ಮಕ್ಕಳು ಉತ್ತಮ ಪರಿಸರದಲ್ಲಿ - TopicsExpress



          

ಮಕ್ಕಳು ಉತ್ತಮ ಪರಿಸರದಲ್ಲಿ ಬೆಳೆಯಬೇಕು. ಮನೆಯಲ್ಲಿನ ಉತ್ತಮ ವಾತಾವರಣದಿಂದ ಯೋಗ್ಯವಂತರಾಗುತ್ತಾರೆ ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆಂಗ್ಲ ಭಾಷೆ ಉಪನ್ಯಾಸಕ ಕೆ.ಎಂ.ಶಿವಣ್ಣ ತಿಳಿಸಿದರು. ಪಟ್ಟಣದ ತಾಲೂಕು ಕಾನೂನು ಸೇವಾ ಸಮಿತಿ ವಕೀಲರ ಸಂಘ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ‘ಮಾದಕ ವಸ್ತುಗಳಿಂದ ಆಗುವ ದುಷರಿಣಾಮಗಳು’ ವಿಷಯದ ಕುರಿತು ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು. ಮನೆಯಲ್ಲಿ ಗಂಡ ಹೆಂಡತಿಯರ ಜಗಳದಲ್ಲಿ ಮಕ್ಕಳು ಖಿನ್ನರಾಗುತ್ತಾರೆ. ಆದ್ದರಿಂದ ಎಳೆಯ ವಯಸ್ಸಿನಲ್ಲಿ ಅವರ ಮನಸ್ಸಿನ ಮೇಲೆ ಆಘಾತವಾಗದಂತೆ ನಡೆದು ಕೊಳ್ಳಬೇಕು. ಮಕ್ಕಳು ಎಷ್ಟು ಜನ ಸ್ನೇಹಿತರೊಂದಿಗೆ ಇರುತ್ತಾರೆ ಎಂಬುದಕ್ಕಿಂತ ಎಷ್ಟು ಜನ ಒಳ್ಳೆಯ ಸೇಹಿತರನ್ನು ಸಂಪಾದಿಸುತ್ತಾರೆ ಎಂಬುದು ಮುಖ್ಯ ಎಂದು ತಿಳಿಸಿದರು. ಹಿರಿಯ ವಕೀಲ ಶ್ರೀನಿವಾಸ್ ಮಾತನಾಡಿ, ಮಾದಕ ವ್ಯಸನಿಗಳಿಗಿಂತ ಅದನ್ನು ಪ್ರೇರೇಪಿಸುವುದು ಬಹಳ ಅಪಾಯಕಾರಿ ಎಂದರು. ಹಿರಿಯ ಸಿವಿಲ್ ನ್ಯಾಯಾಧಿಶ ಎಸ್.ಟಿ. ದೇವರಾಜ, ಪ್ರಧಾನ ಸಿವಿಲ್ ನ್ಯಾಯಾಧಿಶಕೆ.ಮಹದೇವ್, ಅಧಿಕ ಸಿವಿಲ್ ನ್ಯಾಯಾಧಿಶ ವೆಂಕಣ್ಣ ಬಿ.ಹೊಸಮನಿ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಶಿವರಾಮೇಗೌಡ, ವಕೀಲರ ಸಂಘದ ಅಧ್ಯಕ್ಷ ವೈ.ಕೆ.ಪುಟ್ಟಸ್ವಾಮಿಗೌಡ, ಕಾರ್ಯದರ್ಶಿ ಎಂ.ಆರ್.ನಿಂಗರಾಜು ಉಪಸ್ಥಿತರಿದ್ದರು. --- ಎರಡು ಕೆಎಸ್ಸಾರ್ಟಿಸಿ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬಸ್ಸೊಂದುಮನೆಯೊಂದರ ಒಳಗೆ ನುಗ್ಗಿದ ಘಟನೆ ತಾಲೂಕಿನ ಚಕುಂದೂರು ಗ್ರಾಮದ ಬಳಿ ನಡೆದಿದೆ. ಆ.೨೮ ರಂದು ಕುಂದೂರು-ಕರಡೇವು ರಸ್ತೆ ಬಳಿ ಹಾಸನದಿಂದ ಕೋಲಾರಕ್ಕೆ ಹೋಗುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಹಾಗೂ ಚನ್ನರಾಯಪಟ್ಟಣದಿಂದ ಹಾಸನಕ್ಕೆ ಹೋಗುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ನಡುವೆ ಡಿಕ್ಕಿ ಸಂಭವಿಸಿ ನಾಲ್ಕು ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಅವರೆಲ್ಲರೂ ಹಾಸನದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕೊಂಡರು. ಈ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ************** ಈ ದಿನದ ಪ್ರಾಯೋಜಕರು: Systems Technology : ಸಿಸ್ಟಮ್ ಟೇಕ್ನಾಲಜಿ : ಮಂಡ್ಯ-ಮೈಸೂರು-ಹಾಸನ : 7259108417: Today Offer : Intel Processor2.6 Ghz, Ram 1GB, 160GB Hard Disk, DVD R/W, Mouse, TFT Monitor 15 Inch.. Offer Price : ಕೇವಲ 9999/- Only. Home Delivery (High Configuration ಕಂಪ್ಯೂಟರ್ ಗಳನ್ನು Assemble ಮಾಡಿಕೊಡಲಾಗುವುದು. ಎಲ್ಲಾ ಕಂಪ್ಯೂಟರ್ ಬಿಡಿಭಾಗಗಳ ಮೇಲೆ ಕಂಪನಿ ಆಧಾರದ ಮೇಲೆ 2 ವರ್ಷ ಅಥವಾ 3 ವರ್ಷ ಗ್ಯಾರಂಟಿ ಕೊಡಲಾಗುವುದು)
Posted on: Fri, 30 Aug 2013 01:38:11 +0000

Trending Topics



Recently Viewed Topics




© 2015