ಶುಭಂ ಕರೋತಿ ಕಲ್ಯಾಣಂ - TopicsExpress



          

ಶುಭಂ ಕರೋತಿ ಕಲ್ಯಾಣಂ ಆರೋಗ್ಯ ಧನ ಸಂಪದಂ। ಶತ್ರು ಬುದ್ಧಿ ವಿನಾಶಾಯ ದೀಪಜ್ಯೋತಿರ್ನಮೋsಸ್ತುತೆ ।। ದೀಪಜ್ಯೋತಿಃ ಪರಬ್ರಹ್ಮ ದೀಪಜ್ಯೋತಿರ್ಜನರ್ಧನಃ । ದೀಪೋ ಹರತಿ ಪಾಪಾನಿ ಸಂಧ್ಯಾದೀಪ ನಮೋಸ್ತುತೇ ॥ https://youtube/watch?v=cIRU1jYcErk&feature=youtu.be Deepavali symbolizes love, happiness, equality, richness, prosperity, togetherness in our society. Vidyashankar Harapanahalli explains why we celebrate the festival of lights in Karnataka, India. He also narrates mythological story behind this festival. Happy Deepavali. ಸಮೃದ್ಧಿ ಸಂಪ್ರೀತಿ ಸಮಾನತೆಯ ದೀಪಾವಳಿ ಹಬ್ಬಗಳು ನಮ್ಮ ಪೂರ್ವಿಕರ ಸುಂದರ ಕಲ್ಪನೆಗಳು. ನೀರಸ ಬದುಕನ್ನು ಸುಂದರಗೊಳಿಸುವ ಪ್ರಯತ್ನಗಳು ಈ ಹಬ್ಬಗಳು. ಒಮ್ಮೊಮ್ಮೆ ಹಬ್ಬಗಳು ನಮ್ಮ ಹಿರಿಯರ ಆವಿಷ್ಕಾರಗಳು ಎಂದೆನಿಸಿದ್ದಿದೆ. ಈ ಆವಿಷ್ಕಾರದ ಹಿಂದೆ ಪುರಾಣ, ಇತಿಹಾಸ, ಸುಂದರ ಕಲ್ಪನೆಗಳು, ಉದಾತ್ತ ಆಶಯಗಳು ಬೆರೆತಿವೆ. ನಮ್ಮ ಹಿರಿಯರು ಕೆಲವು ಹಬ್ಬಗಳನ್ನು ಋತುಮಾನಕ್ಕೆ ಅನುಗುಣವಾಗಿ ರೂಪಿಸಿದ್ದಾರೆ. ಉದಾಹರಣೆಗೆ, ಸೂರ್ಯ ಮಕರ ರಾಶಿಯನ್ನು ಪ್ರವೇಶಿಸುವ ದಿನವನ್ನು ಸಂಕ್ರಾಂತಿಯಾಗಿ, ಸೂರ್ಯ ತನ್ನ ಪಥ ಬದಲಿಸುವ ದಿನವನ್ನು ರಥಸಪ್ತಮಿಯಾಗಿ, ಪ್ರಕೃತಿಯ ಉಲ್ಲಾಸಮಯ ದಿನಗಳ ಆರಂಭವನ್ನು ವಸಂತ ಋತುವಿನ ಆಗಮನವನ್ನು ಯುಗಾದಿಯಾಗಿ, ವಸಂತ ಪಂಚಮಿಯಾಗಿ... ಹೀಗೆ ನಮ್ಮ ಬದುಕನ್ನು ಆಸಕ್ತಿಕರವಾಗಿಸಲು ಹತ್ತು ಹಲವು ಹಬ್ಬಗಳನ್ನು ರೂಪಿಸಿದ್ದಾರೆ. ಇಷ್ಟೊಂದು ಒಳ್ಳೆಯ ಆಶಯ, ಸಂಭ್ರಮ ತುಂಬಿಕೊಂಡ ಹಬ್ಬಗಳು ಇತ್ತೀಚಿಗೆ ತಮ್ಮ ಮಹತ್ವವನ್ನು ಕಳೆದುಕೊಳ್ಳುತ್ತಿರುವುದು ನಿಜವಾಗಲು ವಿಷಾದಕರ. ಈ ಜಾಗತೀಕರಣಗೊಂಡ ದುಡ್ಡಿನ ಜಗತ್ತಿನಲ್ಲಿ ಹಬ್ಬಗಳೆಂದರೆ ಡಿಸ್ಕೌಂಟ್ ಸೇಲ್, ಶಾಪಿಂಗ್ ಸಮಯ, ಟಿವಿಯಲ್ಲಿ ವಿಶೇಷ ಕಾರ್ಯಕ್ರಮ, ಪ್ರವಾಸಕ್ಕೆ ಸಮಯ, ಕೇವಲ ರಜೆ ಎಂದಾಗಿ ಹೋಗಿದೆ. ಇದು ನಿಜವಾಗಲು ದುಃಖದ ವಿಷಯ. ನಮ್ಮ ಸುಂದರ ಸಂಸ್ಕೃತಿ ಯ ಆಶಯಗಳು ನಿಧಾನವಾಗಿ ನೇಪಥ್ಯಕ್ಕೆ ಸರಿಯುತ್ತಿದೆಯಾ? ಎಂದು ಆಲೋಚಿಸಬೇಕಾಗಿದೆ. ನಾವು ಹಬ್ಬಗಳನ್ನು ಏಕೆ ಆಚರಿಸಬೇಕು? ಮೊನ್ನೆ ಪ್ರಗತಿಪರ ಸ್ನೇಹಿತರ ಮನೆಗೆ ಹೋಗಿದ್ದೆ, ಅವರೆಂದರು ನಾವು ದೇವರನ್ನು ನಂಬುವುದಿಲ್ಲ ಹಾಗಾಗಿ ನಾವು ಯಾವುದೇ ಹಬ್ಬಗಳನ್ನ ಆಚರಿಸುವುದಿಲ್ಲ.... ಅಯ್ಯೋ ಎಷ್ಟೊಂದು ಒಳ್ಳೆಯ ಆಶಯಗಳನ್ನು ಧ್ಯಾನಿಸುವ ಅವಕಾಶವನ್ನು, ಬದುಕಿನ ಸಂಭ್ರಮವನ್ನು ಕಳೆದುಕೊಳ್ಳುತ್ತಿದ್ದಾರಲ್ಲ ಎಂದು ವ್ಯಥೆಯಾಯಿತು. ಹಬ್ಬಗಳು ಬರಿ ಸಿಹಿ ಊಟ ಮಾಡುವ, ಹೊಸ ಬಟ್ಟೆ ತೊಡುವ ಸಂಭ್ರಮಕ್ಕೆ ಮಾತ್ರ ಸೀಮಿತವಲ್ಲ. ಅದನ್ನೂ ಮೀರಿದ ಉದಾತ್ತ ಉದ್ದೇಶ ಹಬ್ಬಗಳಿಗಿದೆ. ಇದನ್ನೆಲ್ಲಾ ಯೋಚಿಸುತ್ತಾ ಪ್ರಗತಿಪರ ಸ್ನೇಹಿತರಿಗೆ ಹೇಳಿದೆ ನೀವು ಢಂಬಾಚಾರ, ಆಡಂಬರವನ್ನು ನಿರಾಕರಿಸಿ... ಆದರೆ ಹಬ್ಬದ ಆಚರಣೆಯನ್ನು ನಿಲ್ಲಿಸಬೇಡಿ... ಹಬ್ಬವನ್ನು ನಿರಾಕರಿಸಿದರೆ ಅದರ ಹಿಂದಿನ ಸುಂದರ ಆಶಯ, ಉದಾತ್ತ ಉದ್ದೇಶ ನಿರಾಕರಿಸಿದಂತೆ. ಬಹುಶಃ ಅವರು ಮುಂದಿನ ಹಬ್ಬದಿಂದ ನಮ್ಮ ನಿಲುವನ್ನು ಬದಲಿಸಿಕೊಳ್ಳುವರು ಎಂದು ಆಶಿಸುತ್ತೇನೆ. ಹೊಸ ಬೆಳವಣಿಗೆ ಇನ್ನೊಂದು ಸಂತೋಷದ ವಿಷಯವೆಂದರೆ, ಜಾತಿ, ಧರ್ಮಗಳ ಕಟ್ಟಳೆ ಮೀರಿ ಜನರು ಹಬ್ಬಗಳನ್ನು ಆಚರಿಸುತ್ತಿರುವುದು. ಜಾಗತೀಕರಣ ಜಗತ್ತಿನ ಒಂದು ಒಳ್ಳೆ ಕಾಣಿಕೆ ಇದು. ಉತ್ತಮ ಬೆಳವಣಿಗೆ. ಬೆಂಗಳೂರಿನ ಅನೇಕ ಅಪಾರ್ಟಮೆಂಟುಗಳಲ್ಲಿ ಎಲ್ಲಾ ಕುಟುಂಬಗಳು ಒಟ್ಟಾಗಿ, ಯಾವುದೆ ಭೇದವಿಲ್ಲದೆ ಹಬ್ಬಗಳ ಆಚರಣೆ ಮಾಡುತ್ತಿದ್ದಾರೆ. ಒಂದು ಸಮುದಾಯ ಅರಿತು ಬೆರೆತು ಹಬ್ಬಗಳ ಆಚರಣೆ ಮಾಡಿದರೆ ಅದರ ಸೊಗಸೇ ಬೇರೆ. ಬೆಳದಿಂಗಳು ಚೆಲ್ಲುವ ಕೌಮುದಿ ಉತ್ಸವವಿದು ಅಸತೋಮ ಸದ್ಗಮಯ, ತಮಸೋಮಾ ಜ್ಯೋತಿರ್ಗಮಯ, ಮೃತ್ಯೋರ್ಮಾ ಅಮೃತಂಗಮಯ... ಓಂ ಶಾಂತಿ, ಶಾಂತಿ ಶಾಂತಿಃ ಅಜ್ಞಾನವೆಂಬ ಕತ್ತಲನ್ನು ಕಳೆದು ಬದುಕಲ್ಲಿ ಸುಜ್ಞಾನವೆಂಬ ಜ್ಯೋತಿಯನ್ನು ಬೆಳಗಿಸುವ ಹಬ್ಬ ದೀಪಾವಳಿ. ದೀಪಾವಳಿ ಎಂದರೆ ಬೆಳಕಿನ ಹಬ್ಬ. ನಿಮಗೆ ಗೊತ್ತಿರಲಿ, ಸರಿಯಾಗಿ ಆಚರಿಸಿದರೆ ದೀಪಾವಳಿ ಆರು ದಿನದ ಹಬ್ಬ! ಅನೇಕ ಪುರಾಣ, ನಂಬಿಕೆ, ಸುಂದರ ಆಶಯ ಬೆರೆತಿರುವ ಹಬ್ಬಗಳ ಸರಪಳಿ, ಹಬ್ಬಾವಳಿ! ಅಮಾವಾಸ್ಯೆ ಕತ್ತಲಿದ್ದರು ದೀಪಗಳು ಚೆಲ್ಲುವ ಬೆಳಕಿಗೋ, ಪಟಾಕಿಗಳಿಂದ ಹೊಮ್ಮುವ ಬೆಳಕಿಗೋ ಏನೋ, ದೀಪಾವಳಿಗೆ ಕೌಮುದಿ ಉತ್ಸವ ಎಂದೂ ಕರೆಯುವುದುಂಟು. ಕೌಮುದಿ ಎಂದರೆ ಬೆಳದಿಂಗಳು ಎಂದರ್ಥ. ಉತ್ತರ ಭಾರತದಲ್ಲಿ ಗೋವತ್ಸ ದ್ವಾದಶಿಯಿಂದಲೇ ಹಬ್ಬದ ಸಡಗರ ಆರಂಭ. ಬರಗಾಲ ಕಳೆದು ಇಳೆಗೆ ಸಮೃದ್ಧಿ ಮರಳಿದ ದಿನವಾಗಿ ಹಬ್ಬವನ್ನಾಚರಿಸುತ್ತಾರೆ. ಗೋವಿನ ರೂಪದ ಭೂದೇವಿಯನ್ನು ಓಡಿಸಿಕೊಂಡು ಹೋಗಿ, ಪೂಜಿಸಿ, ಹಾಲು ಕರೆದು ಬರಗಾಲ ನೀಗಿಸಿದ ದೊರೆ ಪೃಥುವಿನ ಕತೆಯ ಹಿನ್ನಲೆಯಿದೆ. ಅವನಿಂದಲೇ ಭೂಮಿಗೆ ಪೃಥ್ವಿ ಎಂಬ ಹೆಸರು ಬಂದಿದ್ದು. ಧನ್ ತೇರಾಸ್ (ಕೃಷ್ಣಪಕ್ಷದ ತ್ರಯೋದಶಿ) ಈ ದಿನ ಬಂಗಾರ ಮತ್ತು ಮನೆಗೆ ಬೇಕಾಗುವ ಪಾತ್ರೆಗಳ ಖರೀದಿಗೆ ಶುಭದಿನ ಎಂದು ಭಾವಿಸಲಾಗಿದೆ. ಇದೇ ದಿನ ವೈದ್ಯ ಧನ್ವಂತ್ರಿ ಸಮುದ್ರ ಮಥನದಲ್ಲಿ ಜನಿಸಿದ್ದು ಎಂದು ಪುರಾಣಗಳು ಹೇಳುತ್ತವೆ. ನರಕ ಚತುರ್ದಶಿಯ ಬೆಳಗಿನ ಜಾವದ ಅಭ್ಯಂಜನ ಸ್ನಾನಕ್ಕೆ ಹಿಂದಿನ ದಿನವೆ ನೀರು ಕಾಯಿಸುವ ಹಂಡೆ, ಪಾತ್ರೆಗಳಿಗೆ ಪೂಜಿಸಿ, ಅಲಂಕರಿಸಿ ನೀರನ್ನು ತುಂಬಿಸಿದುವುದರಿಂದ ಈ ದಿನಕ್ಕೆ ನೀರು ತುಂಬಿಸುವ ಹಬ್ಬ ಎಂದು ಕೂಡ ಕರೆಯುತ್ತಾರೆ. ನರಕ ಚತುರ್ದಶಿ ಎಲ್ಲೆಡೆ ಆಚರಿಸಲಾಗುತ್ತದೆ. ಶ್ರೀ ಕೃಷ್ಣ, ಸತ್ಯಭಾಮೆಯ ಒಡಗೂಡಿ ನರಕಾಸುರನ ವಧಿಸಿ, ಹದಿನಾರು ಸಾವಿರ ಸ್ತ್ರೀಯರನ್ನು ಬಂಧನದಿಂದ ಬಿಡುಗಡೆ ಮಾಡಿದ ದಿನ. ಅಷ್ಟೇ ಅಲ್ಲ ಅವರೆಲ್ಲರನ್ನು ತನ್ನ ಪತ್ನಿಯರನ್ನಾಗಿ ಸ್ವೀಕರಿಸಿ, ಅವರಿಗೆಲ್ಲಾ ಒಂದು ಸಾಮಾಜಿಕ ಸ್ಥಾನಮಾನ ಕೊಟ್ಟು ರಕ್ಷಣೆ ಮಾಡಿದ ದಿನ. ನಂತರ ಅಮವಾಸೆ. ಅಮವಾಸೆಯ ದಿನ ಲಕ್ಷ್ಮಿಯನ್ನು ಪೂಜಿಸುವ ದಿನ. ಕೆಲವೆಡೆ ಸಂಪತ್ತಿನ ಅಧಿ ದೇವತೆ ಲಕ್ಷ್ಮಿಯ ಜೊತೆ ಗಣೇಶನನ್ನೂ ಪೂಜಿಸುವ ಪದ್ಧತಿಯು ಇದೆ. ವಿಕ್ರಮ ಶಕೆಯ ಪಂಚಾಂಗ ಪಾಲಿಸುವವರಿಗೆ ವರ್ಷದ ಕೊನೆಯ ದಿನ. 24ನೇ ತೀರ್ಥಂಕರನಾದ ಮಹಾವೀರನು ನಿರ್ವಾಣಹೊಂದಿದ ದಿನವಾದ ದೀಪಾವಳಿ ಅಮಾವಾಸ್ಯೆಯನ್ನು, ರಾಜಸ್ಥಾನದ ಜೈನ ಸಮುದಾಯದವರು ಹೊಸವರ್ಷವೆಂತಲೂ ಆಚರಿಸುತ್ತಾರೆ. [ಬೆಂಗಳೂರಲ್ಲಿ ಸೈಟ್ ತಗೊಂಡೇ ಬರ್ತೀನಿ] ಬಲಿ ಪಾಡ್ಯ ಅಥವಾ ಬಲಿ ಪ್ರತಿಪದ ದೀಪಾವಳಿ ಹಬ್ಬದ ಅತ್ಯಂತ ಪ್ರಮುಖ ದಿನ. ವಾಮನರೂಪಿ ವಿಷ್ಣು ಬಲಿ ಚಕ್ರವರ್ತಿಯನ್ನು ಮೂರು ಹೆಜ್ಜೆ ದಾನ ಕೇಳಿ, ಭೂಮಿ, ಆಕಾಶ ಆವರಿಸಿ ಕೊನೆಗೆ ಬಲಿಯ ತಲೆ ಮೇಲೆ ಪಾದವಿಟ್ಟು ದಾನ ಪಡೆದು ಬಲಿಯನ್ನು ಪಾತಾಳಕ್ಕೆ ಕಳುಹಿಸಿದ ದಿನ. ಶ್ರೀ ಕೃಷ್ಣ ಗೋವರ್ಧನ ಗಿರಿಯನ್ನು ಎತ್ತಿ ಹಿಡಿದು ಅಹಂಕಾರಿ ಇಂದ್ರನಿಗೆ ಪಾಠ ಕಲಿಸಿದ ದಿನ ಕೂಡ ಹೌದು. ರಾವಣನ ಸಂಹರಿಸಿ, ಸೀತ, ಲಕ್ಷ್ಮಣರೊಡನೆ ಆಯೋಧ್ಯೆಗೆ ಶ್ರೀರಾಮಚಂದ್ರ ಮರಳಿದ್ದು ದೀಪಾವಳಿ ಸಮಯದಲ್ಲೇ. ವಿಕ್ರಮ ಶಕೆಯ ಪಂಚಾಂಗ ಪಾಲಿಸುವವರಿಗೆ ಪಾಡ್ಯದ ದಿನ. ಹೊಸ ವರುಷದ ಸಂಭ್ರಮದ ಮೊದಲ ದಿನ. ಬಲಿ ಪಾಡ್ಯದ ಮರುದಿನ ಯಮ ದ್ವಿತೀಯ (ಭಾಯಿಧುಜ್) ಎಂದು ಉತ್ತರ ಭಾರತದ ಕಡೆ ಆಚರಿಸುತ್ತಾರೆ. ಈ ಆಚರಣೆ ದಕ್ಷಿಣ ಭಾರತದಲ್ಲಿ ಅಷ್ಟಿಲ್ಲ. ಯಮ ತನ್ನ ತಂಗಿ ಯಮಿಯ ಮನೆಗೆ ಬೇಟಿ ನೀಡಿ ಅವಳ ಆತಿಥ್ಯ ಸ್ವೀಕರಿಸಿದ ದಿನ. ಬಹಳ ಸಂತುಷ್ಟನಾದ ಯಮ, ಯಮಿಗೆ ಕಾಣಿಕೆ ನೀಡಿದ. ಈ ದಿನವನ್ನು ಉತ್ತರ ಭಾರತದಲ್ಲಿ ಅಣ್ಣ-ತಂಗಿಯ ಪ್ರೀತಿ ವಾತ್ಸಲ್ಯದ ದಿನವಾಗಿ ಆಚರಿಸುತ್ತಾರೆ. ದೀಪಾವಳಿಗೆ ಹೊಸದಾಗಿ ಮದುವೆಯಾದೆ ಮಗಳು-ಅಳಿಯನನ್ನು ಸತ್ಕರಿಸಿ ಉಡುಗರೆ ಕೊಡುವದಂತು ಬಹಳ ಪ್ರಸಿದ್ಧಿ. ಹಾಗಾಗಿ ಎಲ್ಲಾ ಹೊಸ ಅಳಿಯಂದಿರು ಈ ಹಬ್ಬಕ್ಕೆ ಸಂಕೋಚದಿಂದ ಎದಿರು ನೋಡುತ್ತಿರುತ್ತಾರೆ. ಹಾಗೆಯೇ ಭಾವ ತರುವ ಪಟಾಕಿ ಮತ್ತಿತರ ಉಡುಗರೆಗೆ ಮೈದುನ, ನಾದಿನಿಯರು ಕಾದಿರುತ್ತಾರೆ. ಪಟಾಕಿ ಢಮ್! ಢಮ್! ದೀಪಾವಳಿ ಬೆಳಕಿನ ಹಬ್ಬ. ಮಕ್ಕಳಿಗೆ ಪಟಾಕಿ ಹೊಡೆಯುವ ಸಂಭ್ರಮದ ಸಮಯ. ನರಕ ಚತುರ್ದಶಿಯ ಮುಂಜಾವಿನಿಂದ ಪ್ರಾರಂಭವಾಗುವ ಪಟಾಕಿ ಸಂಭ್ರಮದ ಸದ್ಧು ತುಳಸಿ ಹಬ್ಬದ ತನಕ ಮುಂದುವರೆಯುತ್ತದೆ. ಪಟಾಕಿ ಸದ್ದಿಲ್ಲದ, ಬೆಳಕಿಲ್ಲದ ದೀಪಾವಳಿಯನ್ನು ಊಹಿಸುವುದೂ ಅಸಾಧ್ಯ. ದೀಪಾವಳಿಯ ಮರುದಿನ ಅನೇಕ ಮಕ್ಕಳು ಗಾಯ, ಕಣ್ಣಿಗೆ ಹಾನಿ, ಅನಾಹುತ ಮಾಡಿಕೊಂಡಿರುವ ಸುದ್ದಿಯನ್ನು ಪತ್ರಿಕೆಯಲ್ಲಿ ಓದುತ್ತೇವೆ. ಹಾಗಾಗಿ ಈ ಸೂಚನೆ ಸಲಹೆಗಳು : [ಮಾಲಿನ್ಯ ರಹಿತ ದೀಪಾವಳಿಗೆ ಐದು ಸಲಹೆ] * ಮಕ್ಕಳೆಲ್ಲರು ಪಟಾಕಿಯನ್ನು ಹಿರಿಯರ ಸಮ್ಮುಖದಲ್ಲಿಯೆ ಹೊಡೆಯಬೇಕು. * ಮನೆಯ ಹಿರಿಯರು, ತಂದೆ-ತಾಯಂದಿರು ದಯವಿಟ್ಟು ಕಾಳಜಿ ವಹಿಸಬೇಕು. ಹಾಗೆಯೆ ಪಟಾಕಿ ಹಾವಳಿಯಿಂದ ಉಂಟಾಗುವ ಶಬ್ಧಮಾಲಿನ್ಯ ಮತ್ತು ವಾಯುಮಾಲಿನ್ಯದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಬೇಕು. * ಆದಷ್ಟು ವಿಶಾಲವಾದ ಜಾಗಗಳಲ್ಲಿ ಪಟಾಕಿ ಹೊಡೆಯಿರಿ. ರಸ್ತೆ, ಓಣಿಗಳಲ್ಲಿ ಬೇಡ. * ಬೈಕು, ಸೈಕಲ್ ಸವಾರರು, ಪಾದಚಾರಿಗಳು ದೀಪವಳಿಯ ದಿನಗಳಲ್ಲಿ ಕೊಂಚ ಎಚ್ಚರಿಕೆಯಿಂದ ಸಂಚರಿಸಿ. * ರಾತ್ರಿ ಹತ್ತರ ನಂತರ ಪಟಾಕಿ ಹೊಡೆಯುವುದು ದಯವಿಟ್ಟು ಬೇಡ. ನೆರೆಹೊರೆಯವರ ನಿದ್ದೆಗೆ ತೊಂದರೆಯಾಗಬಹುದು. ದೀಪಾವಳಿಯ ಬೆಳಕು ಮತ್ತು ಹಬ್ಬದ ಆಶಯ ಶುಭಂ ಕರೋತಿ ಕಲ್ಯಾಣಂ ಆರೋಗ್ಯ ಧನ ಸಂಪದಂ। ಶತ್ರು ಬುದ್ಧಿ ವಿನಾಶಾಯ ದೀಪಜ್ಯೋತಿರ್ನಮೋsಸ್ತುತೆ ।। ದೀಪಜ್ಯೋತಿಃ ಪರಬ್ರಹ್ಮ ದೀಪಜ್ಯೋತಿರ್ಜನರ್ಧನಃ । ದೀಪೋ ಹರತಿ ಪಾಪಾನಿ ಸಂಧ್ಯಾದೀಪ ನಮೋಸ್ತುತೇ ॥ ನಾವು ಹಚ್ಚುವ ದೀಪ ಬೆಳಕಿನಿಂದ ನಮ್ಮೊಳಗಿನ ಅಜ್ಞಾನ, ಅವಿವೇಕ, ದುಷ್ಟ ಗುಣಗಳು ನಾಶವಾಗಿ, ಸದ್ಗುಣಗಳು ಹೆಚ್ಚಲಿ. ಎಲ್ಲಡೆ ಶಾಂತಿ, ಸಮೃದ್ಧಿ ನೆಲಸಲಿ. ಎಲ್ಲರಿಗೂ ಮಂಗಳವಾಗಲಿ, ದೀಪದಲ್ಲಿ ನಮಗೆ ದೇವರ ರೂಪ ಕಾಣಿಸಲಿ ಎಂದು ಆಶಿಸುತ್ತಾ ದೀಪಾವಳಿಯ ದಿನ ದೀಪ ಹಚ್ಚಬೇಕು ಎಂಬರ್ಥದ ಸುಂದರ ಶ್ಲೋಕ. ಬೆಳಕಿನ ಹಬ್ಬ ದೀಪಾವಳಿ. ನಮ್ಮ ಸಂಪ್ರದಾಯದಲ್ಲಿ, ಕಾವ್ಯದಲ್ಲಿ ಬೆಳಕಿಗೆ ಅತ್ಯಂತ ಮಹತ್ವವಿದೆ. ನಾವು ಯಾವುದಾದರು ಶುಭ ಸಮಾರಂಭ ಆಚರಿಸುವುದೆ ದೀಪ ಹಚ್ಚುವುದರ ಮೂಲಕ. ಬೆಳಕು ಜ್ಞಾನದ ರೂಪಕ. ಯಾವುದೆ ಭೇದವಿಲ್ಲದೆ, ಕಟ್ಟಲೆಯಿಲ್ಲದೆ ಹರಡುವ ಬೆಳಕು ಸಮಾನತೆಯ ಸಂಕೇತವೂ ಹೌದು. ಬಣ್ಣ ಬಣ್ಣದ ಸುಂದರ ಚಿತ್ತಾಕರ್ಷಕ ದೀಪಾವಳಿಯ ಆಕಾಶ ಬುಟ್ಟಿಗಳು ಮತ್ತದರ ಬೆಳಕು ನಮ್ಮ ಸಂಭ್ರಮದ, ಸಂತಸದ ಪ್ರತೀಕ. ದೀಪಾವಳಿಯ ದಿನ ಆಕಾಶ ಬುಟ್ಟಿಯನ್ನು ಮಾಡಿ ಅದರಲ್ಲಿ ದೀಪವಿಟ್ಟು ಆಕಾಶದಲ್ಲಿ ಹಾರಿಬಿಟ್ಟರೆ, ಗತಿಸಿದ ಹಿರಿಯರಿಗೆ ಶಾಂತಿ ಸಿಗುತ್ತದೆ ಎಂಬ ನಂಬಿಕೆ ಕೂಡ ಇದೆ. ಕಷ್ಟಗಳೆಂಬ ಕತ್ತಲನ್ನು ದೂಷಿಸುತ್ತಾ ಕೂರಬೇಡ, ಪ್ರಯತ್ನವೆಂಬ ಸಣ್ಣ ದೀಪವ ಹಚ್ಚು ಎನ್ನುತ್ತಾನೆ ಪ್ರಯತ್ನಶೀಲ ಆಶಾವಾದಿ. ಅವಳ ಕಿರು ನಗೆಯ ದೀಪವೊಂದೆ ಸಾಕು ನನ್ನ ದೀಪಾವಳಿಯ ಸಂಭ್ರಮ ಹೆಚ್ಚುಸಲು ಎನ್ನುತ್ತಾನೆ ಪ್ರೇಮಿ. ಹೀಗೆ ದೀಪಾವಳಿಯ ಬೆಳಕು ಎಲ್ಲರಿಗೂ ಬೇರೆ ಬೇರೆ ರೂಪದಲ್ಲಿ ಸಾಕ್ಷಾತ್ಕಾರ. ಈಗ ಎಲ್ಲೆಡೆ ಶತ್ರು ಸಂಹಾರದ ಉನ್ಮಾದ. ಅದರೆ ಅಧುನಿಕ ಜಗತ್ತಿನಲ್ಲಿ ಶತ್ರು ಯಾರು ಎಂಬುದೇ ದೊಡ್ಡ ಪ್ರಶ್ನೆ. ನಮಗೆ ದೀಪಾವಳಿ ಬೆಳಕಲ್ಲಿ ಏನು ಕಾಣಬೇಕು? ಹೊರಗಿನ ಶತ್ರುಗಳು ಬೇಡ, ನಮ್ಮ ಅಂತರಂಗದಲ್ಲಿ ಅಡಗಿರುವ ಕೋಪ, ತಾಪ, ಮತ್ಸರವೆಂಬ ಶತ್ರುಗಳು ದೀಪಾವಳಿಯ ಬೆಳಕಲ್ಲಿ ನಮಗೆ ನಿಚ್ಚಳವಾಗಲಿ. ಮೊದಲು ನಮ್ಮೊಳಗಿನ ಶತ್ರುಗಳ ಗೆಲ್ಲೋಣ, ನಂತರ ಹೊರಗಿನ ವಿಚಾರ ಮಾಡೋಣ. ಹಾಗೆಯೇ ನಮಗೆ ದೀಪಾವಳಿ ಬೆಳಕಲ್ಲಿ ದೀನದಲಿತರ ಕಣ್ಣೀರು, ಸಂಕಷ್ಟ ಮತ್ತು ದುಃಖ ಕಾಣಿಸಲಿ ಮತ್ತು ಅದನ್ನು ಒರೆಸುವ ಕೈ ನಮ್ಮದಾಗಲಿ. ನನ್ನ ದೃಷ್ಟಿಯಲ್ಲಿ ಸಮೃದ್ಧಿ, ಸಂಪ್ರೀತಿ, ಸಮಾನತೆ, ಸೌಜನ್ಯತೆ ದೀಪದ ಬೆಳಕಿನಂತೆ ಎಲ್ಲೆಡೆ ಹರಡಲಿ ಎಂಬುದೆ ದೀಪಾವಳಿ ಹಬ್ಬದ ಪ್ರಮುಖ ಉದ್ದೇಶ. ನಿಮಗೆ, ನಿಮ್ಮ ಕುಟುಂಬದವರಿಗೆ ಮತ್ತು ನಿಮ್ಮ ಸ್ನೇಹಿತರಿಗೆ ಈ ದೀಪಾವಳಿ ಮಂಗಳ ಮಾಡಲಿ ಎಂದು ಹಾರೈಸುತ್ತಾ... ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. Written by: ವಿದ್ಯಾಶಂಕರ ಹರಪನಹಳ್ಳಿ, ಬೆಂಗಳೂರು Source : One India The victory of good over evil is always celebrated. One such religious celebration is “Deepavali”. It is celebrated with utmost piety with a touch of gaiety, throughout India. It is believed that the asuras like Narakasura and Ravana are killed by the incarnations of Vishnu- Krishna and Rama. And Deepavali is a celebration in commemoration of those victories. In other words, they are the victories over evil. In the north of Vindhyas, it is believed that the coronation of Rama, after returning from ‘Vanvas’ ( exile to the forest) for 14 long years, took place on this day and celebrate the day as such. In the South, It is believed that Krishna conquered Narakasura following a ferocious fight and killed him. Hence, the day is celebrated as a victory of Krishna over Narakasura. Either way, it is a victory over evil. Basically it is a festival of lights, as the name itself implies. Light removes darkness and spreads a divine aura of peace, goodness, knowledge and wisdom with a touch of spirituality. It is a day that reminds us about all that is bad, negative in nature, not conducive to a good and truthful living and praying for the blessings to conquer all that and live a life that is good and positive and that leads to Prosperity, Good Health and Respect for all. A life without light can only be a dull one devoid of the challenges existing on a bright and brilliant day. So it is a grace bestowed on us by Lord Almighty for a beautiful and challenging life. So, as a matter of salutations to Him, the day is celebrated as a festival of lights to ingrain the importance of it in our day-to-day lives. Deepavali is celebrated on the krishna paksha chaturdashi day in the month of Ashwin. This festival is also called “Naraka Chathurdashi”. The belief is that, people who celebrate the festival with piety and devotion, will not suffer the travails of life. Deepavali means row of lights.The whole house is cleaned and decorated with lights on the day. Rangolis, with rice powder, are drawn in front of the deity, just outside the pujaroom in the house, tulasi pedestal, front courtyard of the house, as well as on either side of the various doorsteps in the house. Mango leaf garlands are hung on the top of the door of the pujaroom, front door of the house, bathroom door and the tulasi pedestal. A very important part of the festival, especially in the south, is having a bath by all members of the family, after having an oil massage, during the Brahma Muhurta of the day, which falls between 3.30 and 6am. Red flowers and turmeric powder are put in the bathing water. This bath is known as “Gangasnanam”. All the members of the house after taking bath, wear new clothes and jewellery and go to the precincts of the pujaroom for prayers and stand in a single file. The lady of the house prepares five or seven deepams made with rice flour, haldi and kumkum and keep them in a row on a plate with oil and wicks placed in the deepams. A few small balls are also made with the same material. A small quantity of water is poured in the plate, with a bit of kumkum and haldi added to it. The lady of the house does the aarti for all together, 3 times in all. After that, using small balls, one for each member of the family, she makes two rounds, one clockwise and the other anticlockwise for each family member, in order to remove the bad omens. After that, she sprinkles little water from the plate, with her hands, on the feet of all and does the aarati once more, carries the plate outside and throws the contents aside. The belief is that, when Krishna returns after killing Narakasura, people welcome Him with great love and joy and in order to remove bad omens, the mother gives Him an oil bath and do aarati. The neivedhyam, called “Satta Phovu”, is made for the morning puja. It is prepared with parched rice, jaggery, roasted til, bengalgram and greengram dals and coconut. Little sugar and a few neem leaves are also kept as neivedhyam. This is only to signify that every life that is filled with both good and bad, has to be faced with equanimity. After the puja and neivedhyam, people go to the temple for prayers and blessings. Only after this, the other activities of the day are done. The bhojanam(feast) is prepared with varieties of dishes, including payasam(kheer). A special dish named “Kuwlya Ambat”(a spicy sour dish using white pumpkin-Ash Gourd) is prepared on this day and it is a must too. After the feast, some members of the family visit their relatives, friends and neighbours and exchange pleasantries and good wishes. They also offer sweets to them. Starting with the twilight and stretching to the late night, crackers are burst as part of the celebration.It is continued for the next few days. In the evening, rows of lights are lighted inside the puja room as well as outside the house on the front veranda, tulsi pedestal, window sils, either side on the doorsteps(umboru) of all doors, sun shades all around the house. The house with deepams are decorated as explained above for 5 days from thrayodasi(previous day) to the ensuing dwidhiya day. A colourfully decorated lantern is also hung, high above, in the front courtyard of the house.This is done for 3 consecutive days. In temples, the oil abishekam is done to the deity during Brahma muhurtam, using special oil prepared from champa(kevda) and jasmine flowers. The deity is decorated with varieties of flowers and ornaments. After this, special pujas are performed to the main deity, niranjanam (deepam made with rice flour, haldi and kumkum) is lighted, and neivedyam is offered.The temple premises are also decorated well with flower and mango leaf garlands and deepams lighted and kept all around the temple. Plenty of deepas are lighted all around the temple. For the puja, devotees offer oil, flowers, materials for niranjanam, etc and seek the blessings of the Lord. Prasadam is distributed to all devotees. In temples also, the neivedhyam is the phovu made with parched rice, jagerry and coconut. Deepavali is special for the newly weds. The new couple is invited to the brother’s house. The family honour the couple with great celebration. They are presented with new clothes and ornamets as per the capacity. If Deepavali day falls as the last festival of the year after their marriage, they are invited for a second time for the function in the next year. Konkani community used to celebrate Diwali for five days from Thrayodashi to the ensuing Dwithiya and they attached some mythological significance for each day. THRAYODASHI The celebrations start from thrayodashi falling under shuklapaksha in the month of Ashwin and concludes on dwithiya (known as yama dwithiya) in the ensuing krishnapaksham. On all these five days, Oil diyas are lighted in the evenings in and around the puja room, front veranda, around tulsi pedestal, on window sils, on window rain shades, either side of all the door steps, etc, besides the normal deepams inside the puja room and on the tulsi. NARAKA CHATHURDASHI/DIWALI The second day is known as Naraka Chathurdashi and considered as the most important day, known as Deepavali. It is believed that on this day, Lord Krishna on return to his palace after killing Narakasura with he help of Satyabhama, was very tired and his mother gave him an oil bath, worn new clothes, did an aarti with diyas made from rice powder, haldi and kumkum to get rid of the bad omens, arranged a sumptuous feast with varieties of dishes and sweets and for celebrating the victory, arranged lighting of diyas in the evening in and around the house, as also tulsi pedestal in all the houses in the town. This celebration is continued in memory of this day, with a difference, that the oil bath , aarti of all the members of the family by the eldest Sumangali of the house is done during the most auspicious time of the day ie the Brahma Muhurta. The lady of the house also applies oil on the top of the head of all the family members, elder members do oil massage on their own and have their bath and the young kids are helped by their mothers for application of oil for the whole body and also bathing them. Rest of the morning puja activities are the same as explained elsewhere above. The main important dish for the feast on this day is Thakka Ambat/Kuwlya ambat(without adding haldi). Other dishes are Thoy, Thiksani hummaan, Upkeri, Sukkein, Kelya Phadi, Appolu, Adgai(pickles), Dudha Paysu(Milk Kheer with rice) and other sweets made earlier for the occasion. There is also a tradition to prepare 3 or 4 sweets in reasonably larger quantities for consumption of the family members during the period and also for distribution to a few selected relatives, friends and neighbours. The sweets generally prepared for the occasion are Besan Laddu, Halwa, Boondi Laddu, etc. LAXMI PUJAN Ashwin Krishnapaksha Amavasya falls on the next day. It is believed that the celebration on this day is in memory of the release of all Gods from the captivity of Mahabali by Lord Vishnu and all of them proceeding to the Milky Ocean and doing puja of Lord Vishnu, reclining on Anantha, along with Vishnu’s consort, Mahalaxmi. It is said that Mahalaxmi expressed her desire that the day be celebrated by all people by beautifying their houses by lighting lamps in and around the house. This day, Laxmi pujan is done in the evening in all the houses. GO-MATA DAY Next day is Kartik Shuklapaksha Prathama. It is celebrated in memory of the benevolent king Bali and his wife, Vindhyavali, by giving an oil bath to cows and calves being reared in the house and garlanding them with flowers and decorating them with colourful cloth, kumkum, etc, feeding them well and taking them around the neibourhood. AD-DIWALI/YAMA DWITHIYA The dwithiya falling on the next day is called Yama Dwithiya.This is the fifth day of the festival. Yamadwithiya, also known as ‘Ad-Diwali’ in konkani, falls on the shuklapaksha dwithiya day of the kartik month. The belief is that Yama visits Kalindi/Yami, his sister, after a long time and she welcomes her brother with great pomp and show and celebrates the day with utmost joy. Yama visits his sister with his many aides and both the brother and sister partake the feast, prepared by Kalindi, sitting together. He offers plenty of gifts like fine new clothes, ornaments etc to his sister. It is also believed that he pardons all the prisoners under him that day. This is a day for the brothers and sisters to keep up their deep bondage of love and affection. This is a day celebrated in all konkani families with great fervour. Normally, the brother goes to the younger suvasini sister’s house with lots of gifts, such as new clothes, ornaments, sweets, fruits, etc and enjoy the feast prepared by the sister, sitting along with her. These days, a reverse process is also being followed by inviting the younger suvasini sister to the brother’s house and honour her by gifting valuables along with new clothes and arrange a grand feast comprising of special side dishes, sweets and other delicacies and partake the feast together. Important dishes prepared for the feast are Kappya(tapioca) Ambat/Pulchakeri and Phadi Kalleyleli, sweetened parched rice and pappayphala(papaya) ambat. Though the strict regimen is not followed these days due to the prevailing living and working conditions, the festival, even now, is celebrated on a low key with full of fervour and devotion in whatever way that is best possible. Source : konkanifestivals.wordpress/2011/10/21/diwalideepavali/ Video By: Lancyad Dsouza / Kiran E TV #DIWALI https://youtube/watch?v=cIRU1jYcErk&feature=youtu.be
Posted on: Tue, 21 Oct 2014 14:51:24 +0000

Trending Topics



Recently Viewed Topics




© 2015