ಅಮೇರಿಕದ ಜೊತೆ - TopicsExpress



          

ಅಮೇರಿಕದ ಜೊತೆ ರಾಜತಾಂತ್ರಿಕ ಸಂಬಂಧ ಮರುಸ್ಥಾಪನೆಯ ಸುದ್ದಿ ಹಾಗು ಮೂರು ಕ್ಯೂಬನ್ ಸೆರೆಯಾಳುಗಳ ಬಿಡುಗಡೆ ಯ ಸಂತೋಷದಲ್ಲಿ ಕುಣಿದಾಡುತ್ತಿರುವ ಕ್ಯೂಬನ್ ಜನತೆ. ಎಂತೆಂತಹ ಕಠಿಣ ಪರಿಸ್ಥಿತಿಯನ್ನು ಎದುರಿಸಿ , ಉಪವಾಸ, ವನವಾಸ ಻ನುಭವಿಸಿ ಈ ಜಯವನ್ನು ಪಡೆದ ಕ್ಯೂಬಾದ ಜನತೆಗೆ ಅಭಿನಂದನೆಗಳು. ಇನ್ನೂ ಅಮೇರಿಕ ಹಾಕಿರುವ ಕ್ರೂರ ಆರ್ಥಿಕ ನಿರ್ಬಂಧ ಅಥವಾ ಮುತ್ತಿಗೆಯಿಂದ ಬಿಡುಗಡೆಯಾಗಿಲ್ಲ. ಸುಮಾರು 30 ವರ್ಷಗಳಿಂದ ವಿಶ್ವ ಸಂಸ್ಥೆ ಮೂರು ದೇಶಗಳ ವಿರೋಧ ಬಿಟ್ಟರೆ ನೂರೆಂಬತ್ತು ದೇಶಗಳ ಬಹುಮತದಿಂದ ನಿರ್ಣಯ ಕೈಗೊಂಡಿದ್ದರೂ ಈ ಆರ್ತಿಕ ಮುತ್ತಿಗೆ ಅಥವಾ ಯುದ್ದ ಮುಗಿದಿಲ್ಲ. ಻ದು ಮುಗಿಯಬಹುದೆಂಬ ನಿರೀಕ್ಷೆಯಲ್ಲಿ ಕ್ಯೂಬಾದ ಜನತೆಯ ಸಂತೋಷ. ಲ್ಯಾಟಿನ್ ಅಮೇರಿಕದ ೆಡಪಂಥೀಯ ತಿರುವಿನಿಂದ ಅಮೇರಿಕ ಮೂಲೆಗುಂಪಾಗುವ ಭೀತಿ ಎದುರಾದ ಅಮೇರಿಕದ ಕೃತ್ಯ ೆಂದು ಜನರ ಭಾವನೆ. ಅದೇ ಸಮಯದಲ್ಲಿ ವೆನೆಜುಏಲಾ ದೇಶದ ಎಡಪಂಥೀಯ ಸರ್ಕಾರವನ್ನು ಬೀಳಿಸಲು ಅಮೇರಿಕದ ದುಷ್ಕೃತ್ಯಗಳು ಮುಂದುವರೆದಿವೆ.
Posted on: Sat, 20 Dec 2014 10:59:35 +0000

Trending Topics



Recently Viewed Topics




© 2015