ಗ್ರಾಮೀಣ ಸೊಗಡಿನ ಕಲೆಗಳು - TopicsExpress



          

ಗ್ರಾಮೀಣ ಸೊಗಡಿನ ಕಲೆಗಳು ಕ್ರೀಡೆಗಳು ಇತ್ತೀಚಿನ ವರ್ಷಗಳಲ್ಲಿ ನಶಿಸಿ ಹೋಗುತ್ತಿದೆ. ವಿನಾಶದಂಚಿನಲ್ಲಿ ಇರುವ ಕ್ರೀಡೆಗೆ ಪುನರುಜ್ಜೀವನ ನೀಡುವ ಸಲುವಾಗಿ ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ಕೆಸರಿನಗದ್ದೆ ಓಟವನ್ನು ಆಯೋಜಿಸಿ ಗ್ರಾಮೀಣ ಕಲೆ ಮತ್ತು ಕ್ರೀಡೆಗೆ ಒತ್ತು ನೀಡಲಾಗುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಧ್ಯಾಕ್ಷ ನಾರಾಯಣಗೌಡ ತಿಳಿಸಿದರು. ತಾಲೂಕು ಕರವೇ ಆಯೋಜಿಸಿದ್ದ ತಾಲೂಕು ಮಟ್ಟದ ಕೆಸರುಗದ್ದೆ ಓಟ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿಂದೆ ಗ್ರಾಮೀಣ ಪ್ರದೇಶಗಳಲ್ಲಿ ವರ್ಷಕ್ಕೆ ಎರಡು ಬಾರಿ ತಮಗೆ ಫಲ ನೀಡುವ ಭೂಮಿಗೆ ಪೂಜೆ ಸಲ್ಲಿಸುವ ಪರಿಪಾಟ ಇತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಅವುಗಳು ಕಾಣೆಯಾಗುತ್ತಿದೆ ಎಂದು ವಿಷಾದಿಸಿದರು. ಶಾಸಕ ರೇವಣ್ಣ, ಪೋಟಾಟೋ ಕ್ಲಬ್ ಅಧ್ಯಕ್ಷ ಯೋಗಾರಮೇಶ್, ಕರವೇ ರಾಜ್ಯ ಉಪಾಧ್ಯಕ್ಷ ರವೀಂದ್ರ, ರಾಜ್ಯ ಮಹಿಳಾ ಘಟಕದ ಸಂಘಟನಾ ಕಾರ್ಯದರ್ಶಿ ಮಮತ, ಬೆಂಗಳೂರು ಘಟಕದ ನರೇಂದ್ರಬಾಬು, ತಾಲೂಕು ಘಟಕದ ಅಧ್ಯಕ್ಷ ಕೆರಗೋಡು ಮಹೇಶ್, ನಗರಘಟಕದ ಅಧ್ಯಕ್ಷ ಓಹೀಲೇಶ್ ಇತರರು ಹಾಜರಿದ್ದರು. ಪ್ರಶಸ್ತಿ: ಕೆಸರುಗದ್ದೆ ಓಟದಲ್ಲಿ ಓಡನಹಳ್ಳಿ ಗ್ರಾಮದ ಬಾಬು ಪ್ರಥಮ, ಅರಕಲಗೂಡಿನ ರಾಜೇಶ್ ದ್ವಿತೀಯ ಹಾಗೂ ಹಳ್ಳಿಮೈಸೂರಿನ ಸುನೀಲ್ ತೃತೀಯ ಬಹುಮಾನ ಗಳಿಸಿದರು. ---- ತಾಲೂಕು ಪಂಚಾಯಿತಿ ಮಾಸಿಕ ಸಭೆಗಳಿಗೆ ಮಾಹಿತಿ ನೀಡಬೇಕಾದ ಅಧಿಕಾರಿಗಳು ಸಭೆಗೆ ಆಗಮಿಸದ ಬಗ್ಗೆ ತಾಲೂಕು ಪಂಚಾಯಿತಿ ಅಧ್ಯಕ್ಷೆ, ಉಪಾಧ್ಯಕ್ಷ ಸೇರಿದಂತೆ ಬಹುತೇಕ ಎಲ್ಲ ಸದಸ್ಯರು ಕಾರ್ಯನಿರ್ವಹಣಾಧಿಕಾರಿ ಅವರನ್ನು ತರಾಟೆಗೆ ತಗೆದುಕೊಂಡ ಘಟನೆ ನಡೆಯಿತು. ಗುರುವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷೆ ಪುಷ್ಪಗೌಡೇಗೌಡ ಅವರ ಅಧ್ಯಕ್ಷತೆಯಲ್ಲಿ ಬೆಳಗ್ಗೆ ಸಾಮಾನ್ಯ ಸಭೆ ಕರೆಯಲಾಗಿತ್ತು. ಯಾವೊಬ್ಬ ಅಧಿಕಾರಿಯು ನಿಗದಿತ ಸಮಯಕ್ಕೆ ಹಾಜರಾಗಲಿಲ್ಲ. ಇದರಿಂದಾಗಿ ಸುಮಾರು ೧ ಗಂಟೆ ತಡವಾಗಿ ಆರಂಭಗೊಂಡಿತು. ಸಭೆ ಆರಂಭಕ್ಕೆ ಮುನ್ನ ಅಧ್ಯಕ್ಷೆ ಪುಷ್ಪಗೌಡೇಗೌಡ, ಉಪಾಧ್ಯಕ್ಷ ನಂಜುಂಡಪ್ಪ ಸೇರಿದಂತೆ ಬಹುತೇಕ ಸದಸ್ಯರು ಸಭಾಂಗಣದಲ್ಲಿ ಆಸೀನರಾಗಿ ಅಧಿಕಾರಿಗಳ ಆಗಮನವನ್ನೇ ಎದುರು ನೋಡುತ್ತಿದ್ದರು. ನಿರ್ಗಮಿತ ಉಪಾಧ್ಯಕ್ಷ ಹುಚ್ಚೇಗೌಡ ಸಾಮಾನ್ಯ ಸಭೆ ವಿಚಾರದಲ್ಲಿ ಅಧಿಕಾರಿಗಳು ಮನಬಂದಂತೆ ಸಭೆಗೆ ಆಗಮಿಸುತ್ತಿರುವುದಕ್ಕೆ ಅಕ್ಷೇಪ ವ್ಯಕ್ತ ಪಡಿಸಿದರು. ಕೆಲವೇ ಬೆರಳೆಣಿಕೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಲು ಆಗಮಿಸಿದ್ದಾರೆ. ಅವರನ್ನು ಬಿಟ್ಟು ಸಮಯಕ್ಕೆ ಬಾರದ ಅಧಿಕಾರಿಗಳ ಹೆಸರನ್ನು ದಾಖಲೆ ಪುಸ್ತಕದಲ್ಲಿ ದಾಖಲಿಸಬೇಕೆಂದು ಸಭೆಯಲ್ಲಿ ಹಾಜರಿದ್ದ ಬಹುತೇಕ ಸದಸ್ಯರು ಆಗ್ರಹಿಸಿದರು. ಪುಷ್ಟಗೌಡೇಗೌಡ ನೂತನವಾಗಿ ಅಧ್ಯಕ್ಷರಾಗಿರುವುದರಿಂದ ಅವರನ್ನು ಅಭಿನಂದಿಸಿ ಸಭೆಯನ್ನು ಮುಂದೂಡಿ ಮುಂದಿನ ದಿನಾಂಕವನ್ನು ಗೊತ್ತು ಪಡಿಸಿ ಎಂದು ಇಒ ತಮ್ಮಣ್ಣಗೌಡ ಅವರನ್ನು ಆಗ್ರಹಿಸಿದರು. ಮೊದಲೇ ಮಾಹಿತಿ ನೀಡದೆ ಸಭೆ ಕರೆದಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯರು ಸಭೆಗೆ ೭ ದಿನಗಳ ಮೊದಲು ಮಾಹಿತಿ ನೀಡಬೇಕು ಎಂಬ ನೀತಿ ನಿಯಮಾಳಿಗಳನ್ನು ಇಒ ಗಾಳಿಗೆ ತೂರಿದ್ದಾರೆ. ಸಾಮಾನ್ಯ ಸಭೆ ಎರಡು ದಿನಗಳ ಮೊದಲು ನಮಗೆ ವಿಷಯ ತಿಳಿಸಿದ್ದಾರೆ. ಇದು ಯಾವ ರೀತಿ ಎಂಬುದು ತಿಳಿಯುತ್ತಿಲ್ಲ ಎಂದು ಸದಸ್ಯರಾದ ಸಿ.ಆರ್.ಮಂಜುನಾಥ್, ಹುಚ್ಚೇಗೌಡ, ಕೃಷ್ಣಪ್ಪ ಇಒ ಅವರನ್ನು ತೀವ್ರ ತರಾಟೆಗೆ ತಗೆದುಕೊಂಡರು. ಇಒ ತಮ್ಮಣ್ಣಗೌಡ ಮಾತನಾಡಿ, ಸೋಮವಾರ ಶಾಸಕ ರೇವಣ್ಣ ಸಭೆ ನಡೆಸಲು ಸೂಚಿಸಿದ್ದರಿಂದ ತ್ವರಿತವಾಗಿ ಕರೆಯಬೇಕಾಯಿತೆಂದು ಸಮಜಯಿಸಿ ನೀಡಿದರು. ಇದರಿಂದ ಕೆಲ ಸದಸ್ಯರು ಬಾಯಿಗೆ ಬೀಗ ಬಡಿದಂತೆ ಆದರೂ ಮತ್ತಷ್ಟು ಸದಸ್ಯರು ಅದನ್ನು ಒಪ್ಪದೆ ಅದಕ್ಕೂ ನಮಗೂ ಸಂಬಂಧ ಏಕೆ ಕಲ್ಪಿಸುತ್ತಿದ್ದೀರಿ, ಎಲ್ಲಕ್ಕೂ ತಲೆ ಆಡಿಸಿ ಇಲ್ಲಿ ಬಂದು ಸಭೆ ನಡೆಸುವ ವಿಚಾರದಲ್ಲಿ ತಮ್ಮದು ಆಕ್ಷೇಪ ಇದೆ ಎಂದರು. ಸದಸ್ಯರ ಒತ್ತಡಕ್ಕೆ ಮಣಿದ ಇಒ ತಮ್ಮಣ್ಣಗೌಡ ಸಾಮಾನ್ಯ ಸಭೆಯನ್ನು ಸೆ.೧೫ ರೊಳಗೆ ನಿಗದಿಪಡಿಸಲು ತೀರ್ಮಾನಿಸಿದರು. ಇಲಾಖೆಯ ಮುಖ್ಯ ಅಧಿಕಾರಿಗಳು ತಪ್ಪದೆ ಆಗಮಿಸಿ ಮಾಹಿತಿ ನೀಡುವಂತೆ ಕಟ್ಟಪ್ಪಣೆ ಮಾಡುವುದಾಗಿ ತಿಳಿಸಿದರು. --- ತಾಲೂಕಿನ ಪಡುವಲಹಿಪ್ಪೆ ಎಚ್.ಡಿ.ದೇವೇಗೌಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಮೈಸೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ಸಂಯುಕ್ತಾಶ್ರಯದಲ್ಲಿ ಅಂತರ ಕಾಲೇಜುಗಳ ಪುರುಷರ ಮತ್ತು ಮಹಿಳೆಯರ ಕ್ರಾಸ್‌ಕಂಟ್ರಿ ಸ್ಪರ್ಧೆ ಸೆ.೨ ರಂದು ಶನಿವಾರ ಪಡುವಲಹಿಪ್ಪೆ ಕಾಲೇಜಿನ ಆವರಣದಲ್ಲಿ ಆರಂಭಗೊಳ್ಳಲಿದೆ ಎಂದು ಪ್ರಾಂಶುಪಾಲ ನಾರಾಯಣ್ ತಿಳಿಸಿದ್ದಾರೆ. ಶನಿವಾರ ಬೆಳಗ್ಗೆ ೬ಕ್ಕೆ ಶಾಸಕ ರೇವಣ್ಣ ಪುತ್ರ ಎಚ್.ಆರ್.ಪ್ರಜ್ವಲ್ ರೇವಣ್ಣ ಉದ್ಘಾಟಿಸಲಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಸಿ.ಕೃಷ್ಣ, ಕಾಲೇಜು ಅಭಿವೃದಿಟಛಿ ಸಮಿತಿ ಅಧ್ಯಕ್ಷ ಬಸವೇಗೌಡ, ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಎನ್.ದೇವೇಗೌಡ ಭಾಗವಹಿಸಲಿದ್ದಾರೆ. ಸಮಾರಂಬದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಡಿ.ನಾರಾಯಣ್ ವಹಿಸಲಿದ್ದಾರೆ. ಸಮಾರಂಭದಲ್ಲಿ ದೈಹಿಕ ಶಿಕ್ಷಣ ನಿರ್ದೇಶಕ ಜಿ.ಪಿ.ಯೋಗೇಶ್ ಹಾಜರಿರುತ್ತಾರೆ. ರಾಷ್ಟ್ರ ಮಟ್ಟದ ಖೋ-ಖೋ ಆಟಗಾರ, ಏಕಲವ್ಯ ಪ್ರಶಸ್ತಿ ಪುರಸ್ಕೃತ ಹಾಸನದ ಸಿ.ಪಿ.ಆದರ್ಶ ಅವರನ್ನು ಗೌರವಿಸಲಾಗುತ್ತದೆ. --- *************** ಈ ದಿನದ ಪ್ರಾಯೋಜಕರು: Systems Technology : ಸಿಸ್ಟಮ್ ಟೇಕ್ನಾಲಜಿ : ಮಂಡ್ಯ-ಮೈಸೂರು-ಹಾಸನ : 7259108417: Today Offer : Intel Processor2.6 Ghz, Ram 1GB, 160GB Hard Disk, DVD R/W, Mouse, TFT Monitor 15 Inch.. Offer Price : ಕೇವಲ 9999/- Only. Home Delivery (High Configuration ಕಂಪ್ಯೂಟರ್ ಗಳನ್ನು Assemble ಮಾಡಿಕೊಡಲಾಗುವುದು. ಎಲ್ಲಾ ಕಂಪ್ಯೂಟರ್ ಬಿಡಿಭಾಗಗಳ ಮೇಲೆ ಕಂಪನಿ ಆಧಾರದ ಮೇಲೆ 2 ವರ್ಷ ಅಥವಾ 3 ವರ್ಷ ಗ್ಯಾರಂಟಿ ಕೊಡಲಾಗುವುದು)
Posted on: Fri, 30 Aug 2013 01:47:17 +0000

Trending Topics



Recently Viewed Topics




© 2015