ದೆಹಲಿ ವಿಧಾನ ಸಭೆ - TopicsExpress



          

ದೆಹಲಿ ವಿಧಾನ ಸಭೆ ಚುನಾವಣೆಗೆ ದಿನಾಂಕ ಪ್ರಕಟವಾಗಿದೆ. ಫೆಬ್ರುವರಿ 7ರಂದು ದೆಹಲಿಯಲ್ಲಿ ವಿಧಾನ ಸಭೆ ಚುನಾವಣೆ ನಡೆಯಲಿದ್ದು, ಫೆಬ್ರುವರಿ 10ರಂದು ಫಲಿತಾಂಶ ಘೋಷಣೆಯಾಗಲಿದೆ. ಒಂದೇ ಹಂತದಲ್ಲಿ 70 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದ್ದು, ಇಂದಿನಿಂದಲೇ ಚುನಾವಣೆ ನೀತಿ ಸಂಹಿತೆ ಜಾರಿಗೆ ಬರಲಿದೆ. ಜನವರಿ 21 ನಾಮಪತ್ರ ಸಲ್ಲಿಸಲು ಕೊನೇ ದಿನವಾಗಿದೆ. ಜನವರಿ 22 ನಾಮಪತ್ರ ಪರಿಷ್ಕರಣೆಗೆ ಹಾಗೂ ಜನವರಿ 24 ನಾಮಪತ್ರ ಹಿಂಪಡೆಯಲು ಕೊನೆ ದಿನವಾಗಿದೆ ಅಂತಾ ಮುಖ್ಯ ಚುನಾವಣಾ ಆಯುಕ್ತ ವಿ. ಎಸ್ ಸಂಪತ್ ತಿಳಿಸಿದ್ದಾರೆ.
Posted on: Mon, 12 Jan 2015 17:48:19 +0000

Trending Topics



Recently Viewed Topics




© 2015