ಹಾಸನದ ಸಕಲೇಶಪುರದ - TopicsExpress



          

ಹಾಸನದ ಸಕಲೇಶಪುರದ ದೋಣಿಗಾಲ್ನಿಂದ ಆರಂಭವಾಗುವ ಶಿರಾಡಿ ಘಾಟ್ ರಸ್ತೆಯನ್ನ, ದುರಸ್ಥಿಗಾಗಿ ಕಳೆದ ನಾಲ್ಕು ದಿನಗಳ ಹಿಂದೆ ಬಂದ್ ಮಾಡಲಾಗಿದೆ. ಹೀಗಾಗಿ ಶಿರಾಡಿ ಘಾಟ್ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನಗಳು ಪರ್ಯಾಯವಾಗಿ ಚಾರ್ಮಾಡಿ ಘಾಟ್ ರಸ್ತೆ ಮತ್ತು ಬಿಸಿಲೇ ಘಾಟ್ ರಸ್ತೆಗಳಲ್ಲಿ ಸಂಚರಿಸಲು ಆರಂಭಿಸಿದ್ವು. ಆದ್ರೆ ಇದೀಗ ಕಾಮಗಾರಿಗಾಗಿ ಬಿಸಿಲೇ ಘಾಟ್ ರಸ್ತೆಯನ್ನು ಸಹ ಬಂದ್ ಮಾಡಲಾಗಿದೆ. ಹಾಗಾಗಿ ಎಲ್ಲಾ ವಾಹನಗಳು ಚಾರ್ಮಾಡಿ ಘಾಟ್ ಮೂಲಕವೇ ತೆರಳಬೇಕಾಗಿದೆ. ಪ್ರತಿನಿತ್ಯ ಸುಮಾರು 30 ಸಾವಿರಕ್ಕೂ ಹೆಚ್ಚು ವಾಹನಗಳು ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಸಂಚರಿಸುತ್ತಿವೆ. ಪರಿಣಾಮ ಚಾರ್ಮಾಡಿ ಘಾಟಿನಲ್ಲಿ ಸಂಚಾರ ಸಂಕಟ ತಂದೊಡ್ಡಿದೆ. ಏಕಕಾಲಕ್ಕೆ ಶಿರಾಡಿ ಘಾಟ್ ಹಾಗೂ ಬಿಸಿಲೇ ಘಾಟ್ ನಲ್ಲಿ ವಾಹನ ಸಂಚಾರ ನಿಷೇಧ ಮಾಡಿದ್ದರಿಂದ ಸಾವಿರಾರು ಪ್ರಯಾಣಿಕರು ಪರದಾಡುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದಲೂ ಬಿಸಿಲೇ ಘಾಟ್ ರಸ್ತೆಯ ಕಾಮಗಾರಿ ಕುಂಟುತ್ತಾ ಸಾಗಿದ್ರೂ ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ನಿಗಮ ತಲೆಕೆಡಿಸಿಕೊಳ್ಳಲಿಲ್ಲ. ಕಾಮಗಾರಿ ಕೆಲಸವನ್ನು ಬೇಗ ಮುಗಿಸಿಲಿಲ್ಲ. ಇದೀಗ ಬಿಸಿಲೇ ಘಾಟಿನ ಹೆದ್ದಾರಿ ಪೂರ್ಣಗೊಳ್ಳುವ ಮೊದಲೇ, ಶಿರಾಡಿ ಘಾಟ್ ಬಂದ್ ಮಾಡಿದ್ದು ಇಷ್ಟೆಲ್ಲಾ ಯಡವಟ್ಟುಗಳನ್ನ ಸೃಷ್ಟಿಸುತ್ತಿದೆ ಅನ್ನೋದು ಸ್ಥಳೀಯರ ಹಾಗೂ ವಾಹನ ಚಾಲಕರ ಪ್ರಶ್ನೆಯಾಗಿದೆ.
Posted on: Wed, 07 Jan 2015 04:05:54 +0000

Trending Topics



Recently Viewed Topics




© 2015