ಭಾರತೀಯ ವಾಯುಪಡೆ ವೈದ್ಯಕೀಯ - TopicsExpress



          

ಭಾರತೀಯ ವಾಯುಪಡೆ ವೈದ್ಯಕೀಯ ಸಿಬ್ಬಂದಿಯೊಬ್ಬರು ಮೈಸೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 28 ವರ್ಷದ ಪವನ್ ಆತ್ಮಹತ್ಯೆ ಮಾಡಿಕೊಂಡವರಾಗಿದ್ದು, ಮೈಸೂರಿನ ಯರಗನಹಳ್ಳಿಯಲ್ಲಿ ಘಟನೆ ನಡೆದಿದೆ. ಇಂಜೆಕ್ಷನ್ ಮೂಲಕ ವಿಷಪ್ರಾಶನ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಪವನ್, ಬೆಂಗಳೂರಿನಲ್ಲಿ ವಾಯುಪಡೆಗೆ ಸೇರಿದ ಕಮಾಂಡೋ ಆಸ್ಪತ್ರೆಯಲ್ಲಿ ವೈದ್ಯಕೀಯ ಸಹಾಯಕನಾಗಿದ್ದ. ಗೋಡೆಮೇಲೆ ಡೆತ್ ನೋಟ್ ಬರೆದಿಟ್ಟು ಪವನ್ ಸಾವಿಗೆ ಶರಣಾಗಿದ್ದಾರೆ. ಡೆತ್ ನೋಟಲ್ಲಿ ‘ದೇಹದ ಅಂಗಾಗ ದಾನ ಮಾಡಿ’ ಎಂದು ಬರೆದಿಡಲಾಗಿದೆ. ನಜರಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
Posted on: Mon, 08 Dec 2014 07:48:45 +0000

Trending Topics



Recently Viewed Topics




© 2015