ಬಿಸಿಯುಸಿರು ಬಿಗಿಹಿಡಿದು * * - TopicsExpress



          

ಬಿಸಿಯುಸಿರು ಬಿಗಿಹಿಡಿದು * * * * * * * * * * * * ತಾಯ್ತನ- ಬಾಡಿಗೆ ತಾಯಂದಿರ ಕಥೆ........ ನಮ್ಮ ಸುತ್ತ-ಮುತ್ತ ವಾಸಿಸುವ ಜನರೆ, ಕಷ್ಟದ ಸಮಯದಲ್ಲಿ ಶತೃಗಳಾಗಿ ಬಿಡುತಾರೆ, ಕಷ್ಟದಲ್ಲಿ ನೊಂದು, ಕಣ್ಣೀರಿಡುವವರ ಕಂಬನಿ ಒರೆಸುವ ಕೈಯಾಗದಿದ್ದರೂ, ತಮ್ಮ ಮಾತಿನ ಶೂಲದಿಂದ ಇರಿದು ಮತ್ತಷ್ಟು ಘಾಸಿ ಮಾಡಿ ಬಿಡುತ್ತಾರೆ, ನೊಂದವರ ಬದುಕಿನ ಬವಣೆಗಳನ್ನು ತಮ್ಮ ಮನರಂಜನೆಗೆ ಬಳಸಿಕೊಂಡು ಖುಷಿ ಪಡುತ್ತಾರೆ. ಇಂತಹವರ ಬಿರುನುಡಿಗಳಿಗೆ ಸಿಲುಕಿದ ಅದೇಷ್ಟೋ ಜನ ಅಪರಾಧಿ ಭಾವನೆ ತಾಳಿ, ಈ ಬದುಕಿನ ಜಂಜಾಟವೆ ಬೇಡವೆಂದು ನಿರ್ಧರಿಸಿ ಬದುಕಿನ ಹಂಗು ಹರಿದುಕೊಂಡು ಇಹಲೋಕವನ್ನೇ ತ್ಯೆಜಿಸಿ ಬಿಡುತ್ತಾರೆ. ಇಂತಹ ಜನರ ನಡುವೆ, ಬದುಕಲ್ಲಿ ಬಂದ ಕಷ್ಟಗಳೆನೆಲ್ಲಾ ಎದುರಿಸಿ ಸಮಾಜದ ಅಂಕು, ಡೊಂಕುಗಳಿಗೆ ತಲೆಕೆಡಿಸಿಕೊಳ್ಳದೆ, ಅಕ್ಕ-ಪಕ್ಕದ ಜನರ ಚುಚ್ಚು ಮಾತುಗಳಿಗೆ ಜಗ್ಗದೆ, ಮನಸ್ಸನ್ನು ಗಟ್ಟಿಮಾಡಿಕೊಂಡು ತನ್ನ ಗಂಡನ ಸಮ್ಮತಿ ಪಡೆದು ಬಾಡಿಗೆ ತಾಯಿಯಾಗಿ ಬರಿದಾದ ಮತ್ತೊಬ್ಬ ಹೆಣ್ಣು ಮಗಳ ಮಡಿಲು ತುಂಬಿ, ಆವರಿಂದ ಹಣದ ಸಹಾಯ ಪಡೆದು ಆ ಹಣದಿಂದಲೆ ತನ್ನ ಗಂಡ ಹಾಗೂ ಮಗಳಿಗೆ ಒಂದು ಹೊತ್ತು ಅನ್ನ ಹಾಕುತ್ತಿರುವ ಮಹಾಸಾಧ್ವಿ ಚಂದ್ರಕಲಾರವರ ಮನ ಮಿಡಿಯುವ ಕಥೆ. ಶಿವಮೊಗ್ಗ ಮೂಲದ ಚಂದ್ರಕಲಾ ಅನೂಕೂಲಸ್ಥ ಕುಟುಂಬದ ಹೆಣ್ಣು ಮಗಳಾದರೂ ಪ್ರೀತಿಯ ಸೆಳೆತಕ್ಕೆ ಸಿಲುಕಿ ಬದುಕ ಕಟ್ಟ ಹೊರಟ್ಟಿದ್ದು, ಹಣ್ಣಿನ ವ್ಯಾಪಾರ ಮಾಡುವ ಯುವಕನೊಂದಿಗೆ. ಹೆತ್ತವರ ವಿರೋಧದ ನಡುವೆಯೂ, ತಾನು ಇಷ್ಟ ಪಟ್ಟ ಹಣ್ಣು ಮಾರುವ ಯುವಕ ಆನಂದನನ್ನು ಮದೆವೆಯಾಗಿ ಸುಂದರ ಬದುಕಿನ ಕನಸು ಹೊತ್ತಿದ್ದಳು, ಮದುವೆಯಾಗಿ ಎಂಟು ವರ್ಷಕಳೆದರು ತನ್ನ ಗಂಡ ಹಾಗೂ ಮಗಳ ಜೊತೆ ಇದ್ದದರಲ್ಲೆ ಖುಷಿಯಾಗಿದ್ದ, ಚಂದ್ರಕಲಾ, ಮತ್ತೆ ಯಾವತ್ತು ತನ್ನ ಹೆತ್ತವರನ್ನು ಕಾಣುವ ಪ್ರಯತ್ನ ಮಾಡಲಿಲ್ಲ, ಹೆತ್ತವರು ಸಹ ತಮ್ಮ ಮಾತನ್ನು ದಿಕ್ಕರಿಸಿ ಹೋದಳೆಂಬ ಕಾರಣದಿಂದ ಮತ್ತೆ ಮಗಳನ್ನು ಕಾಣುವ ಪ್ರಯತ್ನ ಮಾಡಲೇ ಇಲ್ಲ, ಹೀಗಿರುವಾಗಲೆ ಒಂದು ದಿನ ಮಾರ್ಕೆಟ್‌ನಿಂದ ಅಟೋದಲ್ಲಿ ಅಂಗಡಿಗೆ ಹಣ್ಣು ತರುತ್ತಿದ ಆನಂದ, ರಸ್ತೆ ಅಪಘಾತದಲ್ಲಿ ತನ್ನ ಕಾಲುಗಳನ್ನು ಕಳೆದುಕೊಂಡು ಬಿಟ್ಟ. ಇಂಥಹ ಕಷ್ಟದ ದಿನದಲ್ಲಿ ಹಣದ ಅವಶ್ಯಕತೆಯಿಂದಾಗಿ ಹೆತ್ತವರ ಬಳಿಗೆ ತೆರಳಿದ ಚಂದ್ರಕಲಾಳಿಗೆ, ಹೆತ್ತವರಿಂದ ಯಾವ ಸಹಾಯವು ಸಿಗಲ್ಲಿಲ್ಲ ಸಿಕ್ಕಿದ್ದು ಬರಿ ನಿಂದನೆ ಮಾತ್ರ. ಅಂತಹ ಸಂಧರ್ಭದಲ್ಲಿ ಏನು ಮಾಡಬೇಕೆಂದು ತೋಚದ ಚಂದ್ರಕಲಾ, ಜೀವನಕ್ಕೆ ಆಧಾರವಾಗಿದ್ದ ಹಣ್ಣಿನ ಅಂಗಡಿಯನ್ನು ಮಾರಿ ತನ್ನ ಗಂಡನಿಗೆ ಚಿಕಿತ್ಸೆ ಕೊಡಿಸಿದಳು. ದಿನ ಕಳೆದಂತೆ ಜೀವನಕ್ಕೆ ಆಧಾರವಾಗಿದ್ದ ಹಣ್ಣಿನ ಅಂಗಡಿ ಕಳೆದುಕೊಂಡ ಮೇಲಂತ್ತು ಒಪ್ಪತ್ತಿನ ಗಂಜಿಗೂ ಪರದಾಡುವಂತಹ ಸಂದರ್ಭ ಎದುರಾಗ ತೊಡಗಿತು, ಆದರೂ ಧೈರ್ಯಗೆಡದ ಚಂದ್ರಕಲಾ, ತನ್ನ ವಿಕಲಾಂಗ ಗಂಡ ಹಾಗೂ ಮಗಳನ್ನು ಕರೆದುಕೊಂಡು ಬೆಂಗಳೂರಿಗೆ ಬಂದು ತನ್ನಲ್ಲಿದ್ದ ಒಡವೆಗಳನ್ನೂ ಅಡವಿಟ್ಟು ಆ ಹಣದಿಂದ ಒಂದು ಚಿಕ್ಕ ಮನೆ ಬಾಡಿಗೆಗೆ ಪಡೆದು ತನ್ನ ವಿಕಲಾಂಗ ಗಂಡನನ್ನು ಮನೆಯಲ್ಲಿ ಬಿಟ್ಟು, ಒಂದು ಗಾರ್ಮೆಂಟ್ಸ್‌ಗೆ ಕೆಲಸಕ್ಕೆ ಸೇರಿದಳು. ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುವ ಹೆಣ್ಣು ಮಕ್ಕಳೆಂದರೆ ಅತ್ಯಂತ ಕೆಟ್ಟ ದೃಷ್ಟಿಯಲ್ಲಿ ನೋಡುವ ಜನಗಳ ನಡುವೆ, ಎಲ್ಲಾ ಸಹಿಸಿಕೊಂಡು ಕೆಲಸ ನಿರ್ವಹಿಸುತ್ತಿದಳು. ಹೀಗಿರುವಾಗಲೆ ತನ್ನ ಮುದ್ದು ಮಗಳಿಗೆ ಹೃದಯಕ್ಕೆ ಸಂಬಂಧ ಪಟ್ಟ ತೊಂದರೆ ಕಾಣಿಸಿಕೊಂಡು ಅಪರೇಷನ್‌ಗೆಂದು ಸುಮಾರು ಮೂರರಿಂದ ನಾಲ್ಕು ಲಕ್ಷ ಹಣದ ಅವಶ್ಯಕತೆ ಉಂಟಾಯಿತ್ತು, ಇಂತಹ ಸಂದರ್ಭದಲ್ಲಿ ದಿಕ್ಕೆ ತೋಚದೆ ಕಂಗಲಾದ ಚಂದ್ರಕಲಾಳಿಗೆ ಆಸರೆಯಾಗಿದ್ದು, ಆಕೆಯ ಗಾರ್ಮೆಂಟ್ಸ್‌ನ ಗೆಳತಿ ಆಶಾ, ಹೌದು ಹಣದ ಅವಶ್ಯಕತೆ ನಿವಾರಿಸಲು ಆಶಾ ಕೊಟ್ಟ ಸಲಹೆ, ಮಕ್ಕಳಿಲ್ಲದೆ ಮಕ್ಕಳಿಗಾಗಿ ಹಂಬಲಿಸವವರಿಗೆ ಬಾಡಿಗೆ ತಾಯಿಯಾಗುವುದು, ಆಶಾಳ ಮಾತಿನಿಂದ ಮೊದ ಮೊದಲು ಅಂಜಿದರೂ ನಂತರ ಸೃಷ್ಟಿ ಜೆ.ವಿ.ಎಕ್ಸ್ ಸಂತಾನ ಕೇಂದ್ರದಲ್ಲಿ ಕೌನ್ಸಿಲಿಂಗ್ ನಡೆಸುವ ಮಿನಾಕ್ಷಿಯವರ ಸಲಹೆ ಪೆಡೆದು ಬಾಡಿಗೆ ತಾಯಿ ಯಾಗುವುದರಿಂದ ಯಾವ ಕಳಂಕವು ಇಲ್ಲವೆಂದು ಮನವರಿಕೆ ಯಾದ ನಂತರ, ಎಲ್ಲಾ ವಿಷಯವನ್ನು ತನ್ನ ಗಂಡನಿಗೆ ತಿಳಿಸಿ, ಅತನಿಂದ ಅನುಮತಿ ಪಡೆದು ಬಾಡಿಗೆ ತಾಯಿಯಾಗುವ ತೀರ್ಮಾನ ತೆಗೆದುಕೊಂಡಳು. ನಂತರ ಸೃಷ್ಟಿ ಜೆ.ವಿ.ಎಕ್ಸ್ ಸಂತಾನಕೇಂದ್ರಕ್ಕೆ ತೆರಳಿ ತನ್ನ ಸಮಸ್ಯೆಯನೆಲ್ಲಾ ಡಾ.ಕೆ.ಟಿ ಗುರುಮೂರ್ತಿಯವರಲ್ಲಿ ಹೇಳಿಕೊಂಡು ತನ್ನ ಗರ್ಭದಲ್ಲಿ ಮತ್ತೊಬ್ಬರ ಮಗುವನ್ನು ಬೆಳೆಸಲು ಒಪ್ಪಿಗೆ ನೀಡಿದಳು, ಇದರಿಂದಾಗಿ ಮಕ್ಕಳಿಲ್ಲದ ದಂಪತಿಗಳಿಂದ ಆರು ಲಕ್ಷ ಹಣ ದೊರಕಿ ತನ್ನ ಮಗಳ ಅಪರೇಷನ್ ಮಾಡಿಸಿದ್ದಲ್ಲದೆ ಒಂಭತ್ತು ತಿಂಗಳು ಸೃಷ್ಠಿ, ಸಂತಾನ ಕೇಂದ್ರದಲ್ಲೆ ಇದ್ದ ಚಂದ್ರಕಲಾ ಮಕ್ಕಳಿಲ್ಲದ ಆ ದಂಪತಿಗಳಿಗೆ ತನ್ನ ಅಂಡಾಣು ದಾನ ಮಾಡಿ ತನ್ನ ಗರ್ಭದಲ್ಲಿ ಅವರ ಮಗು ಬೆಳಿಸಿ ಮಗು ಜನಿಸಿದ ನಂತರ ಆ ದಂಪತಿಗಳಿಗೆ ಮಗುವನ್ನು ಒಪ್ಪಿಸಿ, ಈ ಅವಧಿಯಲ್ಲಿ ಸೃಷ್ಟಿ ಜೆ.ವಿ.ಎಕ್ಸ್ ಸಂತಾನ ಕೇಂದ್ರದಲ್ಲಿ ಕಲಿತ ಕ್ಯಾಂಡಲ್ ತಯಾರಿಸುವುದನ್ನು ಇಂದು ತನ್ನ ಮನೆಯಲ್ಲೆ ನಡೆಸಿಕೊಂಡು ಹೋಗುತ್ತಿದ್ದಾಳೆ. ಈ ವಿಷಯವಾಗಿ ಆಕೆಯ ಬಗ್ಗೆ ಅಕ್ಕ-ಪಕ್ಕದ ಜನ ಏನು ಮಾತಾಡುತ್ತಾರೆಂಬ ಬಗ್ಗೆ ನಿಮಗೆ ಭಯವಿಲ್ಲವೆ? ಎಂದು ಕೇಳಿದರೆ, ಎಲ್ಲಾ ಇದ್ದ ನನ್ನವರೆ ನನ್ನ ಕಷ್ಟಕ್ಕೆ ಆಗಲಿಲ್ಲ. ಹೀಗಿರುವಾಗ ಅಕ್ಕ-ಪಕ್ಕದ ಜನಕೆಕ್ಕೆ ತಲೆಕೆಡಿಸಿಕೊಳ್ಳಬೇಕು ಎಂದು ನೇರವಾಗೆ ನುಡಿಯುತ್ತಾಳೆ. ಅಲ್ಲದೆ, ಈ ಪುಣ್ಯದ ಕೆಲಸಕ್ಕೆ ನನ್ನ ಗಂಡನ ಅನುಮತಿಯನೂ ಪಡೆದುಕೊಂಡಿದೆನೆ ಎನ್ನುತ್ತಾಳೆ, ನನ್ನ ಮಗಳ ಅಪರೇಷನ್‌ಗೆಂದು ಆರು ಲಕ್ಷ ನೀಡಿದ ಮಕ್ಕಳಿಲ್ಲದ ಆ ದಂಪತಿಗಳಿಗೆ, ನನ್ನ ಗರ್ಭದಲ್ಲಿ ಒಂದು ಮಗು ಎತ್ತಿಕೊಡುವುದರಲಿ ತಪ್ಪೆನಿದೆ? ಎನ್ನುತ್ತಾಳೆ ಇಷ್ಟಕ್ಕೂ ನಾನೇನು ತಪ್ಪು ದಾರಿಯಲ್ಲಿ ಹೋಗಿಲ್ಲ, ಇದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡು ಇದರಿಂದ ಯಾವ ತೊಂದರೆಯೂ ಇಲ್ಲವೆಂದು ತಿಳಿದ ನಂತರವೇ ಈ ಕೆಲಸ ನಿರ್ವಹಿಸಿದ್ದೇನೆ ಎನ್ನುತ್ತಾಳೆ. ತಮ್ಮ ಹೆಂಡತಿ ಬೆರೆಯವರ ಮಗುವನ್ನು ತನ್ನ ಗರ್ಭದಲ್ಲಿ ಬೆಳೆಸಿದರ ಬಗ್ಗೆ ಆನಂದನಲ್ಲಿ ವಿಚಾರಿಸಿದರೆ, ಯಾರು ಮಾಡದಂತಹ ಕಾರ್ಯವನ್ನು ನನ್ನ ಹೆಂಡತಿ ಮಾಡಿದ್ದಾಳೆ, ಮಗುವಿಗೆ ಹಂಬಲಿಸಿ, ಕೊರಗುತ್ತಿದ್ದ ಆ ದಂಪತಿಗೆ ಮಗು ಎತ್ತಿಕೊಡುವುದರ ಮೂಲಕ ಆ ದಂಪತಿಯ ಮುಗದಲ್ಲಿ ನಗು ಮೂಡಿಸಿದ್ದಾಳೆಂದು ಹೆಮ್ಮೆಯಿಂದಲ್ಲೆ ನುಡಿಯುತ್ತಾರೆ. -ದಿನೇಶ್ ಆಯಿತನಹಳ್ಳಿ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ... ಸಾಧ್ಯವಾದರೆ ಕಾಮೆಂಟ್ (ಪೋನ್. ೯೮೮೦೪೭೪೬೭೬) ಎಸ್.ಎಂ.ಎಸ್ ಮಾಡಿ. ಈ ಲೇಖನದ ಪ್ರಾಯೋಜಕರು : Systems Technology : ಸಿಸ್ಟಮ್ ಟೇಕ್ನಾಲಜಿ : ಮಂಡ್ಯ-ಮೈಸೂರು-ಹಾಸನ : 7259108417: Today Offer : Intel Processor2.6 Ghz, Ram 1GB, 160GB Hard Disk, DVD R/W, Mouse, TFT Monitor 15 Inch.. Offer Price : ಕೇವಲ 9999/- Only. Home Delivery (High Configuration ಕಂಪ್ಯೂಟರ್ ಗಳನ್ನು Assemble ಮಾಡಿಕೊಡಲಾಗುವುದು. ಎಲ್ಲಾ ಕಂಪ್ಯೂಟರ್ ಬಿಡಿಭಾಗಗಳ ಮೇಲೆ ಕಂಪನಿ ಆಧಾರದ ಮೇಲೆ 2 ವರ್ಷ ಅಥವಾ 3 ವರ್ಷ ಗ್ಯಾರಂಟಿ ಕೊಡಲಾಗುವುದು)
Posted on: Thu, 05 Sep 2013 04:22:15 +0000

Trending Topics



Recently Viewed Topics




© 2015