ನಮಗೆ ಅಭಿವೃದ್ದಿ ಬೇಕು ನಿಜ. - TopicsExpress



          

ನಮಗೆ ಅಭಿವೃದ್ದಿ ಬೇಕು ನಿಜ. ಆದರೆ ಯಾವರೀತಿಯ ಅಭಿವೃದ್ದಿ ಬೇಕು?. ಉತ್ತರಾಖಂಡದಲ್ಲಿ ಸಂಭವಿಸಿದ ಜಲಪ್ರಳಯಕ್ಕೆ ಅಲ್ಲಿ ಕೈಗೊಳ್ಳಲಾಗಿರುವ ಜಲವಿಧ್ಯುತ್ ಯೋಜನೆಗಳೇ ಕಾರಣವೆಂದು ಪರಿಸರವಾದಿಗಳು, ಅಧ್ಯಯನ ನಡೆಸಿದ ತಜ್ನರು ಹೇಳುತ್ತಿದ್ದಾರೆ. ನದಿ ಪಾತ್ರದಲ್ಲಿ ಎದ್ದಿರುವ ವಸತಿ ಸಮುಚ್ಚಯಗಳು ಬೆಂಕಿ ಪೆಟ್ಟಿಗೆಯಂತೆ ನದಿಗುರುಳುತ್ತಿರುವ ಪರಿಯನ್ನು ನೋಡುತ್ತಿದ್ದರೆ.ಅಲ್ಲಿ ಪ್ರಕೃತಿಯ ಮೇಲೆ ಮಾನವನ ಹಸ್ತಕ್ಷೇಪ ಎಷ್ಟು ನಡೆದಿದೆಯೆಂಬ ಸಣ್ಣ ಸುಳಿವು ಸಿಕ್ಕಿ ಬಿಡುತ್ತದೆ. ದೃಶ್ಯ ಮಾಧ್ಯಮದಲ್ಲಿ ಭೂಕುಸಿತದ ಅಗಾಧತೆಯನ್ನು ಕಂಡಾಗ ನನಗೆ ನೆನಪಿಗೆ ಬಂದದ್ದು ನಮ್ಮ ಪಶ್ಚಿಮ ಘಟ್ಟಗಳು. ಅಲ್ಲಿಯೂ ಒಂದರ ಹಿಂದೆ ಒಂದರಂತೆ ಮಿನಿ ಜಲವಿಧ್ಯುತ್ ಯೋಜನೆಗಳನ್ನು ಜಾರಿಗೊಳಿಸಲು ಸರಕಾರ ತುದಿಗಾಲಿನಲ್ಲಿ ನಿಂತಿದೆ. ಅಂದರೆ ಮುಂಬರುವ ದಿನಗಳಲ್ಲಿ ಉತ್ತರಾಖಂಡದ ಸ್ಥಿತಿ ಇಲ್ಲಿಯೂ ಸಂಭವಿಸಬಹುದಲ್ಲವೇ?
Posted on: Thu, 20 Jun 2013 14:11:43 +0000

Trending Topics



Recently Viewed Topics




© 2015