್ರೇರಣೆ ಎಲ್ಲಿಂದ? ಎಂಬ ಪ್ರಶ್ನೆಗೆ ಅವರೇ ನೀಡಿದ ಉತ್ತರ ಹೀಗಿದೆ ನೋಡಿ-- ,ನನಗೆ ಪ್ರೇರಣೆ ಎಲ್ಲಿಂದ ಅಂತ ತಿಳಿಯುತ್ತಿಲ್ಲ ,ಆರಂಭದಲ್ಲಿ ಎಂ ಫಿಲ್ ಪದವಿಗಾಗಿ ಅಧ್ಯಯನಕ್ಕೆ ತುಳು ಜನಪದ ಸಾಹಿತ್ಯವನ್ನು ಆಯ್ಕೆ ಮಾಡಿ ಆ ತನಕ ವಿದ್ವಾಂಸರ ಪಟ್ಟಿಯಲ್ಲಿ ಹೆಸರು ಕೂಡಾ ಸೇರಿಲ್ಲದ ನಮ್ಮ ಮನೆಯಲ್ಲಿ ಆರಾಧನೆ ಗೊಳ್ಳುತ್ತಿರುವ ಉರವ ಮತ್ತು ಎರು ಬಂಟ ಎಂಬ ಎರಡು ಅಪರೂಪದ ದೈವಗಳ ಬಗ್ಗೆ ಅಧ್ಯಯನ ಮಾಡಿದೆ .ಅದಕ್ಕೆ ಡಾ.ಅಮೃತ ಸೋಮೆಶ್ವರರು ಉತ್ತಮ ಸಂಶೋಧನೆ ಹೀಗೆಯೇ ಮುಂದುವರಿಯಿರಿ ಎಂದು ಅಭಿನಂದಿಸಿದರು ,ಮುಂದೆ ಅದೇ ದಾರಿಯಲ್ಲಿ ನಡೆದು ಈ ತನಕ ಅಧ್ಯಯನ ಆಗದ ಸುಮಾರು 180 ದೈವಗಳ ಕುರಿತು ಅಧ್ಯಯನ ಮಾಡಿ ಮಾಹಿತಿ ಸಂಗ್ರಹಿಸಿದೆ .ಅಷ್ಟರ ತನಕ ಎಲ್ಲೂ ದಾಖಲಾಗದೆ ಇದ್ದ ಕಾರಣ ಸ್ವತಹ ರೆಕಾರ್ಡ್ ಮಾಡಿ ಅಧ್ಯಯನ ಮಾಡಿದೆ ,ಇದಕ್ಕೆ ನನ್ನ ಪತಿ ಗೋವಿಂದ ಪ್ರಸಾದ ,ನನ್ನ ತಂದೆ ತಾಯಿ ,ಸಹೋದರರ ಪೂರ್ಣ ಬೆಂಬಲ ನೀಡಿದ್ದಾರೆ ನಮ್ಮ.ಮಗ ಅರವಿಂದ 4 ವರ್ಷದ ಎಳೆಯ ಮಗು ಆಗಿದ್ದಾಗಲೇ ನನ್ನ ಜೊತೆಗೆ ರೆಕಾರ್ಡಿಂಗ್ ಗೆ ಬರುತ್ತಿದ್ದ ,ನನಗೆ ರೆಕಾರ್ಡಿಂಗ್ ಹಾಗೂ ಫೀಲ್ಡ್ ವರ್ಕ್ ನಲ್ಲಿ ಅವನು ತುಂಬಾ ಸಹಾಯ ಮಾಡಿದ್ದಾನೆ ,ನಾನು ಎರಡನೇ ವರ್ಷ ಪದವಿ ಓದುತ್ತಿದ್ದಾಗ ನನ್ನ ಮದುವೆ ಆಯಿತು ನಂತರ ಓದನ್ನು ಮುಂದುವರಿಸುವುದು ನಮ್ಮ ಸಂಪ್ರದಾಯಸ್ಥ ಸಮಾಜದಲ್ಲಿ ಒಂದು ಸವಾಲು ಆಗಿತ್ತು ,ಸಾಕಷ್ಟು ಅವಮಾನ ,ಅವಹೇಳನವನ್ನು ಎದುರಿಸಬೇಕಾಯಿತು ,ಆಗೆಲ್ಲ ನನ್ನ ಹೆಗಲಿಗೆ ಕೈಕೊಟ್ಟು ಗೋವಿಂದ ಪ್ರಸಾದ್ .ಮತ್ತು ನನ್ನ ತಂದೆ ತಾಯಿ ಸಹೋದರರು ಡಾ । ಲಕ್ಷ್ಮೀ ಜಿ ಪ್ರಸಾದ, ಎಂ.ಎ (ಕನ್ನಡ ) ಎಂ.ಎ (ಸಂಸ್ಕೃತ ) ಎಂ.ಎ (ಹಿಂದಿ ) ಎಂ.ಫಲ್ . ಪಿಎಚ್ ಸಾಮಾಜಿಕ ಅನ್ಯಾಯ-ಅಸಮತೋಲನ-ಜಾತಿ-ಲಿಂಗ-ವರ್ಗಾಧಾರಿತ ತಾರತಮ್ಯಗಳ ವಿರುಧ್ಧ ಸದಾ ಧ್ವನಿಯೆತ್ತುವ,ಸಾಮಾಜಿಕ ನ್ಯಾಯಕ್ಕಾಗಿ ಆಗ್ರಹಿಸುವ ಪ್ರವೃತ್ತಿ ಹೊಂದಿರುವ ಲಕ್ಶ್ಮಿಯವರು ಕೆಲವರಿಗೆ ನಿಷ್ಟುರರಾಗಿ ಕಾಣಿಸಿದರೂ ಅದನ್ನು ಲಕ್ಷಿಸದೆ ತಮ್ಮ ನೇರ ನಡೆನುಡಿಯನ್ನು ಉಳಿಸಿಕೊಂಡು ತನ್ನತನವನ್ನು ಕಾಯ್ದುಕೊಂಡು ಅನ್ಯಾಯಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದೆ-ಕಾರ್ಯನಿರತೆಯಾಗಿರುವ ಲಕ್ಷ್ಮಿಯವರ ರೀತಿ ಮಹಿಳೆಯರಿಗೆ ಅನುಕರಣೀಯ, ಡಾ । ಲಕ್ಷ್ಮೀ ಜಿ ಪ್ರಸಾದ, ಎಂ.ಎ (ಕನ್ನಡ ) ಎಂ.ಎ (ಸಂಸ್ಕೃತ ) ಎಂ.ಎ (ಹಿಂದಿ ) ಎಂ.ಫಿಲ್ಫಿಲ್ . ಪಿಎಚ್ https://facebook/notes/lakshmi-g-prasad/ನನ್ನ-ಸಂಕ್ಷಿಪ್ತ-ಪರಿಚಯ/283278238464151
Posted on: Sun, 24 Aug 2014 03:56:39 +0000

Trending Topics



Recently Viewed Topics




© 2015