ಏನು ಬರೀ ತೀರ? ಎನ್ನದಿರು - TopicsExpress



          

ಏನು ಬರೀ ತೀರ? ಎನ್ನದಿರು ಹುಡುಗಿ- ಇಲ್ಲಿದೆ ಚಾಚಿಕೊಳ್ಳುವ ಕೈಗಳಿಲ್ಲದೇ ವಾಪಾಸು ಹೋದ ಅಲೆಗಳ ಆಕ್ರಂಧನ ಎಲ್ಲಿಂದಲೋ ತೇಲಿ ಬಂದ ಬಡಪಾಯಿ ಕಪ್ಪೆಚಿಪ್ಪುಗಳ ಏಕಾಕಿತನ ಇಷ್ಟೇ ಏಕೆ? ನೀ ನಡೆದು ಹೋದ ಹೆಜ್ಜೆಗಳ ಮೇಲೆ ನಾ ಬರೆದ ಕವಿತೆ ಸಾಲುಗಳ ಆತ್ಮ ನೆನಪುಗಳ ಗಾಯಕ್ಕೆ ಮುಲಾಮು ಬಳಿವ ಉಪ್ಪುಗಾಳಿ ಏನು ಬರೀ ತೀರ? ಎನ್ನದಿರು ಹುಡುಗಿ- ತೀರದ ನೋವನ್ನು ನನ್ನೊಳಗುಳಿಸಿ ಹೋದ ತೀರಾ ತೀರಾ ಹತ್ತಿರದ ತೀರದಾಚೆಯ ಹುಡುಗಿ.
Posted on: Fri, 23 Aug 2013 13:22:49 +0000

Trending Topics




© 2015